ಕಿಲ್ಲರ್‌ ಕಾಂಗ್ರೆಸ್‌ ಪೋಸ್ಟರ್‌ : ಸರಕಾರಕ್ಕೆ ಶೋಭಾ ಕರಂದ್ಲಾಜೆ ಟಕ್ಕರ್‌

Killer Congress poster : ಬೆಂಗಳೂರು : ಕರ್ನಾಟಕದಲ್ಲಿ ಅತ್ಯಾಚಾರ, ಕೊಲೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕಿಲ್ಲರ್‌ ಕಾಂಗ್ರೆಸ್‌ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಕರ್ನಾಟಕದ ಕಾಂಗ್ರೆಸ್‌ ಸರಕಾರಕ್ಕೆ ಟಕ್ಕರ್‌ ಕೊಟ್ಟಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ಕಿಲ್ಲರ್ ಕಾಂಗ್ರೆಸ್ ಹೆಸರಿನ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಸರಕಾರಕ್ಕೆ ಟಕ್ಕರ್‌ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಹೆಣ್ಣುಮಕ್ಕಳ ಕೊಲೆ, ಅತ್ಯಾಚಾರ, ಅಧಿಕಾರಿಗಳ ಆತ್ಮಹತ್ಯೆ ಹಿನ್ನೆಲೆಯಲ್ಲಿ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಸಚಿವರು ಇದ್ದಾರೋ ಇಲ್ವೋ ಗೊತ್ತಿಲ್ಲ. ಅವರಿಗೆ ಏನೇ ಕೇಳಿದರೂ ಗೊತ್ತಿಲ್ಲ ಅಂತಾರೆ, ಗೊತ್ತಿಲ್ಲ ಅನ್ನೋದು ಅವರ ಫಿಕ್ಸೆಡ್ ಉತ್ತರ. ಜಿಲ್ಲೆಗಳಿಗೆ ಹೋಗಿ ಸಭೆ ಮಾಡ್ತಾರಾ ಗೊತ್ತಿಲ್ಲ. ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಅಂತ ಗೃಹ ಸಚಿವರಿಗೆ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಪೊಲೀಸರ ಟೋಪಿ ಬದಲಾಯಿಸೋದು ಯೋಚನೆ ಮಾಡ್ತಾರೆ, ಕಾನೂನು ಕಾಪಾಡೊಪ ಯೋಚನೆ ಇಲ್ಲ. ಸಿಎಂ ಆಕಾಶದಲ್ಲಿ ಓಡಾಡ್ತಾರೆ, ನೆಲದಲ್ಲಿ ಏನಾಗ್ತಿದೆ ಅಂತ ಅವರಿಗೂ ಗೊತ್ತಿಲ್ಲ. ಇದರ ಪರಿಣಾಮ ಹೆಣ್ಣುಮಕ್ಕಳ ಅತ್ಯಾಚಾರ, ಕೊಲೆ ಹೆಚ್ಚಾಗಿದೆ. ಅಧಿಕಾರಿಗಳು ಟ್ರಾನ್ಸ್‌ಫರ್ ಗೆ ಹಣ ಕೊಡ್ತಿದ್ದಾರೆ, ಹಣ ಎಲ್ಲಿ ಸಿಗುತ್ತೆ ಅಲ್ಲಿಗೆ ಟ್ರಾನ್ಸ್‌ಫರ್ ಆಗ್ತಾರೆ ಎಂಬ ಆರೋಪ ಮಾಡಿದ್ದಾರೆ.

ಕರ್ನಾಟಕದಲ್ಲಿ ಹೆಣ್ಣುಮಕ್ಕಳಿಗಿಲ್ಲ ರಕ್ಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲೆಯಲ್ಲಿಯೇ ಬಾಲಕಿ ಅತ್ಯಾಚಾರ, ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಆಯ್ತು. ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ದೌರ್ಜನ್ಯ ಆಯ್ತು. ಉಪನ್ಯಾಸಕರು ಅತಿಥಿ ಉಪನ್ಯಾಸಕಿ ಮೇಲೆ ಅತ್ಯಾಚಾರ ಮಾಡ್ತಾರೆ. ಮಲತಂದೆ ಮಗಳ ಮೇಲೆ ಅತ್ಯಾಚಾರ ಮಾಡ್ತಾನೆ, ಬಿಹಾರದ ಕುಟುಂಬ, ಒರಿಸ್ಸಾದ ಕುಟುಂಬಗಳ ಮಕ್ಕಳನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡ್ತಾರೆ. ದುರುಳರಿಗೆ ಇಷ್ಟು ಧೈರ್ಯ ಹೇಗೆ ಬಂತು ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಸರಕಾರ ಸತ್ತಿದೆ. ಅದಕ್ಕೆ ಅತ್ಯಾಚಾರಿಗಳಿಗೆ ಅಷ್ಟೊಂದು ಧೈರ್ಯ. ಕಾಂಗ್ರೆಸ್‌ ಅವರು ಅಧಿಕಾರ ಹಸ್ತಾತಂತರದ ಕಚ್ಚಾಟದಲ್ಲಿ ತೊಡಗಿದ್ದಾರೆ. ಅಧಿಕಾರಿಗಳ ಆತ್ಮಹತ್ಯೆ ನಡೀತಿದೆ. ಗುತ್ತಿಗೆದಾರರು ಕಮೀಷನ್ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಹೆಣ್ಣುಮಕ್ಕಳ ಪ್ರಾಣ, ಮಾನಕ್ಕೆ ಗ್ಯಾರಂಟಿ ಯಾರು? ಎಂದಿದ್ದಾರೆ.

ಮನೆಯಿಂದ ಆಚೆ ಹೋದರೆ ಹೆಣ್ಣುಮಕ್ಕಳ ಪ್ರಾಣಕ್ಕೆ ಗ್ಯಾರಂಟಿ ಇಲ್ಲ. ಇಷ್ಟು ವೀಕ್ ಗೃಹ ಮಂತ್ರಿ ಇಟ್ಕೊಂಡು ಹೇಗೆ ರಾಜ್ಯ ನಡೆಸ್ತೀರಿ ? ಸುಹಾಸ್ ಶೆಟ್ಟಿ ಹತ್ಯೆ ಆಯ್ತು. ಎನ್ಐಎ ವರದಿ ಬಂದಿದೆ. ಧರ್ಮ, ಜಾತಿ ಹೆಸರಲ್ಲಿ ಕೊಲೆಗಡುಕತ ರಕ್ಷಣೆ ಮಾಡ್ತಿದ್ದೀರಿ. ರಸ್ತೆಗುಂಡಿಗಳಲ್ಲಿ ಬಿದ್ದು ವಾಹನ ಸವಾರರು, ಜನ ಸಾಯ್ತಿದ್ದಾರೆ. ಟ್ರಾನ್ಸ್‌ಫರ್, ಅಪಾಯಿಂಟ್ಮೆಂಟ್ ಚಕ್ರದಲ್ಲಿ ಬಿದ್ದು ಅಧಿಕಾರಿಗಳು ಹಾಳಾಗಿದ್ದಾರೆ. ಯಾರೂ ಯಾರಿಗೂ ಕೇರ್ ಮಾಡ್ತಿಲ್ಲ ಎಂದಿದ್ದಾರೆ.

ಮಹಿಳೆಯರಿಗೆ ರಕ್ಷಣೆ ಕೊಡಿ. ನಿಮ್ಮ ಕುರ್ಚಿ ಕಲಹ ದೂರ ಇಡಿ. ಯಾರನ್ನು ಸಿಎಂ ಮಾಡ್ತೀರೋ ನಮಗೆ ಗೊತ್ತಿಲ್ಲ. ಯಾರಾದ್ರೂ ಸಿಎಂ ಆಗಿ ಮೊದಲು ಮಹಿಳೆಯರಿಗೆ ರಕ್ಷಣೆ ಕೊಡಿ. ನಾನು ರಾಜ್ಯದ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ಕೇಳ್ತಿದೀನಿ ನನಗೆ ರಕ್ಷಣೆ ಕೊಡ್ತೀರಾ ? ನಮ್ಮ ಪ್ರಾಣಕ್ಕೆ ಗ್ಯಾರಂಟಿ ಕೊಡ್ತೀರಾ ? ಎಂದಿದ್ದಾರೆ.

ಗೃಹಸಚಿವರಿಗೆ ಅಧಿಕಾರಿಗಳ ಮೇಲೆ ಹೋಲ್ಡ್‌ ಇಲ್ಲ

ಗೃಹ ಸಚಿವರಿಗೆ ಯಾವ ಅಧಿಕಾರಿಗಳ ಮೇಲೂ ಹೋಲ್ಡ್ ಇಲ್ಲ. ಸಿಎಂ ಜಿಲ್ಲೆಯಲ್ಲಿ ಅತ್ಯಾಚಾರ ಆಯ್ತು, ಕ್ರಮ ಏನು ? ಸಿಎಂ ಅವರೇ ನಿಮ್ಮ ಕುರ್ಚಿ ಉಳಿಸಕೊಳ್ಳಿ ಅಥವಾ ಬಿಡಿ ನಮಗೆ ಸಂಬಂಧ ಇಲ್ಲ. ಆದ್ರೆ ರಾಜ್ಯದ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಫ್ರಿಡ್ಜ್ ನಲ್ಲಿ ಪೀಸ್ ಪೀಸ್ ಮಾಡಿ ಹೆಣ್ಣು ಮಗಳ ದೇಹ ಇಟ್ರು, ಏನೂ ಕ್ರಮ ಆಗಲಿಲ್ಲ. ನಂತರ ಸೂಟ್‌ಕೇಸ್ ನಲ್ಲಿ ದೇಹ ಪೀಸ್ ಮಾಡಿ ಹಾಕಿದ್ರು, ದೇಹ ಪೀಸ್ ಮಾಡಿ ಕಸದ ಲಾರಿಯಲ್ಲೂ ಬಿಸಾಕಿದ್ರು. ಏನಾಗ್ತಿದೆ ರಾಜ್ಯದಲ್ಲಿ ? ಸರ್ಕಾರಕ್ಕೆ ಏನಾಗಿದೆ ? ಸರ್ಕಾರಕ್ಕೆ ಸ್ಪರ್ಶ, ಕಣ್ಣು, ಕಿವಿ ಇದೆಯೋ ? ಎಂದಿದ್ದಾರೆ.

ಕರ್ನಾಟಕದ ಸಂಸದರು ಕೇಂದ್ರ ಸರಕಾರದ ಬಳಿ ಅನುದಾನಕ್ಕೆ ಮಾತನಾಡುವುದಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರ ಆರೋಪಕ್ಕೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯದ ಜನರ ಗಮನ ಬೇರೆ ಕಡೆಗೆ ಸೆಳೆಯಲು ಸಿಎಂ, ಡಿಸಿಎಂ ಶತ ಪ್ರಯತ್ನ ಮಾಡ್ತಿದ್ದಾರೆ. ಜಿಎಸ್‌ಟಿ ಪರಿಹಾರ ಎಷ್ಟು ಸಿಕ್ಕಿದೆ, ತೆರಿಗೆ ಪಾಲು ಎಷ್ಟಿದೆ, ಎಷ್ಟು ಅನುದಾನ ಬಂದಿದೆ ? ಹಿಂದೆ ಎಷ್ಟು ಅನುದಾನ ಬರ್ತಿತ್ತು? ಈಗ ಎಷ್ಟು ಬರ್ತಿದೆ? ಇದೆಲ್ಲವನ್ನೂ ನಾನು ಮುಂದಿನ ವಾರ ಸುದ್ದಿಗೋಷ್ಟಿ ಮಾಡಿ ಅಂಕಿಅಂಶ ಕೊಡ್ತೇನೆ ಎಂದು ಸವಾಲು ಹಾಕಿದ್ದಾರೆ.

ಪದೇಪದೇ ಕೇಂದ್ರದ ಬಗ್ಗೆ ಮಾತಾಡಿ ರಾಜ್ಯದ ಸಮಸ್ಯೆಗಳಿಂದ ಜನರನ್ನು ಡೈವರ್ಟ್ ಮಾಡೋ ಪ್ರಯತ್ನ ಮಾಡ್ತಿದ್ದಾರೆ. ರಾಜ್ಯದ ಅಭಿವೃದ್ಧಿ, ಅನುದಾನ ಬಗ್ಗೆ ನಾವು ನಿರಂತರವಾಗಿ ಮಾತಾಡ್ತಿದೀವಿ. ಒಬ್ಬೇ ಒಬ್ಬ ಎಂಪಿಯೂ ಇಲ್ಲದ ರಾಜ್ಯಕ್ಕೂ ಮೋದಿಯವರು ಅನುದಾನ ಕೊಡ್ತಾರೆ. ಯಾಕೆ ಕಾಂಗ್ರೆಸ್ ನವ್ರು ಕೇಂದ್ರದ ಬಳಿ ಹೋಗಿ ಅನುದಾನ ಕೇಳೋದಿಲ್ಲ? ರಾಜ್ಯ ಕಾಂಗ್ರೆಸ್ ಅತ್ಯಂತ ಕ್ಷುಲ್ಲಕ ರಾಜಕಾರಣ ಮಾಡ್ತಿದೆ, ಇದು ಚೀಪ್ ಪಾಲಿಟಿಕ್ಸ್ ಎಂದಿದ್ದಾರೆ.

ರಾಜ್ಯದಲ್ಲಿ ಪರ್ಸೆಂಟೇಜ್ ಸರಕಾರ

ಬೆಂಗಳೂರಿನಲ್ಲಿ ಚದರ ಅಡಿಗೆ ನೂರು ರೂ ತಗೊಳ್ಳೋ ಕಮೀಷನ್ ಬುದ್ಧಿ ತೆಲಂಗಾಣಕ್ಕೂ ಇವರು ಕಲಿಸಿದ್ದಾರೆ. ಇದು ನಿಮ್ಮ ರಾಜಕಾರಣ. ಯುಪಿಎ ವೇಳೆ ಎಷ್ಟು ಅನುದಾನ ಬರ್ತಿತ್ತು? ಈಗೆಷ್ಟು ಬರ್ತಿದೆ ಅಂತ ಸಿಎಂ ಅಂಕಿ ಅಂಶ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

Killer Congress poster: Shobha Karandlaje hits out at the government

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories