ಆಶಾಕಿರಣ ಯೋಜನೆ (Asha Kirana) : ರಾಜ್ಯದ 1.4 ಕೋಟಿ ಜನರಿಗೆ ಉಚಿತ ಕಣ್ಣಿನ ತಪಾಸಣೆ ನಿಮಗೂ ಬೇಕೆ ಈ ಸೌಲಭ್ಯ ? ಇಲ್ಲಿದೆ ಮಾಹಿತಿ

karnataka ashakirana scheme : ಬೆಂಗಳೂರು: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯದ ಜನರಿಗಾಗಿ ಜಾರಿಗೆ ತಂದಿರುವ ‘ಆಶಾಕಿರಣ’ (Asha Kirana) ಯೋಜನೆಯು ದೊಡ್ಡ ಮಟ್ಟದ ಯಶಸ್ಸು ಕಾಣುತ್ತಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ ಸುಮಾರು 1.4 ಕೋಟಿ ಜನರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ನಡೆಸಲಾಗಿದ್ದು, ಈ ಯೋಜನೆಯು ಈಗ ಜಾಗತಿಕ ಮಟ್ಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಗಮನವನ್ನೂ ಸೆಳೆದಿದೆ.

ಏನಿದು ಆಶಾಕಿರಣ (karnataka ashakirana scheme) ಯೋಜನೆ ?

‘ಅಂಧತ್ವ ಮುಕ್ತ ಕರ್ನಾಟಕ’ ನಿರ್ಮಾಣ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ಪ್ರಾರಂಭಿಸಿದರು. ದೃಷ್ಟಿ ದೋಷದಿಂದ ಬಳಲುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅವರ ಮನೆ ಬಾಗಿಲಿಗೇ ಹೋಗಿ ಉಚಿತವಾಗಿ ಚಿಕಿತ್ಸೆ ನೀಡುವುದು ಇದರ ಮುಖ್ಯ ಉದ್ದೇಶ.

karnataka ashakirana scheme free eye checkup and spectacles news

ಆಶಾಕಿರಣ ಯೋಜನೆಯಡಿ ಸಿಗುವ ಸೌಲಭ್ಯಗಳೇನು ?

  • ಮನೆ ಬಾಗಿಲಿಗೆ ತಪಾಸಣೆ: ಆಶಾ ಕಾರ್ಯಕರ್ತೆಯರು ನಿಮ್ಮ ಮನೆಗೇ ಬಂದು ಪ್ರಾಥಮಿಕ ಕಣ್ಣಿನ ಪರೀಕ್ಷೆ ನಡೆಸುತ್ತಾರೆ.
  • ಉಚಿತ ಕನ್ನಡಕ: ತಪಾಸಣೆ ವೇಳೆ ದೃಷ್ಟಿ ದೋಷ ಪತ್ತೆಯಾದವರಿಗೆ ಸರ್ಕಾರದಿಂದ ಉಚಿತವಾಗಿ ಉತ್ತಮ ಗುಣಮಟ್ಟದ ಕನ್ನಡಕಗಳನ್ನು ವಿತರಿಸಲಾಗುತ್ತದೆ.
  • ಉಚಿತ ಶಸ್ತ್ರಚಿಕಿತ್ಸೆ: ಕಣ್ಣಿನ ಪೊರೆ (Cataract) ಸಮಸ್ಯೆ ಇರುವವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.
  • ಶಾಶ್ವತ ದೃಷ್ಟಿ ಕೇಂದ್ರಗಳು: ಇತ್ತೀಚೆಗಷ್ಟೇ ರಾಜ್ಯಾದ್ಯಂತ 393 ಶಾಶ್ವತ ಆಶಾಕಿರಣ ದೃಷ್ಟಿ ಕೇಂದ್ರಗಳನ್ನು ಉದ್ಘಾಟಿಸಲಾಗಿದ್ದು, ಸಾರ್ವಜನಿಕರು ಯಾವುದೇ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬಹುದು.

Also Read : ನಾಯಿ ನೆಕ್ಕುವುದರಿಂದ ಪ್ರಾಣಕ್ಕೆ ಕುತ್ತು ಬರಬಹುದು ಎಚ್ಚರ ! ಏನಿದು ‘Dog Lick Sepsis’? ಲಕ್ಷಣ ಮತ್ತು ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ

24.50 ಲಕ್ಷ ಜನರಲ್ಲಿ ದೃಷ್ಟಿದೋಷ ಪತ್ತೆ

ಈ ಯೋಜನೆಯಡಿ ತಪಾಸಣೆಗೊಳಗಾದವರಲ್ಲಿ 24.50 ಲಕ್ಷ ಜನರಲ್ಲಿ ದೃಷ್ಟಿ ದೋಷ ಇರುವುದು ಪತ್ತೆಯಾಗಿದೆ. ಈಗಾಗಲೇ ಲಕ್ಷಾಂತರ ಜನರಿಗೆ ಉಚಿತ ಕನ್ನಡಕ ಮತ್ತು ಸಾವಿರಾರು ಮಂದಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಕೇವಲ ಸಾಮಾನ್ಯ ಜನರಲ್ಲದೆ, ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರಿಗೂ ‘ಸಾರಿಗೆ ಆಶಾಕಿರಣ’ ಎಂಬ ವಿಶೇಷ ಅಭಿಯಾನದ ಮೂಲಕ ದೃಷ್ಟಿ ತಪಾಸಣೆ ನಡೆಸಲಾಗುತ್ತಿದೆ.

ಯಾರು ಈ ಆಶಾಕಿರಣ ಯೋಜನೆ ಸೌಲಭ್ಯ ಪಡೆಯಬಹುದು ?

ಕರ್ನಾಟಕದ ಪ್ರತಿಯೊಬ್ಬ ನಾಗರಿಕರಿಗೂ ಈ ಯೋಜನೆಯಡಿ ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವ ಹಕ್ಕಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಇದು ಸಂಜೀವಿನಿಯಾಗಿದೆ.

ಕರ್ನಾಟಕದ ಆಶಾಕಿರಣ ಮಾದರಿಯನ್ನು ಇತರೆ ರಾಜ್ಯಗಳೂ ಅಳವಡಿಸಿಕೊಳ್ಳಲು ಮುಂದಾಗಿವೆ. ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಅಥವಾ ನಿಮಗೆ ದೃಷ್ಟಿ ಸಮಸ್ಯೆ ಕಾಡುತ್ತಿದ್ದರೆ, ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ದೃಷ್ಟಿ ಕೇಂದ್ರಕ್ಕೆ ಭೇಟಿ ನೀಡಿ ಈ ಉಚಿತ ಸೌಲಭ್ಯದ ಲಾಭ ಪಡೆಯಿರಿ.

Also Read : ಹದಿಹರೆಯದ ಹೆಣ್ಣುಮಕ್ಕಳಲ್ಲಿ ಖಿನ್ನತೆ: ಪೋಷಕರು ನಿರ್ಲಕ್ಷಿಸಬಾರದ 6 ಪ್ರಮುಖ ಲಕ್ಷಣಗಳು

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories