ಜ್ಯೋತಿಷಿ ಕಮಲಾಕರ್ ಆಸೆಗೆ ಸ್ವಂತ ಮಗಳನ್ನೇ ಟಾರ್ಗೆಟ್‌ ಮಾಡಿದ್ದ ಸುಚಿತ್ರಾ ನಾಯ್ಕ್!

Suchitra Naik- Kamalakar Bhat Crime Story: ಪತ್ನಿ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ಅವರ ಅಕ್ರಮ ಸಂಬಂಧದ ನಡುವೆ ತಮ್ಮ ಮಗಳ ಪ್ರಾಣವೇ ಸಂಚಿನ ಮೊದಲ ಗುರಿಯಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

Suchitra Naik- Kamalakar Bhat Crime Story

Suchitra Naik- Kamalakar Bhat Crime Story: ಶಿವಮೊಗ್ಗ: ಸಿದ್ದಾಪುರದ ವಸಂತ್ ನಾಯ್ಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಚಿತ್ರಾ ಪತಿ ಮಹೇಶ್ ನಾಯ್ಕ್ ಅವರು ತಮ್ಮ ಪತ್ನಿಯ ಕರಾಳ ನಡವಳಿಕೆಯ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪತ್ನಿ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ಅವರ ಅಕ್ರಮ ಸಂಬಂಧದ ನಡುವೆ ತಮ್ಮ ಮಗಳ ಪ್ರಾಣವೇ ಸಂಚಿನ ಮೊದಲ ಗುರಿಯಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಮಗಳನ್ನೇ ಟಾರ್ಗೆಟ್ ಮಾಡಿದ್ದ ಸುಚಿತ್ರಾ ಗ್ಯಾಂಗ್!

ಘಟನೆಯ ಬಗ್ಗೆ ವಿವರಿಸಿದ ಮಹೇಶ್, “ಅಂದು ಕೊಲೆಗಡುಕರು ಬಂದಿದ್ದು ನನ್ನನ್ನಲ್ಲ, ಬದಲಾಗಿ ನನ್ನ ಮಗಳನ್ನು ಕರೆದೊಯ್ಯಲು. ಸುಚಿತ್ರಾ ತನ್ನ ಮಗಳನ್ನು ಜ್ಯೋತಿಷಿ ಬಳಿ ಕಳುಹಿಸುವಂತೆ ಪಟ್ಟು ಹಿಡಿದಿದ್ದಳು. ನಾನು ಮಗಳನ್ನು ಕೋಣೆಯಲ್ಲಿ ಕೂಡಿಹಾಕಿ ರಕ್ಷಿಸಿದೆ. ಇದರಿಂದ ರೊಚ್ಚಿಗೆದ್ದ ಸುಚಿತ್ರಾ ಮತ್ತು ಆಕೆಯ ತಂಡ ನಮ್ಮ ಮೇಲೆ ಚಾಕುವಿನಿಂದ ದಾಳಿ ನಡೆಸಿತು. ನನ್ನ ಅಣ್ಣ ವಸಂತ್ ನಾಯ್ಕ್ ತಡೆಯಲು ಬಂದಾಗ ಆತನ ಎದೆಗೇ ಚಾಕು ಚುಚ್ಚಿ ಕೊಂದರು,” ಎಂದು ಕಣ್ಣೀರು ಹಾಕಿದ್ದಾರೆ.

ರೀಲ್ಸ್ ಮತ್ತು ಮೋಜಿನ ಬದುಕು:

ಸುಚಿತ್ರಾ ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿದ್ದ ರೀಲ್ಸ್ ಮತ್ತು ಅರೆಬರೆ ಬಟ್ಟೆಗಳ ವಿಡಿಯೋಗಳ ಬಗ್ಗೆ ಮಹೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಅವಳ ವಿಚಿತ್ರ ಆಟಗಳನ್ನು ನೋಡಲು ಆಗುತ್ತಿರಲಿಲ್ಲ. ಅರ್ಧ ಚಡ್ಡಿ ಹಾಕಿಕೊಂಡು ವಿಡಿಯೋ ಮಾಡುತ್ತಿದ್ದಳು. ಟೇಬಲ್ ಮೇಲೆ ಹಣ ಇಟ್ಟುಕೊಂಡು ಮೋಜಿನ ಬದುಕು ಸಾಗಿಸುತ್ತಿದ್ದಳು. ಈ ಮೋಜಿಗೆಲ್ಲಾ ಜ್ಯೋತಿಷಿ ಕಮಲಾಕರ್ ಭಟ್ ಹಣ ಒದಗಿಸುತ್ತಿದ್ದ,” ಎಂದು ಮಹೇಶ್ ದೂರಿದ್ದಾರೆ.‌

ಜ್ಯೋತಿಷಿ ಕಮಲಾಕರ್ ಅಕ್ರಮ ಸಂಬಂಧ ಪ್ರಕರಣ: ಶಾಸಕ ಸುರೇಶ್ ಕುಮಾರ್- ಬಿಕೆ ಹರಿಪ್ರಸಾದ್ ನಡುವೆ ತೀವ್ರ ಜಟಾಪಟಿ

ಜೀವಾವಧಿ ಶಿಕ್ಷೆಗೆ ಒತ್ತಾಯ:

ಪತ್ನಿ ಸುಚಿತ್ರಾ ಹಾಗೂ ಆಕೆಯ ಪ್ರಿಯಕರ ಕಮಲಾಕರ್ ಭಟ್‌ಗೆ ಕಠಿಣ ಶಿಕ್ಷೆಯಾಗಲೇಬೇಕು ಎಂದು ಮಹೇಶ್ ಆಗ್ರಹಿಸಿದ್ದಾರೆ. “ಅಮಾಯಕ ನನ್ನ ಅಣ್ಣನನ್ನು ಈ ರಾಕ್ಷಸರು ಬಲಿ ಪಡೆದಿದ್ದಾರೆ. ಈ ಅಡಿಯೋ ವೈರಲ್ ಬೆನ್ನಲ್ಲೇ ಅವರ ಅಸಲಿ ಮುಖ ಬಯಲಾಗಿದೆ. ಇಂತಹ ಹಂತಕರಿಗೆ ಜೀವಾವಧಿ ಶಿಕ್ಷೆಯಾಗಬೇಕು, ಅವರು ಜೈಲಿನಿಂದ ಹೊರಬರಲೇಬಾರದು,” ಎಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಶ್ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Scroll to Top