ಹಕ್ಕಿ ಜ್ವರದ ಆತಂಕ : ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಣೆ

Bird flu fears Alert Karnataka : ಬೆಂಗಳೂರು : ನೆರೆಯ ರಾಜ್ಯ ತಮಿಳುನಾಡಿನಲ್ಲಿ ಹಕ್ಕಿ ಜ್ವರ ದೃಢಪಟ್ಟಿದ್ದು ರಾಜ್ಯದಲ್ಲಿಯೂ ಆತಂಕ ಹೆಚ್ಚಾಗಿದೆ. ಚೆನ್ನೈನ ವಿವಿಧ ಭಾಗಗಳಲ್ಲಿ ನೂರಾರು ಕಾಗೆಗಳ ಮರಣ ಮೃದಂಗ ಹಿನ್ನೆಲೆಯಲ್ಲಿ ತಮಿಳುನಾಡು ಆರೋಗ್ಯ ಅಧಿಕಾರಿಗಳು ಹೈ ಅಲರ್ಟ್ ಘೋಷಣೆ ಮಾಡಿದ್ದರು. ಅಲ್ಲದೇ ಕಾಗೆಗಳ ಮೃತದೇಹಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು H5N1 ವೈರಸ್ ಇರುವಿಕೆ ದೃಢಪಟ್ಟಿದೆ.
ಚೆನ್ನೈನ ಆದ್ಯಾರ್ ಎಂಬಲ್ಲಿ ಮೊದಲ ಬಾರಿಗೆ ಕಾಗೆಗಳ ಸಾವು ಪ್ರಕರಣ ವರದಿಯಾಗಿತ್ತು. ಇದಾದ ಬಳಿಕ ಕೆಲವೇ ಸಮಯಗಳಲ್ಲಿ ಭಾರೀ ಸಂಖ್ಯೆಯಲ್ಲಿ ಕಾಗೆಗಳು ಮರಣವನ್ನಪ್ಪಿದೆ ಎಂಬುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರಯೋಗಾಲಯಕ್ಕೆ ಕಾಗೆಗಳ ಮೃತದೇಹಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪರೀಕ್ಷೆಯಲ್ಲಿ ಹಕ್ಕಿಜ್ವರ ಇರುವುದು ದೃಢಪಟ್ಟಿದೆ.
ಈ ಘಟನೆಯ ಬಳಿಕ ತಮಿಳುನಾಡು ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಸತ್ತ ಕಾಗೆಗಳು ಹಾಗೂ ಕೋಳಿಗಳನ್ನು ಸರ್ಕಾರದ ಮಾರ್ಗಸೂಚಿಗಳ ಅನುಸಾರವೇ ವಿಲೇವಾರಿ ಮಾಡಬೇಕು.
Also Read : ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ

ಮಾಲಿನ್ಯ ತಡೆಗಾಗಿ ಪಕ್ಷಿಗಳನ್ನು ಸುಡಬೇಕು ಇಲ್ಲವೇ ಆಳವಾದ ಗುಂಡಿಯಲ್ಲಿ ಹೂಳಬೇಕು ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲ್ಲದೇ ಜನಸಾಮಾನ್ಯರಿಗೂ ಯಾವುದೇ ಕಾರಣಕ್ಕೂ ಬರಿಗೈಯಲ್ಲಿ ಸತ್ತ ಪಕ್ಷಿಗಳನ್ನು ಸ್ಪರ್ಶಿಸದಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಸತ್ತ ಪಕ್ಷಿಗಳ ಸಮೀಪಕ್ಕೆ ತೆರಳುವುದನ್ನು ನಿಲ್ಲಿಸುವಂತೆ ಹಾಗೂ ನೀವಿರುವ ಸ್ಥಳದ ಸಮೀಪ ಪಕ್ಷಿಗಳ ಅಸಹಜ ಸಾವು ಬೆಳಕಿಗೆ ಬಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನಿಸಬೇಕು ಎಂದು ಸೂಚನೆ ನೀಡಲಾಗಿದೆ.
Also Read : ಜ್ಯೋತಿಷಿ ಕಮಲಾಕರ್ ಆಸೆಗೆ ಸ್ವಂತ ಮಗಳನ್ನೇ ಟಾರ್ಗೆಟ್ ಮಾಡಿದ್ದ ಸುಚಿತ್ರಾ ನಾಯ್ಕ್!
ಕೇಂದ್ರ ಪಶುಸಂಗೋಪನಾ ಸಚಿವಾಲಯವು ತಮಿಳುನಾಡು ಮುಖ್ಯ ಕಾರ್ಯದರ್ಶಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದೆ. ಕೋಳಿ ಸಾಕಣೆ ಕೇಂದ್ರಗಳು ಮತ್ತು ಮನುಷ್ಯರಿಗೆ ವೈರಸ್ ಹರಡುವುದನ್ನು ತಡೆಯಲು ಸಂಘಟಿತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ .
Bird flu fears Alert Karnataka : ಹಕ್ಕಿ ಜ್ವರ ಎಂದರೇನು ?
ಎಚ್5ಎನ್ 1 ವೈರಸ್ಗಳು ಹಕ್ಕಿಗಳ ದೇಹದಲ್ಲಿ ಕಾಣಿಸಿಕೊಂಡಾಗ ಹಕ್ಕಿ ಜ್ವರ ಉಂಟಾಗುತ್ತದೆ. ಮನುಷ್ಯರಿಗೆ ಈ ವೈರಸ್ನ ಅಪಾಯ ಕಡಿಮೆ. ಆದರೆ ರೋಗಪೀಡಿತ ಪಕ್ಷಿಗಳನ್ನು ಮುಟ್ಟುವುದರಿಂದ ಮನುಷ್ಯರಲ್ಲಿ ತೀವ್ರ ಜ್ವರ, ವಸಡುಗಳಲ್ಲಿ ರಕ್ತಸ್ರಾವ, ನಡುಕ, ಮೈ ಕೈ ನೋವು, ತಲೆನೋವು, ಗಂಟಲು ನೋವು, ಉಸಿರಾಟ ತೊಂದರೆಗಳು ಕಾಣಿಸಿಕೊಳ್ಳುತ್ತದೆ.
Bird flu fears Alert declared in Karnataka



