Prajwal Revanna Case : ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಹೈಕೋರ್ಟ್‌ನಲ್ಲಿಂದು ನಡೆದಿದ್ದೇನು ?

Prajwal Revanna Case : ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಮೇಜರ್‌ ಟ್ವಿಸ್ಟ್‌ ಸಿಕ್ಕಿದೆ. ಪ್ರಜ್ವಲ್‌ ಪರ ಇಂದು ಹಿರಿಯ ವಕೀಲರಾದ ಸಿದ್ದಾರ್ಥ್‌ ಲೂಥ್ರಾ ಅವರು ವಾದ ಮಂಡಿಸಿದ್ದಾರೆ. ಸಂತ್ರಸ್ತೆಯ ಮೌನ, ಪೊಲೀಸರ ತನಿಖೆ, ಎಫ್‌ಎಸ್‌ಎಲ್‌ ವರದಿಯ ಸತ್ಯಾಸತ್ಯತೆಯನ್ನೇ ವಕೀಲರು ಪ್ರಶ್ನೆ ಮಾಡಿದ್ದಾರೆ. ಹಾಗಾದ್ರೆ ಹೈಕೋರ್ಟ್‌ನಲ್ಲಿಂದು ನಡೆದಿದ್ದೇನು ಅನ್ನೋ ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ.

ಪ್ರಜ್ವಲ್ ರೇವಣ್ಣ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು ನ್ಯಾಯಮೂರ್ತಿಗಳಾದ ಕೆ.ಎಸ್. ಮುದಗಲ್ ಮತ್ತು ಟಿ. ವೆಂಕಟೇಶ್ ನಾಯಕ್ ಅವರ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದರು. ಕೆಳ ನ್ಯಾಯಾಲಯದ ತೀರ್ಪಿನಲ್ಲಿ ಇರುವ ಲೋಪದೋಷಗಳನ್ನು ಎತ್ತಿ ಹಿಡಿದು, ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಡಬೇಕು. ಪ್ರಜ್ವಲ್‌ ರೇವಣ್ಣ ಅವರಿಗೆ ಜಾಮೀನು ನೀಡಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

Prajwal Revanna Case : ಹೈಕೋರ್ಟ್‌ನಲ್ಲಿ ಗಮನ ಸೆಳೆದ ಸಿದ್ದಾರ್ಥ್‌ ಲೂಥ್ರಾ ವಾದ

ಪ್ರಜ್ವಲ್‌ ರೇವಣ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲರು ಹಲವು ವಿಚಾರಗಳ ಮೂಲಕ ಹೈಕೋರ್ಟ್‌ನ ಗಮನ ಸೆಳೆದಿದ್ದಾರೆ.

ಸಂತ್ರಸ್ತೆ ಮೌನ, ದೂರು ವಿಳಂಬ : ಪ್ರಜ್ವಲ್‌ ರೇವಣ್ಣ ಅವರ ವಿರುದ್ದ ಸಂತ್ರಸ್ತೆ 2019 ಮತ್ತು 2021ರಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದರೂ ಕೂಡ, 2023ರ ವರೆಗೆ ದೂರು ದಾಖಲಿಸಿಲ್ಲ. ಸುಮಾರು ಮೂರು ವರ್ಷಗಳ ಕಾಲ ಸಂತ್ರಸ್ತೆ ಮೌನವಹಿಸಿದ್ದು ಯಾಕೆ ? ಈ ಕುರಿತು ಸಂತ್ರಸ್ತೆ ಸಮರ್ಥನೀಯವಾಗಿರುವ ಯಾವುದೇ ಕಾರಣವನ್ನೂ ನೀಡಿಲ್ಲ ಎಂದು ತಮ್ಮ ವಾದದಲ್ಲಿ ಸಿದ್ದಾರ್ಥ್‌ ಲೂಥ್ರಾ ಅವರು ಮಂಡಿಸಿದ್ದಾರೆ.

ರಾಜಕೀಯ ದುರುದ್ದೇಶ : ಪ್ರಜ್ವಲ್‌ ರೇವಣ್ಣ ಅವರು ವಿದೇಶಿ ಪ್ರವಾಸ ಕೈಗೊಳ್ಳುವ ಮೊದಲು ಯಾವುದೇ ಪ್ರಕರಣಗಳು ದಾಖಲಾಗಿ ಇರಲಿಲ್ಲ. ಆದರೆ ಅವರು ವಿದೇಶ ಪ್ರವಾಸದಲ್ಲಿದ್ದಾಗಲೇ ಮೂರು ಪ್ರಕರಣಗಳು ದಾಖಲಾಘಿದೆ. ಈ ಪ್ರಕರಣಗಳನ್ನು ರಾಜಕೀಯ ದುರುದ್ದೇಶದಿಂದಲೇ ದಾಖಲಿಸಲಾಗಿದೆ. ಅದ್ರಲ್ಲೂ ರಾಜ್ಯ ಸರಕಾರ ಸಂತ್ರಸ್ತೆಯನ್ನು ಬಳಸಿಕೊಂಡು ಈ ಪ್ರಕರಣ ದಾಖಲಿಸಿದೆ ಎಂದು ಆರೋಪಿಸಲಾಗಿದೆ.

ಮೊಬೈಲ್‌ ವಶಕ್ಕೆ ಪಡೆಯದ ಪೊಲೀಸರು : ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿರುವುದೇ ಮೊಬೈಲ್‌ ಪೋನ್.‌ ಆದರೆ ಅತ್ಯಾಚಾರದ ವಿಡಿಯೋ ಇದೆ ಎಂದು ಆರೋಪಿಸಿರುವ ಆ್ಯಪಲ್ ಮೊಬೈಲ್ ಅನ್ನು ಇದುವರೆಗೂ ಪೊಲೀಸರು ವಶಕ್ಕೆ ನೀಡಿಲ್ಲ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಆದರೆ, ಮೊಬೈಲ್ ನೀಡುವಂತೆ ಸೆಕ್ಷನ್ 91 ಅಡಿಯಲ್ಲಿ ನೋಟಿಸ್ ನೀಡಿಲ್ಲ, ಹಾಗೆಯೇ ಐಎಂಇಐ ನಂಬರ್ ಆಧಾರದ ಮೇಲೆ ಮಾಹಿತಿ ಪಡೆಯಲು ಪ್ರಯತ್ನಿಸಿಲ್ಲ ಎಂದು ವಾದ ಮಂಡಿಸಿದ್ದಾರೆ.

ಎಫ್‌ಎಸ್‌ಎಲ್ ಸಾಕ್ಷ್ಯದಲ್ಲಿ ಸಂಶಯ : ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ (FSL) ಸಾಕ್ಷ್ಯದ ಕುರಿತು ಸಿದ್ದಾರ್ಥ್‌ ಲೂಥ್ರಾ ಸಂಶಯ ವ್ಯಕ್ತಪಡಿಸಿದ್ದಾರೆ. ಡಿಎನ್‌ಎ ಪರೀಕ್ಷೆ ನಡೆಸಿದ್ದ ವ್ಯಕ್ತಿಯೇ ಇದೀಗ ಮೃತಪಟ್ಟಿದ್ದಾರೆ. ಅಲ್ಲದೇ ಪೊಲೀಸರು ಬಟ್ಟೆಯನ್ನು ವಶಕ್ಕೆ ಪಡೆದಿರುವ ವಿಚಾರದಲ್ಲಿಯೂ ಸಂಶಯವಿದೆ. ಯಾವುದೇ ಕಾರಣಕ್ಕೂ ಎಫ್‌ಎಸ್‌ಎಲ್‌ ಸಾಕ್ಷ್ಯವನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ ಎಂದು ಅವರು ವಾದಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಪ್ರಜ್ವಲ್ ರೇವಣ್ಣ ಅವರು 2024ರ ಏಪ್ರಿಲ್ 24ರಂದು ವಿದೇಶಕ್ಕೆ ತೆರಳಿದ್ದರು. ಅವರು ಭಾರತವನ್ನು ತೊರೆಯುವ ವೇಳೆಯಲ್ಲಿ ಅವರ ವಿರುದ್ದ ಯಾವುದೇ ಕ್ರಿಮಿನಲ್‌ ಪ್ರಕರಣ ದಾಖಲಾಗಿ ಇರಲಿಲ್ಲ. ಆದರೆ ವಿದೇಶಕ್ಕೆ ತೆರಳಿದ ಮೇಲೆಯೇ ಪ್ರಕರಣ ದಾಖಲಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Prajwal Revanna Case Gets a Big Twist: What Happened in the High Court Today

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories