ಬಿಜೆಪಿ ಧರ್ಮಸ್ಥಳ ಚಲೋ : ತಿಮರೋಡಿ, ಮಟ್ಟಣ ಯಾರ ಕೂಸುಗಳು : ಪ್ರಿಯಾಂಕ ಖರ್ಗೆ

ಬೆಂಗಳೂರು : ಧರ್ಮಸ್ಥಳದ ವಿರುದ್ದ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಎನ್‌ಐಎ ತನಿಖೆಗೆ ಆಗ್ರಹಿಸಿ ಬಿಜೆಪಿ ಧರ್ಮಸ್ಥಳದಲ್ಲಿ ಬಿಜೆಪಿ ಧರ್ಮಸ್ಥಳ ಚಲೋ (Dharmasthala Chalo) ಕಾರ್ಯಕ್ರಮ ಆಯೋಜಿಸಿದೆ. ಈ ಕುರಿತು ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರೀಯೆ ನೀಡಿದ್ದು, ಮಹೇಶ್ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರು ಯಾರ ಕೂಸುಗಳು ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರು ಎಸ್‌ಐಟಿ ಆಗಬೇಕು ಅಂತಾ ಹೇಳ್ರಿದ್ರು, ಎಸ್‌ಐಟಿ ತನಿಖೆ ರಚನೆ ಆದ ಮೇಲೆ ಬಿಜೆಪಿಯವರು ಯಾವ ಹೇಳಿಕೆ ಕೊಟ್ಟಿರಲಿಲ್ಲ. ತನಿಖೆ ಆಗುವಾಗ ಜ್ಞಾನೋದಯ ಆಗಿರಬೇಕು. ಇದು ಆರ್‌ಎಸ್‌ಎಸ್ ವರ್ಸೆಸ್ ಆರ್‌ಎಸ್ಎಸ್ ಆಗಿದೆ. ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರು ಯಾರ ಕೂಸುಗಳು ? ಅವರು ಯಾರ ನೆರಳಲ್ಲಿ ಬೆಳೆದವರು ಎಂದು ಪ್ರಶ್ನಿಸಿದ್ದಾರೆ.
ಗಿರೀಶ್ ಅವರನ್ನು ಬಿಜೆಪಿ ಯೂತ್ ಐಕಾನ್ ಆಗಿ ಮಾಡಿದ್ರು. ಮಹೇಶ್ ತಿಮ್ಮರೋಡಿ ಆರ್ ಎಸ್ ಎಸ್ ವ್ಯಕ್ತಿ. ಆರ್ ಎಸ್ ಎಸ್ ನಡುವಿನ ಜಗಳವನ್ನು ತನಿಖೆಗೆ ಮೇಲೆ ಹಾಕುವುದು ಸರಿಯಲ್ಲ. ಸತ್ಯಾಂಶ ಹೊರಬರುವ ಮುಂಚೆಯೇ ಹೀಗೆಲ್ಲ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ಮಾಡುವ ಬದಲು ದೆಹಲಿ ಚಲೋ ಮಾಡಿ. ರಾಜ್ಯಕ್ಕೆ ಆಗುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿ. ಧರ್ಮಸ್ಥಳ ಪ್ರಕರಣವನ್ನು ಸಿಬಿಐ, ಎನ್ ಐಎಗೆ ಕೊಡಿ ಅಂತಾ ಕೇಳ್ತಾರೆ. ಎಷ್ಟು ಪ್ರಕರಣ ಪೆಂಡಿಗೆ ಇವೆ ಅಂತಾ ಗೊತ್ತಿದೆಯಾ..?
ರಾಜ್ಯದ 74 ಕೇಸ್ ಪೆಂಡಿಂಗ್ ಇವೆ. ಅವ್ರು ಕೇಸ್ ತನಿಖೆ ಮಾಡೊಕೆ ಆಗುತ್ತಿಲ್ಲ. ಕೇಸ್ ಕೊಟ್ಟರೆ ನೀವೆ ಸಂಪನ್ಮೂಲ ಕೊಡಿ ಎನ್ನುತ್ತಾರೆ. ನಮ್ಮ ಅಧಿಕಾರಿಗಳನ್ನು ಬಳಕೆ ಮಾಡ್ತೀವಿ ಅಂತಾರೆ.ಎನ್ಐಎಗೆ ಕೊಡೊಕೆ ರಾಷ್ಟ್ರೀಯ ಭದ್ರತಾ ವಿಷಯ ಇದೆಯಾ..? ಯಾವುದಕ್ಕೆ ಆದ್ಯತೆ ನೀಡಬೇಕು ಅಂತಾ ಬಿಜೆಪಿಗೆ ಗೊತ್ತಾಗಲ್ವಾ ಎಂದಿದ್ದಾರೆ.
ಇದನ್ನೂ ಓಧಿ : ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆಯ ವೇಳೆ ಸಿಕ್ಕಿದ್ದೇನು ?
ಧರ್ಮಸ್ಥಳ, ಚಾಮುಂಡಿ ಬೆಟ್ಟ ಚಲೋ ಮಾಡುತ್ತಿರುವುದು ಕುರ್ಚಿ ಉಳಿಸಿಕೊಳ್ಳಲು. ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ಸ್ಥಾನ ಉಳಿಸಿಕೊಳ್ಳಲು ಹೋರಾಟ ಮಾಡ್ತಿದ್ದಾರೆ. ಸೌಜನ್ಯ ಪ್ರಕರಣದ ಬಗ್ಗೆ ಎಲ್ಲಾ ಗೊತ್ತಿದೆ ಎಂದು ಕಟೀಲ್ ಹೇಳಿದ್ರು. ಭಾಷಣದಲ್ಲಿ ಸುನೀಲ್ ಕುಮಾರ್ ಗೆ ಗೊತ್ತಿದೆ ಎಂದು ಕಟೀಲ್ ಹೇಳಿದ್ರು ಅದರ ಬಗ್ಗೆ ಉತ್ತರ ಕೊಡಲಿ ಎಂದಿದ್ದಾರೆ.
ಮೈಸೂರು ದಸರಾ ಉದ್ಘಾಟನೆಗೆ ಈ ಹಿಂದೆ ನಿಸಾರ್ ಅಹ್ಮದ್, ಕಲಾಂ ಕರೆಸಲಾಗಿತ್ತು. ಇದೀಗ ಮುಷ್ತಾಕ್ ಅವರ ಸಾಧನೆ ನೋಡಿ ಕರೆಸಿದ್ದೇವೆ. ಮಾಜಿ ಸಂಸದರಿಗೇನು ಇದರಲ್ಲಿ ಕಳಕಳಿ. ಟಿಪ್ಪು ಕಾಲದಲ್ಲಿಯೂ ದಸರಾ ವಿಜ್ರಂಭಣೆಯಿಂದ ನಡೆದಿತ್ತು. ಮಾಜಿ ಎಂಪಿ ಚಾಮುಂಡಿ ದೇವರ ವಕ್ತಾರರ ರೀತಿ ಮಾತನಾಡುತ್ತಾರೆ. ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಹೀಗೆ ಮಾತಾಡುತ್ತಾರೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಬಾನು ಮುಷ್ತಾಕ್‌ಗೆ ದೀಪಾ ಬಸ್ತಿ ಬಗ್ಗೆ ಯಾಕಿಲ್ಲ ಹೃದಯ ವೈಶಾಲ್ಯತೆ : ಸುನಿಲ್ ಕುಮಾರ್
ಇನ್ನು ಬಿಜೆಪಿ ಸೇರ್ಪಡೆಗೆ ಡಿಕೆ ಶಿವ ಕುಮಾರ್ ಪ್ರಯತ್ನ ಮಾಡ್ತಿದ್ದಾರೆ ಎಂಬ ಯತ್ನಾಳ್ ಆರೋಪಕ್ಕೆ ಖರ್ಗೆ ಪ್ರತಿಕ್ರೀಯೆ ನೀಡಿದ್ದಾರೆ. ಬಿಜೆಪಿಯಲ್ಲಿ ಉಳಿಯುತ್ತಿನೋ ಇಲ್ವ ಅನ್ನೊ ಸೆಲ್ಪ್ ಅಸೆಸ್ ಮೆಂಟ್ ಯತ್ನಾಳ್ ಅವ್ರಿಗೆ ಗೊತ್ತಿರಲಿಲ್ಲ. ಇನ್ನು ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತಾಡ್ತಾರೆ. ಯತ್ನಾಳ್ ಅವರನ್ನು ಯಾಕೆ ಬಿಜೆಪಿಯಿಂದ ಹೊರಗೆ ಹಾಕಿದ್ದಾರೆ ಮೊದಲು ಹೇಳಲಿ. ಯತ್ಬಾಳ್ ಮಾತಿಗೆ ಬೆಲೆ ಹೆಚ್ಚು ಕೊಡಬೇಡಿ. ಅವ್ರ ಮಾತಿಗೆ ಅವ್ರ ಪಕ್ಷದಲ್ಲೇ ಬೆಲೆ ಕೊಡಲಿಲ್ಲ ಎಂದಿದ್ದಾರೆ.



