ವಾಹನ ಸವಾರರಿಗೆ ಗುಡ್ ನ್ಯೂಸ್! ಸಂಚಾರ ನಿಯಮ ಉಲ್ಲಂಘನೆ ದಂಡ ಬಾಕಿ ಪಾವತಿಸಲು ಶೇ 50 ರಿಯಾಯಿತಿ ಘೋಷಣೆ
Bangalore Traffic Fine: ಕರ್ನಾಟಕ ರಾಜ್ಯ ಸರ್ಕಾರ ಗುರುವಾರ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ವಾಹನ ಸವಾರರಿಗೆ ದಂಡ ಪಾವತಿಸಲು ವಿಶೇಷ ರಿಯಾಯಿತಿ ಯೋಜನೆಯನ್ನು ಘೋಷಿಸಿದೆ.
ಅದರ ಪ್ರಕಾರ ವಾಹನ ಮಾಲೀಕರು ತಮ್ಮ ಬಾಕಿ ಇರುವ ಸಂಚಾರ ದಂಡದ ಮೂಲ ಮೊತ್ತದ ಶೇ 50ರಷ್ಟು ರಿಯಾಯಿತಿ ಅಡಿ ದಂಡ ಪಾವತಿಸಲು ಅವಕಾಶ ಕಲ್ಪಿಸಿದೆ.
ಈ ಆದೇಶದ ಪ್ರಕಾರ ಪೊಲೀಸ್ ಇಲಾಖೆಯಿಂದ ಇ–ಚಲನ್ ಅಡಿಯಲ್ಲಿ ದಾಖಲಾದ ದಂಡವನ್ನು ಪಾವತಿಸದೆ ಇರುವ ಸವಾರರು ಇದರ ಸದುಪಯೋಗ ಪಡೆಯಬಹುದಾಗಿದೆ.
ಇದು ಸಂಚಾರ ನಿಯಮಗಳನ್ನು ಸುಧಾರಿಸುವುದರ ಜೊತೆಗೆ ನಾಗರಿಕರು ದೀರ್ಘಕಾಲದಿಂದ ಬಾಕಿ ಉಳಿಸಿಕೊಂಡಿರುವ ದಂಡವನ್ನು ಪಾವತಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಹೇಳಿದೆ.
ಈ ಯೋಜನೆ ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರವರೆಗೆ ಮಾನ್ಯವಾಗಿರುತ್ತದೆ. ರಿಯಾಯಿತಿಯಲ್ಲಿ ದಂಡ ಪಾವತಿಸುವ ಅವಕಾಶವು ಫೆಬ್ರವರಿ 11, 2023 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಪ್ರಕಟರಣಗಳಿಗೆ ಅನ್ವಯಿಸಲಿದೆ.
ಆದರೆ, ಫೆಬ್ರವರಿ 12, 2023 ರ ನಂತರದ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲ. 2023ರಲ್ಲಿ ಕರ್ನಾಟಕ ಸರ್ಕಾರವು ಶೇ 50 ರಿಯಾಯಿತಿಯಲ್ಲಿ ದಂಡ ಪಾವತಿಸಲು ಮೊದಲ ಬಾರಿಗೆ ಅವಕಾಶವನ್ನು ಕಲ್ಪಿಸಿತ್ತು. ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ವಾಹನ ಸವಾರರು ಹೆಚ್ಚು ಆಸಕ್ತಿ ತೋರಿಸಿದ್ದರು. ಆ ಅವಧಿಯಲ್ಲಿ ಸುಮಾರು 52 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಂಡಿದ್ದವು.
ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನ ಜೈಲು : ಜಾಮೀನು ಅರ್ಜಿ ವಜಾ, ಮುಂದಿನ ಆಯ್ಕೆಗಳೇನು ?
Bangalore Traffic Fine: ದಂಡ ಪಾವತಿಸುವುದು ಹೇಗೆ?
ಬೆಂಗಳೂರಿನಲ್ಲಿ ದಂಡ ಪಾವತಿಸಲು ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ವೆಬ್‌ಸೈಟ್‌ಗಳಲ್ಲಿ ವಿವರವನ್ನು ಪಡೆದುಕೊಂಡು ದಂಡ ಪಾವತಿಸಬಹುದಾಗಿದೆ. ಆದರೆ ಜಿಲ್ಲೆಗಳಲ್ಲಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ದಂಡ ಪಾವತಿಸಬಹುದಾಗಿದೆ. ಆನ್‌ಲೈನ್ ಮೂಲಕ ಕರ್ನಾಟಕ ಸ್ಟೇಟ್ ಪೊಲೀಸ್ ಆ್ಯಪ್, ಅಸ್ತ್ರಂ ಆ್ಯಪ್ ಮುಖಾಂತರವೂ ದಂಡ ಪಾವತಿಸಬಹುದಾಗಿದೆ.
ಇದನ್ನೂ ಓದಿ: Rapido : ಜಾಹೀರಾತುಗಳಲ್ಲಿ ತಪ್ಪು ಸಂದೇಶ : ರ್ಯಾಪಿಡೋ ಕಂಪನಿಗೆ ₹10 ಲಕ್ಷ ದಂಡ
(Karnataka government is offering a 50 percent discount on traffic fines)



