HD Deve Gowda Wife Chennamma : ದೇವೇಗೌಡರ ಪತ್ನಿಯ ಮೇಲೆ ಆಸಿಡ್‌ ದಾಳಿ ನಡೆದಿದ್ಯಾಕೆ ? ಎರಡು ಬಾರಿ ಸಾವನ್ನೇ ಗೆದ್ದಿದ್ದ ಚೆನ್ನಮ್ಮ

ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಎಚ್.ಡಿ.ಕುಮಾರಸ್ವಾಮಿ ಅವರ ತಾಯಿಯೂ ಆಗಿರುವ ಚೆನ್ನಮ್ಮ ದೇವೇಗೌಡ ಅವರು ತಮ್ಮ ಕುಟುಂಬಕ್ಕೆ ನೆರಳಾಗಿ ನಿಂತವರು. ಪತಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದ ಅವಧಿಯಲ್ಲಿಯೂ ಅವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಿ, ಸಮಾಜಕ್ಕೆ ಆಸ್ತಿಯನ್ನಾಗಿಸಿದ್ದಾರೆ.

ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ (HD Deve Gowda Wife Chennamma) ಅವರು ಅನಾರೋಗ್ಯದ ಕಾರಣದಿಂದಾಗಿ ಇಂದು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಆದರೆ ಚೆನ್ನಮ್ಮ ಅವರು ಎರಡು ಬಾರಿ ಸಾವನ್ನೇ ಗೆದ್ದಿದ್ದರು. ಪರಮ ದೈವ ಭಕ್ತೆಯಾಗಿದ್ದ ಚೆನ್ನಮ್ಮ ಅವರ ಆಸಿಡ್‌ ದಾಳಿ ನಡೆದಿದ್ದು ಯಾಕೆ ಅನ್ನೋ ಡಿಟೇಲ್ಸ್‌ ಇಲ್ಲಿದೆ.

ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಎಚ್.ಡಿ.ಕುಮಾರಸ್ವಾಮಿ ಅವರ ತಾಯಿಯೂ ಆಗಿರುವ ಚೆನ್ನಮ್ಮ ದೇವೇಗೌಡ ಅವರು ತಮ್ಮ ಕುಟುಂಬಕ್ಕೆ ನೆರಳಾಗಿ ನಿಂತವರು. ಪತಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದ ಅವಧಿಯಲ್ಲಿಯೂ ಅವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಿ, ಸಮಾಜಕ್ಕೆ ಆಸ್ತಿಯನ್ನಾಗಿಸಿದ್ದಾರೆ.

ಚೆನ್ನಮ್ಮ ದೇವೇಗೌಡರ ಮೇಲೆ ಆಸಿಡ್‌ ದಾಳಿ ನಡೆದಿದ್ಯಾಕೆ ?

ಅದು 2001ನೇ ಇಸವಿಯ ಫೆಬ್ರವತಿ 21ನೇ ತಾರೀಕು. ಪರಮ ದೈವ ಭಕ್ತರಾಗಿರುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹರದನಹಳ್ಳಿ ದೇವೇಶ್ವರ ಸ್ವಾಮಿ ಮನೆ ದೇವರು. ಹೀಗಾಗಿ ವರ್ಷಂಪ್ರತಿ ಶಿವರಾತ್ರಿಯಂದು ಮನೆದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.

ಎಚ್.ಡಿ.ದೇವೇಗೌಡರು ಬ್ಯುಸಿಯಾಗಿದ್ದ ಕಾರಣದಿಂದಾಗಿ ಚೆನ್ನಮ್ಮ ಅವರು ತಮ್ಮ ಹಿರಿಯ ಪುತ್ರನಾಗಿರುವ ಎಚ್.ಡಿ.ರೇವಣ್ಣ ಹಾಗೂ ಸೊಸೆ ಭವಾನಿ ರೇವಣ್ಣ ಅವರ ಜೊತೆಗೆ ಹರದನಹಳ್ಳಿ ದೇವಸ್ಥಾನಕ್ಕೆ ಬಂದಿದ್ದರು. ದೇವರಿಗೆ ಪೂಜೆ ಸಲ್ಲಿಸುತ್ತಿದ್ದ ವೇಳೆಯಲ್ಲಿ ದೇವೇಗೌಡರ ಸಹೋದರ ಬಸವೇಗೌಡರ ಪುತ್ರ ಲೋಕೇಶ್‌ ಎಂಬಾತ ಪೂಜೆನ ನೆಪದಲ್ಲಿ ಚೆನ್ನಮ್ಮ ಅವರ ಮೇಲೆ ಆಸಿಡ್‌ ದಾಳಿ ನಡೆಸಿದ್ದ.

ಅದೃಷ್ಟವಶಾತ್‌ ಚೆನ್ನಮ್ಮ ಅವರು ಆಸಿಡ್‌ ದಾಳಿ ನಡೆದಿದ್ರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದರು. ಅಷ್ಟೇ ಅಲ್ಲದೇ ಸೊಸೆ ಭವಾನಿ ರೇವಣ್ಣ ಅವರ ಕೈಮೇಲೂ ಆಸಿಡ್‌ ದಾಳಿಯಿಂದ ಗಾಯವಾಗಿತ್ತು. ಕುಟುಂಬ ಕಲಹದ ಕಾರಣದಿಂದಲೇ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.

ಕೊರೊನಾ ಮಹಾಮಾರಿ ಗೆದ್ದು ಬಂದಿದ್ದ ಚೆನ್ನಮ್ಮ

ಕೊರೊನಾ ವೈರಸ್‌ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ದೇವೇಗೌಡರ ಪತ್ನಿ ಚೆನ್ನಮ್ಮ ಅವರನ್ನೂ ಕೂಡ ಇದೇ ಕೊರೊನಾ ಸೋಂಕು ಕಾಡಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚೆನ್ನಮ್ಮ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಇಂದು ಅವರು ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

hd deve gowda wife chennamma acid attack reason

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »