ಬೆಂಗಳೂರು : ಕಲುಷಿತ ನೀರಿನಿಂದ ಬರುವ ಕಾಯಿಲೆಗಳ (Karnataka Waterborne Diseases) ಪೈಕಿ ಸಂಪೂರ್ಣ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ. ಸಂಪೂರ್ಣ ದೇಶದಲ್ಲಿ ಟೈಫಾಯ್ಡ್ ಪ್ರಕರಣ ದಾಖಲಿಸುವುದರಲ್ಲಿ ಮೂರನೇ ಸ್ಥಾನ ಹಾಗೂ ಅತಿಸಾರ ಪ್ರಕರಣದಲ್ಲಿ 5ನೇ ಸ್ಥಾನವನ್ನು ನಮ್ಮ ರಾಜ್ಯ ಪಡೆದುಕೊಂಡಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಬೇಸಿಗೆಯಲ್ಲಿ ಈ ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು ಆತಂಕ ಮೂಡಿಸಿದೆ.
2021ರಿಂದ 25ರ ಅವಧಿಯಲ್ಲಿ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಟೈಫಾಯ್ಡ್ ಹಾಗೂ ಅತಿಸಾರ ಪ್ರಕರಣಗಳು ಬೆಳಕಿಗೆ ಬಂದಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಜನರು ಈ ಕಾಯಿಲೆಗೆ ತುತ್ತಾಗಿದ್ದಾರೆ. ಬೇಸಿಗೆ ತಿಂಗಳಲ್ಲಿ ಪ್ರತಿ ದಿನ ಸರಾಸರಿ 10 ಪ್ರಕರಣಗಳು ವರದಿಯಾಗುತ್ತಿರುವುದು ಮತ್ತಷ್ಟುಆತಂಕ ಮೂಡಿಸಿದೆ.
Also Read : ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಕಡಿತ? ಅನರ್ಹರ ಪಟ್ಟಿ ಕಡಿತಕ್ಕೆ ಸರ್ಕಾರ ಮುಂದು
ಟ್ಯಾಂಕರ್ ವಾಟರ್. ಡ್ರೈನೇಜ್ ಮಿಶ್ರಿತ ನೀರು, ಪ್ಯಾಕೇಜ್ಡ್ ವಾಟರ್ ಪೈಪ್ಲೈನ್ಗಳಲ್ಲಿ ಕಲುಷಿತ ನೀರು ಇವೆಲ್ಲರೂ ಸಾಂಕ್ರಾಮಿಕ ರೋಗಗಳ ಹರಡುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಕ್ಕಳು ಮತ್ತು ಹಿರಿಯರೇ ಹೆಚ್ಚಾಗಿ ಈ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
Also Read : ಬೆಂಗಳೂರು ನಮ್ಮ ಮೆಟ್ರೋದಲ್ಲಿ ಮದ್ಯದ ಬಾಟಲಿ ಕೊಂಡೊಯ್ಯಲು ಅನುಮತಿ!
Karnataka Waterborne Diseases Typhoid cases in Bengaluru Health Ministry Report 2026


