ಜನತೆಗೆ ಕೆಎಂಎಫ್ ಶಾಕ್ : ಜೇಬು ಸುಡುತ್ತಿದೆ ತುಪ್ಪದ ಬೆಲೆ, ಹಾಲಿನ ಬೆಲೆ ಏರಿಕೆ ?

ಬೆಂಗಳೂರು: ರಾಜ್ಯದ ಜನತೆಗೆ ಕೆಎಂಎಫ್ ಮತ್ತೊಮ್ಮೆ ಜೇಬು ಸುಡುವಂತೆ ಮಾಡಿದೆ. ಪ್ರತಿ ಲೀಟರ್ ತುಪ್ಪದ ಬೆಲೆಯನ್ನು 90 ರೂಪಾಯಿಗಳಿಗೆ ಏರಿಕೆ ಮಾಡುವ ಮೂಲಕ ಜನತೆಗೆ ಶಾಕ್ ನೀಡಿದೆ. […]

kmf ghee price hike

ಬೆಂಗಳೂರು: ರಾಜ್ಯದ ಜನತೆಗೆ ಕೆಎಂಎಫ್ ಮತ್ತೊಮ್ಮೆ ಜೇಬು ಸುಡುವಂತೆ ಮಾಡಿದೆ. ಪ್ರತಿ ಲೀಟರ್ ತುಪ್ಪದ ಬೆಲೆಯನ್ನು 90 ರೂಪಾಯಿಗಳಿಗೆ ಏರಿಕೆ ಮಾಡುವ ಮೂಲಕ ಜನತೆಗೆ ಶಾಕ್ ನೀಡಿದೆ.

ಕೆಲವೇ ದಿನಗಳ ಹಿಂದಷ್ಟೇ ಜಿಎಸ್ಟಿ ದರ ಇಳಿಕೆ ಬಳಿಕ ನಂದಿನಿ ತುಪ್ಪ ಪ್ರತಿ ಲೀಟರ್ಗೆ 40 ರೂಪಾಯಿ ಇಳಿಕೆ ಕಂಡಿತ್ತು. ಆದರೆ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಎಂಎಫ್ ರಾಜ್ಯದ ಜನತೆಗೆ ಈ ಶಾಕ್ ನೀಡಿದೆ.

40 ರೂಪಾಯಿ ಬೆಲೆ ಇಳಿಕೆ ಬಳಿಕ ಲೀಟರ್ ಗೆ 610 ರೂಪಾಯಿ ದರದಲ್ಲಿ ನಂದಿನಿ ತುಪ್ಪ ಮಾರುಕಟ್ಟೆಗಳಲ್ಲಿ ಲಭ್ಯವಿತ್ತು.

ಆದರೆ ಬೆಲೆ ಏರಿಕೆ ಬಳಿಕ ಇದೀಗ ನಂದಿನಿ ಪ್ರತಿ ಲೀಟರ್ ತುಪ್ಪದ ಬೆಲೆ ಬರೋಬ್ಬರಿ 700 ರೂಪಾಯಿ ತಲುಪಿದೆ.ನಿನ್ನೆಯಿಂದಲೇ ಪರಿಷ್ಕೃತ ತುಪ್ಪದ ಬೆಲೆ ಜಾರಿಗೆ ಬಂದಿದೆ.

ಜಾಗತಿಕ ಮಟ್ಟದಲ್ಲಿ ಬೇಡಿಕೆ ಜಾಸ್ತಿ ಹಿನ್ನೆಲೆಯಲ್ಲಿ ದರ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ತಿಳಿಸಿದೆ.

ಇನ್ನು ನಂದಿನಿ ತುಪ್ಪದ ಬೆಲೆ ಯಾವುದಕ್ಕೆ ಎಷ್ಟೆಷ್ಟು ಅನ್ನೋದನ್ನು ನೋಡೋದಾದ್ರೆ.. 50 ಎಂ.ಎಲ್ ತುಪ್ಪದ ಬಾಟಲಿ 47 ರೂಪಾಯಿಗೆ ಮಾರಾಟವಾಗಲಿದೆ.

ಅಂತೆಯೇ 100 ಎಂಲ್ ಗೆ 75 ರೂಪಾಯಿ, 200ಎಂಎಲ್ಗೆ 155 ರಿಂದ 165 ರೂಪಾಯಿ, ಅರ್ಧ ಲೀಟರ್ ಗೆ 350ರಿಂದ 360 ರೂಪಾಯಿ ಹಾಗೂ 1 ಲೀಟರ್ ನಂದಿನಿ ತುಪ್ಪ 700 ರಿಂದ 720 ರೂಪಾಯಿ ದರದಲ್ಲಿ ಮಾರಾಟವಾಗಲಿದೆ.

ಇನ್ನು ಕೆಎಂಎಫ್ ಹಾಲಿನ ದರ ಏರಿಕೆಗೂ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ. ಸರ್ಕಾರ ಈ ಪ್ರಸ್ತಾವನೆಯನ್ನು ಒಪ್ಪಿದರೆ ನಂದಿನಿ ಹಾಲಿನ ದರ ಕೂಡ ಏರಿಕೆ ಕಾಣಲಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ದರ ಏರಿಕೆಯಿಂದಾಗಿ ನಮ್ಮ ಉತ್ಪನ್ನಗಳ ಬೆಲೆ ಏರಿಕೆ ಮಾಡುತ್ತಿದ್ದೇವೆ ಎಂದು ಕೆಎಂಎಫ್ ಹೇಳಿದೆ. ಅದೇನೆ ಇರ್ಲಿ..! ನಂದಿನಿ ದುಬಾರಿಯಾಗ್ತಿರೋದ್ರಿಂದ ಜನಸಾಮಾನ್ಯರ ಜೇಬು ಸುಡುತ್ತಿದೆ.

ಇದನ್ನೂ ಓದಿ: ನವೆಂಬರ್ ಕ್ರಾಂತಿ : ಯೂ ಟರ್ನ್ ಹೊಡೆದ್ರಾ ಡಿಸಿಎಂ ಡಿಕೆ ಶಿವಕುಮಾರ್ ?

Scroll to Top