ಕುಮಟಾ : ನ್ಯಾಯಾಂಗ ಸಿಬ್ಬಂದಿ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಕುಮಟಾ (kumta) : ನ್ಯಾಯಾಂಗ ಸಿಬ್ಬಂದಿಯೋರ್ವರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿ ಆಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮೂಡ್ಕಣಿಯಲ್ಲಿ ನಡೆದಿದೆ.

ಕೋಡ್ಕಣಿಯ ನಿವಾಸಿ ನ್ಯಾಯಾಂಗ ಇಲಾಖೆಯಲ್ಲಿ ಶೀಘ್ರಲಿಪಿಗಾರರಾಗಿ (Stenographer) ಕೆಲಸ ಮಾಡುತ್ತಿರುವ ಸವಿತಾ ನಾರಾಯಣ ಭಟ್ (53 ವರ್ಷ) ಎಂಬವರ ಮನೆಯಲ್ಲಿ ಕಳವು ನಡೆದಿದೆ.

ಮನೆಯ ಮುಂಬಾಗಿಲ ಚಿಲಕದ ಕೊಂಡಿಯನ್ನು ಮುರಿದು ಮನೆಗೆ ನುಗ್ಗಿದ ಕಳ್ಳರು. ಎರಡು ಬೆಡ್‌ರೂಮ್‌ಗಳ ಲಾಕ್‌ಗಳನ್ನು ಮುರಿದು, ಅಲ್ಲಿದ್ದ ಕಪಾಟಿನ (ಅಲೈರಾ) ಬಾಗಿಲನ್ನು ಯಾವುದೋ ಭಾರವಾದ ಆಯುಧದಿಂದ ಒಡೆದಿದ್ದಾರೆ. .

ಇದನ್ನೂ ಓದಿ : ಕೇವಲ 1 ಸಾವಿರ ರೂಪಾಯಿ ಹೂಡಿಕೆ ಮಾಡಿ 3 ಲಕ್ಷ ರೂಪಾಯಿ ಸಾಲ ಪಡೆಯಿರಿ. ರಾಜ್ಯ ಸರಕಾರದಿಂದ ಗೃಹಿಣಿಯರಿಗೆ ಬಂಪರ್‌ ಆಫರ್‌

ಕಳ್ಳರು ಕಪಾಟಿನಲ್ಲಿದ್ದ ಸುಮಾರು 3,00,000 ರೂ. ಮೌಲ್ಯದ ಚಿನ್ನಾಭರಣಗಳು, 5,000 ರೂ. ಮೌಲ್ಯದ ಬೆಳ್ಳಿಯ ನೀಲಾಂಜನದ ಜೊತೆಗೆ 5,000 ರೂ. ನಗದು ಹಣವನ್ನು ಕದ್ದೊಯ್ದಿದ್ದಾರೆ ಎಂದು ಕುಮಟಾ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸವಿತಾ ಭಟ್‌ ಅವರು ತಮ್ಮ ಮನೆಯಿಂದ ಸುಮಾರು 3.10 ಲಕ್ಷ ರೂ. ಮೌಲ್ಯದ ಸೊತ್ತು ಕಳ್ಳತನವಾಗಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಕಾರವಾರ : ಉಚಿತವಾಗಿ ಆಧಾರ್‌ ಅಪ್ಡೇಟ್‌ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯ ಮನವಿ

kumta Gold jewellery worth lakhs stolen from judicial staffs house

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories