ಚಿಕ್ಶ‌ಮಗಳೂರು : ಅಯ್ಯಪ್ಪಸ್ವಾಮಿ ಮಾಲೆ ಧರಿಸಿದಕ್ಕೆ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶ ನಿರ್ಬಂಧ : ಹಿಂದೂಪರ ಸಂಘಟನೆಗಳಿಂದ ಆಕ್ರೋಶ

Chikmagalur Sabarimala Ayyappa Dress controversy : ಚಿಕ್ಶ‌ಮಗಳೂರು : ಶಬರಿಮಲೆ ಅಯ್ಯಪ್ಪನ ಮಾಲೆ ಧರಿಸಿ ಬಂದ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ತರಗತಿಯಿಂದ ಹೊರ ಹಾಕಿದ ಘಟನೆಯು ಚಿಕ್ಕಮಗಳೂರು ನಗರದ ಎಂಇಎಸ್​ ಕಾಲೇಜಿನಲ್ಲಿ ಸಂಭವಿಸಿದೆ.

ಅಯ್ಯಪ್ಪ ಸ್ವಾಮಿ ಮಾಲೆ ತೆಗೆದರೆ ಮಾತ್ರ ಕಾಲೇಜಿನೊಳಕ್ಕೆ ಪ್ರವೇಶ ಎಂದು ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿಗಳಿಗೆ ತಾಕೀತು ಮಾಡಿದ್ದು ಈ ಸಂಬಂಧ ಬಿಜೆಪಿ ಹಾಗೂ ವಿಶ್ವ ಹಿಂದೂಪರಿಷತ್​ ಮತ್ತು ಬಜರಂಗ ದಳ ಕಾರ್ಯಕರ್ತರು ಕಾಲೇಜಿಗೆ ಭೇಟಿ ನೀಡಿ ಮಾತಿನ ಚಕಮಕಿ ನಡೆಸಿದ್ದಾರೆ.

ಸಮವಸ್ತ್ರ ನೀತಿ ಪಾಲನೆ ನಮ್ಮ ಕಾಲೇಜಿನ ಮೂಲ ನಿಯಮಗಳಲ್ಲಿ ಒಂದು ಎಂದು ಕಾಲೇಜು ಆಡಳಿತ ಮಂಡಳಿ ವಾದಿಸಿದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಧಿಕಾರ ನಿಮಗ್ಯಾರಿಗೂ ಇಲ್ಲ ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ವಾದಿಸಿದ್ದಾರೆ.

ಕಪ್ಪು ವಸ್ತ್ರ ಧರಿಸಿ ಬಂದ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಕ್ಕೆ ಅವಕಾಶ ಕೊಡದ ಈ ಕಾಲೇಜಿನಲ್ಲಿ ಬುರ್ಖಾ ಹಾಕಿಕೊಂಡು ಬರುವ ವಿದ್ಯಾರ್ಥಿನಿಯರಿಗೆ ಹೇಗೆ ಅನುಮತಿ ನೀಡಲಾಗುತ್ತಿದೆ ? ಎಂದು ಹಿಂದೂ ಪರ ಸಂಘಟನೆಗಳು ಪ್ರಶ್ನೆ ಮಾಡಿವೆ.

ಇದನ್ನೂ ಓದಿ : ಶಿಕ್ಷಕರಿಗಿಲ್ಲ ವರ್ಗಾವಣೆ ಭಾಗ್ಯ, ಸರಕಾರದಿಂದ ಹೊಸ ಆದೇಶ

ಈ ವರ್ಷದಿಂದ ಮಾಲೆ ಧರಿಸಿ ಕಾಲೇಜಿಗೆ ಬರುವಂತಿಲ್ಲ ಎಂದು ಆಡಳಿತ ಮಂಡಳಿಯಿಂದ ನಿರ್ದೇಶನ ಬಂದಿದೆ. ಇದು ಸರ್ಕಾರದ ಆದೇಶವಲ್ಲ, ಕಾಲೇಜು ಆಡಳಿತ ಮಂಡಳಿ ಮಾಡಿಕೊಂಡಿರುವ ಆದೇಶ. ಎಷ್ಟೋ ಸರ್ಕಾರಿ ಅಧಿಕಾರಿಗಳೇ ಶಬರಿಮಲೆ ಮಾಲೆ ಧರಿಸುತ್ತಾರೆ.

ನಿಮ್ಮ ಕಾಲೇಜಿನಲ್ಲಿ ಇದೇನು ಹೊಸ ನಿಯಮ ಎಂದು ಕಾಲೇಜು ಪ್ರಾಂಶುಪಾಲರನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಾಂಶುಪಾಲರ ಕೊಠಡಿಯಲ್ಲಿಯೇ ಅಯ್ಯಪ್ಪ ಸ್ವಾಮಿ ಘೋಷಣೆ ಕೂಗಲು ಬಿಜೆಪಿ ಹಾಗೂ ಬಜರಂಗದಳ ಕಾರ್ಯಕರ್ತರು ಆರಂಭಿಸಿದ್ದು,ಪಟ್ಟು ಬಿಡದ ಹಿಂದೂ ಪರ ಸಂಘಟನೆಗಳ ಹಠಕ್ಕೆ ಮಣಿದ ಕಾಲೇಜು ಆಡಳಿತ ಮಂಡಳಿ ಕೊನೆಗೂ ಅಯ್ಯಪ್ಪ ಮಾಲೆ ಧರಿಸಿದ ವಿದ್ಯಾರ್ಥಿಗಳ ತರಗತಿ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ.

Chikmagalur Sabarimala Ayyappa Dress controversy MES College

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories