ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ಲೆದರ್ ಶೂ, ಬೆಲ್ಟ್-ಬ್ಯಾಗ್ ದರ ಏರಿಕೆ – ಮಧ್ಯಮ ವರ್ಗಕ್ಕೆ ಮತ್ತೊಂದು ಬೆಲೆಬಾಧೆ

ಪೆಟ್ರೋಲ್​ ಹಾಗೂ ಡೀಸೆಲ್​ ದರ ನಿರಂತರವಾಗಿ ಏರಿಕೆಯಾಗುತ್ತಲೇ ಇರುವುದರಿಂದ ಎಲ್ಲಾ ಉತ್ಪನ್ನಗಳ ಸಾಗಣಿಕೆ ವೆಚ್ಚದಲ್ಲಿ ಏರಿಕೆ ಕಂಡುಬರುತ್ತಿದೆ. ಹೀಗಾಗಿ ಶ್ರೀ ಸಾಮಾನ್ಯರು ದಿನಕ್ಕೊಂದು ವಸ್ತುಗಳ ದರ ಏರಿಕೆ ಸುದ್ದಿ ಕೇಳುತ್ತಲೇ ಇದ್ದಾರೆ

ಪೆಟ್ರೋಲ್​ ಹಾಗೂ ಡೀಸೆಲ್​ ದರ ನಿರಂತರವಾಗಿ ಏರಿಕೆಯಾಗುತ್ತಲೇ ಇರುವುದರಿಂದ ಎಲ್ಲಾ ಉತ್ಪನ್ನಗಳ ಸಾಗಣಿಕೆ ವೆಚ್ಚದಲ್ಲಿ ಏರಿಕೆ ಕಂಡುಬರುತ್ತಿದೆ. ಹೀಗಾಗಿ ಶ್ರೀ ಸಾಮಾನ್ಯರು ದಿನಕ್ಕೊಂದು ವಸ್ತುಗಳ ದರ ಏರಿಕೆ ಸುದ್ದಿ ಕೇಳುತ್ತಲೇ ಇದ್ದಾರೆ.

ಇದೀಗ ಈ ಸಾಲಿಗೆ ಲೆದರ್​ ಶೂ, ಬೆಲ್ಟ್​ ಹಾಗೂ ಬ್ಯಾಗ್​ಗಳೂ ಸೇರ್ಪಡೆಯಾಗಿದೆ. ಸಾಗಣಿಕೆಯ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಹಳೆಯ ದರದಲ್ಲಿ ಲೆದರ್​ ಉತ್ಪನ್ನಗಳು ಮಾರಲು ಸಾಧ್ಯವಿಲ್ಲ ಎಂದು ವ್ಯಾಪಾರಿಗಳು ಅಭಿಪ್ರಾಯ ಹೊರಹಾಕುತ್ತಿದ್ದು , ಮಧ್ಯಮ ವರ್ಗದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದಂತಾಗಿದೆ.

ಶಾಲೆಗಳು ಆರಂಭವಾಗುವ ಈ ಸಂದರ್ಭದಲ್ಲಿ ಶೂ, ಬೆಲ್ಟ್​ ಹಾಗೂ ಶಾಲಾ ಬ್ಯಾಗ್​ಗಳ ಖರೀದಿ ಪ್ರಕ್ರಿಯೆ ಕೂಡ ಹೆಚ್ಚಿರುತ್ತದೆ. ಈ ಸಮಯದಲ್ಲಿ ಲೆದರ್​ ಉತ್ಪನ್ನಗಳ ಬೆಲೆ ಏರಿಕೆ ಕಂಡಿದ್ದು ಪೋಷಕರಿಗೆ ಶಾಕ್​ ಆಗಿದೆ. ಲೆದರ್​ ಉತ್ಪನ್ನಗಳು ಬಹುತೇಕ ಹೊರ ರಾಜ್ಯದ ಕಾರ್ಖಾನೆಗಳಲ್ಲಿಯೇ ತಯಾರಾಗುತ್ತಿರುವುದರಿಂದ ಸಾಗಣೆ ವೆಚ್ಚ ಮಿತಿಮೀರಿದ್ದು ಲೆದರ್ ಉತ್ಪನ್ನಗಳ ಬೆಲೆ ಮೇಲೆ ಶೇಕಡಾ 16ರಷ್ಟು ಏರಿಕೆ ನಿರೀಕ್ಷಿಸಬಹುದಾಗಿದೆ.

Also Read: ಜಾತಿಗಣತಿಯ ಅಂತಿಮ ವರದಿ ಸಿಎಂಗೆ ಸಲ್ಲಿಕೆ: ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರು ಅಗ್ರಸ್ಥಾನ, ವೀರಶೈವ-ಲಿಂಗಾಯತರಿಗೆ 2ನೇ ಸ್ಥಾನ

ಹೀಗೆ ದಿನಕ್ಕೊಂದು ವಸ್ತುಗಳ ಬೆಲೆ ಏರಿಕೆ ಕಾಣುತ್ತಿರುವುದು ಜನಸಾಮಾನ್ಯರ ನಿದ್ದೆಗೆಡಿಸಿದೆ. ಇದೇ ರೀತಿ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಹೋದರೆ,ಜೀವನ ನಡೆಸುವುದು ಹೇಗೆ ? ಎಂದು ಸಾರ್ವಜನಿಕರು ತಲೆಕೆಡಿಸಿಕೊಳ್ಳುವಂತೆ ಆಗಿದೆ. ಮೊದಲೇ ಮುಟ್ಟಿದ್ದೆಲ್ಲ ದುಬಾರಿ ಎನ್ನುವಂತಹ ಈ ಕಾಲದಲ್ಲಿ ಇದೀಗ ಚಿಕ್ಕ ಪುಟ್ಟ ವಸ್ತುಗಳು ಬೆಲೆ ಏರಿಕೆಯ ಶಾಕ್​ ನೀಡುತ್ತಿರುವುದು ಜನಸಾಮಾನ್ಯರ ತಲೆನೋವಿಗೆ ಕಾರಣವಾಗಿದೆ.

Effect of petrol-diesel price hike Leather shoes belts-bags prices rise – another price hit for the middle class

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories