ಗುಡ್ ನ್ಯೂಸ್: ವಿಧಾನಸೌಧಕ್ಕೆ ಮಾಧ್ಯಮದವರಿಗೆ ಮುಕ್ತ ಪ್ರವೇಶ; ಆದರೆ ಈ ನಿಯಮಗಳು ಕಡ್ಡಾಯ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತಾ ಕಾರ್ಡ್ (Accreditation Card) ಹೊಂದಿರುವ ಮಾಧ್ಯಮದವರಿಗೆ ವಿಧಾನಸೌಧದ ಕಾರ್ಯಕ್ರಮಗಳು, ಸಭೆಗಳು ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸಲು ಯಾವುದೇ ತಡೆ ಇರುವುದಿಲ್ಲ.

ಬೆಂಗಳೂರು: ‌ಭದ್ರತೆಯ ನೆಪವೊಡ್ಡಿ ವಿಧಾನಸೌದದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದ ರಾಜ್ಯ ಸರಕಾರದ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಿರ್ಬಂಧವನ್ನು ವಾಪಾಸ್‌ ಪಡೆದಿದೆ.

ವಿಧಾನಸೌಧದಲ್ಲಿ ನಡೆಯುವ ಪತ್ರಿಕಾಗೋಷ್ಠಿ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ರೀತಿಯ ಹೊಸ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಕಾರ್ಯದರ್ಶಿಗಳಾದ ಡಾ. ಕೆ.ಜಿ. ಜಗದೀಶ ಅವರು ಸ್ಪಷ್ಟಪಡಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವಿತರಿಸಲಾಗಿರುವ ಮಾಧ್ಯಮ ಮಾನ್ಯತಾ ಕಾರ್ಡು ಹೊಂದಿರುವ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದವರಿಗೆ ವಿಧಾನಸೌಧದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮ , ಕಾರ್ಯಾಗಾರಗಳು, ಪತ್ರಿಕಾಗೋಷ್ಠಿ ಹಾಗೂ ಸಭೆಗಳಲ್ಲಿ ಭಾಗವಹಿಸುವುದಕ್ಕೆ ಯಾವುದೇ ನಿರ್ಬಂದ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸರಕಾರ ಹೊರಡಿಸಿರುವ ಆದೇಶದಲ್ಲಿ ಏನಿದೆ ?

ಮುಕ್ತ ಪ್ರವೇಶ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತಾ ಕಾರ್ಡ್ (Accreditation Card) ಹೊಂದಿರುವ ಮಾಧ್ಯಮದವರಿಗೆ ವಿಧಾನಸೌಧದ ಕಾರ್ಯಕ್ರಮಗಳು, ಸಭೆಗಳು ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸಲು ಯಾವುದೇ ತಡೆ ಇರುವುದಿಲ್ಲ.

ಭದ್ರತಾ ದೃಷ್ಟಿಯಿಂದ ಮತ್ತು ಸುಸಜ್ಜಿತ ವ್ಯವಸ್ಥೆಗಾಗಿ, ವಿಧಾನಸೌಧದ ಪಶ್ಚಿಮ ದ್ವಾರದ ಪೋರ್ಟಿಕೋ ಬಳಿ ನಿಗದಿಪಡಿಸಲಾದ ಸ್ಥಳದಲ್ಲಿ ಮಾತ್ರ ಮಾಧ್ಯಮದವರು ಗಣ್ಯರಿಂದ ಹೇಳಿಕೆಗಳನ್ನು ಅಥವಾ ಬೈಟ್‌ಗಳನ್ನು ಪಡೆಯಲು ಸೂಚಿಸಲಾಗಿದೆ.

Also Read: ಹಿಂದುತ್ವವೇ ಜಾತ್ಯತೀತತೆ; ಭಟ್ಕಳದಲ್ಲಿ ಘರ್ಜಿಸಿದ ಹಿಂದೂ ಹುಲಿ ಅನಂತ್‌ ಕುಮಾರ್‌ ಹೆಗಡೆ

ಹಿಂಬಾಲಿಸುವಂತಿಲ್ಲ: ಮುಖ್ಯಮಂತ್ರಿಗಳು, ಸಚಿವರು ಅಥವಾ ಗಣ್ಯ ವ್ಯಕ್ತಿಗಳು ವಿಧಾನಸೌಧದ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ಬೈಟ್ ಅಥವಾ ಸಂದರ್ಶನಕ್ಕಾಗಿ ಅವರನ್ನು ಹಿಂಬಾಲಿಸದಂತೆ ಮಾಧ್ಯಮದವರಿಗೆ ಸೂಚನೆ ನೀಡಲು ವಾರ್ತಾ ಇಲಾಖೆಗೆ ನಿರ್ದೇಶಿಸಲಾಗಿದೆ.

ಶಾಸಕರ ಭವನಕ್ಕೆ ಪ್ರವೇಶವಿಲ್ಲ: ಶಾಸಕರುಗಳ ಖಾಸಗಿತನವನ್ನು ಕಾಪಾಡುವ ದೃಷ್ಟಿಯಿಂದ, ಶಾಸಕರ ಭವನದ (Legislative House) ಒಳಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ಈ ಹಿಂದಿನಂತೆ ನಿಷೇಧ ಮುಂದುವರಿಯಲಿದೆ.

ಒಂದು ವೇಳೆ ಶಾಸಕರು ಸಂದರ್ಶನ ನೀಡಲು ಬಯಸಿದರೆ, ಅವರು ಭವನದ ಹೊರಗೆ ಬಂದು ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ಈ ಕುರಿತು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಪೊಲೀಸ್ ಭದ್ರತಾ ವಿಭಾಗಕ್ಕೆ ಅಗತ್ಯ ಸೂಚನೆಗಳನ್ನು ರವಾನಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

vidhana soudha media entry restrictions withdrawn Karnataka government clarification

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories