ದಕ್ಷಿಣ ಕನ್ನಡ ಮೂಲದ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಭಾರತದ ಉಪರಾಷ್ಟ್ರಪತಿ

ಮಂಗಳೂರು : ಭಾರತದ ಉಪರಾಷ್ಟ್ರಪತಿ (India Vice President) ಆಗಿದ್ದ ಜಗದೀಪ್‌ ಧನಕರ್‌ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಉಪರಾಷ್ಟ್ರಪತಿ ಹುದ್ದೆಗೆ ದಕ್ಷಿಣ ಕನ್ನಡ ಮೂಲದ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರ ಹೆಸರು ಕೇಳಿಬಂದಿದೆ.

2025ರ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಪ್ರಮುಖ ಅಭ್ಯರ್ಥಿಯಾಗಿ ಅಬ್ದುಲ್‌ ನಜೀರ್‌ ಅವರ ಹೆಸರು ಕೇಳಿಬಂದಿದೆ. ಸದ್ಯ ಆಂಧ್ರಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

India Vice President : ಜಸ್ಟಿಸ್ ಅಬ್ದುಲ್ ನಜೀರ್ ಎಲ್ಲೆಲ್ಲಿ ಸೇವೆ ಸಲ್ಲಿಸಿದ್ದಾರೆ

ವಕೀಲರಾಗಿ (1983-2003): ಅವರು 1983ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡು ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ನಡೆಸಿದರು.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ (2003-2017):

2003ರ ಮೇ 12ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

2004ರ ಸೆಪ್ಟೆಂಬರ್ 24ರಂದು ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾದರು.

ಭಾರತದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು (2017-2023):

2017ರ ಫೆಬ್ರವರಿ 17ರಂದು ಕರ್ನಾಟಕ ಹೈಕೋರ್ಟ್‌ನಿಂದ ನೇರವಾಗಿ ಸುಪ್ರೀಂ ಕೋರ್ಟ್‌ಗೆ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಇದು ಅಪರೂಪದ ನೇಮಕಾತಿಯಾಗಿತ್ತು.

2023ರ ಜನವರಿ 4ರಂದು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದರು.

ಆಂಧ್ರಪ್ರದೇಶದ ರಾಜ್ಯಪಾಲರು (2023ರಿಂದ ಪ್ರಸ್ತುತ):

ಸುಪ್ರೀಂ ಕೋರ್ಟ್‌ನಿಂದ ನಿವೃತ್ತಿಯಾದ ನಂತರ, 2023ರ ಫೆಬ್ರವರಿ 12ರಂದು ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಿಸಲಾಯಿತು.

India Vice President : ಯಾರು ಈ ಜಸ್ಟಿಸ್‌ ಅಬ್ದುಲ್‌ ನಜೀರ್‌?

ನಿವೃತ್ತ ನ್ಯಾಯಮೂರ್ತಿಯಾಗಿರುವ ‌ ಎಸ್. ಅಬ್ದುಲ್ ನಜೀರ್ ಅವರು 1958ರ ಜನವರಿ 5 ರಂದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಬಳಿಯ ಬೆಳುವಾಯಿಯಲ್ಲಿ ಜನಿಸಿದರು. ಅವರು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.

1983ರಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿ, ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಿದರು. 2003 ಮೇ 12 ರಂದು ಕರ್ನಾಟಕ ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

ಸೆಪ್ಟೆಂಬರ್ 24, 2004ರಂದು ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾದರು. ಫೆಬ್ರವರಿ 17, 2017ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗದೆ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆದ ಕೆಲವೇ ನ್ಯಾಯಾಧೀಶರಲ್ಲಿ ಇವರೂ ಒಬ್ಬರು.

Also Read : ನಾಳೆಯಿಂದ ಹಾಲು, ಬೇಕರಿ ಉತ್ಪನ್ನ ಸಿಗಲ್ಲ : ಹೇಗಿರುತ್ತೆ ಕರ್ನಾಟಕ ಬಂದ್‌ ?

ಪ್ರಮುಖ ತೀರ್ಪುಗಳು:

ಸುಪ್ರೀಂ ಕೋರ್ಟ್‌ನಲ್ಲಿ ಹಲವು ಮಹತ್ವದ ಪ್ರಕರಣ ಗಳಲ್ಲಿ ಭಾಗಿಯಾಗಿದ್ದರು. ಅಯೋಧ್ಯೆ-ಬಾಬರಿ ಮಸೀದಿ ವಿವಾದದ ಐವರು ಸದಸ್ಯರ ಪೀಠದಲ್ಲಿ ಇವರು ಒಬ್ಬರಾಗಿದ್ದರು.

ತ್ರಿವಳಿ ತಲಾಖ್ ಪ್ರಕರಣವನ್ನು ವಿಚಾರಣೆ ಮಾಡಿದ ಐವರು ನ್ಯಾಯಾಧೀಶರ ಪೀಠದಲ್ಲಿದ್ದ ಏಕೈಕ ಮುಸ್ಲಿಂ ನ್ಯಾಯಾಧೀಶರು ಇವರಾಗಿದ್ದರು.

ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಿದ ಒಂಬತ್ತು ನ್ಯಾಯಾಧೀಶರ ಪೀಠದಲ್ಲೂ ಅವರು ಸದಸ್ಯರಾಗಿದ್ದರು.

2016ರ ನೋಟು ಅಮಾನ್ಯೀಕರಣ ಪ್ರಕರಣದ ಸಂವಿಧಾನ ಪೀಠದ ನೇತೃತ್ವ ವಹಿಸಿದ್ದರು.

ಜಸ್ಟಿಸ್‌ ಅಬ್ದುಲ್ ನಜೀರ್ ಅವರು 2023ರ ಜನವರಿ 4ರಂದು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದರು. ನಿವೃತ್ತಿಯ ನಂತರ, 2023ರ ಫೆಬ್ರವರಿ 12ರಂದು ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಿಸಲಾಯಿತು.

Also Read : ಸ್ವರ್ಣ ನೂಪುರ 3ನೇ ವಾರ್ಷಿಕೋತ್ಸವ : ಯಕ್ಷ ಕಿನ್ನರ ಸಂಭ್ರಮ 2025

ಉಪರಾಷ್ಟ್ರಪತಿ ಆಗ್ತಾರಾ ಮಾಜಿ ನ್ಯಾಯಮೂರ್ತಿ

ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಸ್ಟಿಸ್‌ ಅಬ್ದುಲ್ ನಜೀರ್ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೆಸರುಗಳೂ ಉಪರಾಷ್ಟ್ರಪತಿ ಚುನಾವಣೆಯ ರೇಸ್‌ನಲ್ಲಿವೆ.

Dakshina Kannada Origin Justice S. Abdul Nazeer in Race for India Vice President Post in Kannada news

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories