Karnataka Caste Survey : ಜಾತಿಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು : ಸರಕಾರದ ವಿರುದ್ದ ಶಿಕ್ಷಕರ ಆಕ್ರೋಶ

ಚಿಕ್ಕಬಳ್ಳಾಪುರ : ಜಾತಿಗಣತಿ (Karnataka Caste Survey) ಕರ್ತವ್ಯದಲ್ಲಿದ್ದ ಮುಖ್ಯ ಶಿಕ್ಷಕರೋರ್ವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಜಾತಿಗಣತಿಗಾಗಿ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿದೆ ಅನ್ನೋ ಆರೋಪ ಕೇಳಿಬಂದಿದ್ದು, ಶಿಕ್ಷಕರು ಸರಕಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೂರಗಮಾಕಲಹಳ್ಳಿಯ ರಾಮಕೃಷ್ಣಪ್ಪ (57ವರ್ಷ) ಎಂಬವರೇ ಹೃದಯಾಘಾತದಿಂದ ಸಾವನ್ನಪ್ಪಿದವರು.

ಜಾತಿಗಣತಿ ಕೆಲಸ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಅವರಿಗೆ ಹೃದಯಾಘಾತ ಉಂಟಾಗಿದೆ. ಕೂಡಲೇ ಅವರನ್ನು ಮುರುಗಮಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿಯ ಡೆಕನ್‌ ಆಸ್ಪತ್ರೆಗೆ ಶಿಪ್ಟ್‌ ಮಾಡಲಾಯ್ತು. ಆದರೂ ಚಿಕಿತ್ಸೆ ಫಲಕಾರಿ ಆಗದೆ ಅವರು ಸಾವನ್ನಪ್ಪಿದ್ದಾರೆ.

ಅನಾರೋಗ್ಯ ಪೀಡಿತ ಶಿಕ್ಷಕರಿಂದ ಗಣತಿ

ಕರ್ನಾಟಕ ರಾಜ್ಯ ಸರಕಾರ ಜಾತಿಗಣತಿ ಕಾರ್ಯವನ್ನು ನಡೆಸುತ್ತಿದೆ. ಆದರೆ ಶಿಕ್ಷಕರು ಮಾತ್ರ ಒತ್ತಡದಿಂದಲೇ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಅನಾರೋಗ್ಯ ಪೀಡಿತ ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಶಿಕ್ಷಕರು ವೈದ್ಯಕೀಯ ಪ್ರಮಾಣ ಪತ್ರ ನೀಡಿದ್ದರೂ ಕೂಡ ಕಡ್ಡಾಯವಾಗಿ ಗಣತಿ ಕಾರ್ಯ ನಡೆಸುವಂತೆ ಸೂಚಿಸಲಾಗಿದೆ. ಒಂದೊಮ್ಮೆ ಗಣತಿ ಕಾರ್ಯಕ್ಕೆ ಗೈರು ಹಾಜರಾದ್ರೆ ಸಸ್ಪೆಂಡ್‌ ಮಾಡ್ತೇವೆ ಅನ್ನೋ ಬೆದರಿಕೆಯನ್ನು ಜಿಲ್ಲಾಡಳಿತ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಒಡ್ಡುತ್ತಿದ್ದಾರೆ.

ಬೆಳಗ್ಗೆ 6 ಗಂಟೆಯಿಂದಲೇ ಗಣತಿ, ಇಲ್ಲವಾದ್ರೆ ಸಸ್ಪೆಂಡ್‌

ಮುಂಜಾನೆ 6 ಗಂಟೆಯಿಂದಲೇ ಗಣತಿ ಕಾರ್ಯ ನಡೆಸಬೇಕು ಅನ್ನೋ ಪರ್ಮಾನು ಹೊರಡಿಸಲಾಗುತ್ತಿದೆ. ಒಂದೊಮ್ಮೆ 6 ಗಂಟೆಗೆ ಕರ್ತವ್ಯಕ್ಕೆ ಹಾಜರಾಗದೇ ಇದ್ರೆ ಅಂತಹ ಶಿಕ್ಷಕರನ್ನು ಸಸ್ಪೆಂಡ್‌ ಮಾಡಲಾಗುತ್ತದೆ ಎಂದು ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಶಿಕ್ಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಕರ್ನಾಟಕ ಹೈಕೋರ್ಟ್‌ ಜಾತಿಗಣತಿಗೆ ಜನರಿಂದ ಒತ್ತಾಯ ಪೂರ್ವಕವಾಗಿ ಮಾಹಿತಿ ಪಡೆಯಬಾರದು ಎಂದಿದೆ. ಆದರೆ ಜಿಲ್ಲಾಡಳಿತಗಳು ಕಡ್ಡಾಯವಾಗಿ ಶಿಕ್ಷಕರು ಮುಂಜಾನೆ 6 ಗಂಟೆಯಿಂದ ಜಾತಿಗಣತಿ ನಡೆಸುವಂತೆ ಒತ್ತಡ ಹೇರುತ್ತಿವೆ.

ನೂರಾರು ಕಿಲೋ ಮೀಟರ್‌ ಪ್ರಯಾಣಿಸಿ ಜಾತಿಗಣತಿಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಮುಂಜಾನೆ 6 ಗಂಟೆಯಿಂದಲೇ ಗಣತಿಯಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವೇ ? ಇನ್ನು ಮುಂಜಾನೆ 6 ಗಂಟೆಗೆ ಯಾರು ಮನೆ ಬಾಗಿಲು ತೆರೆದು ಶಿಕ್ಷಕರಿಗೆ ಗಣತಿಯ ಮಾಹಿತಿ ಕೊಡ್ತಾರೆ. ಜಿಲ್ಲಾಧಿಕಾರಿಗಳಿಗೆ ಕನಿಷ್ಠ ಜ್ಞಾನವೂ ಇಲ್ಲವಾ ಅಂತಾ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Karnataka Caste Survey Teacher Death in Chikkaballapura

ನಾಯಿಗಳ ಕಾಟಕ್ಕೆ ಶಿಕ್ಷಕರು ಸುಸ್ತೋ ಸುಸ್ತು

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಕರ್ನಾಟಕ ರಾಜ್ಯದಾದ್ಯಂತ ಜಾತಿಗಣತಿ ಕಾರ್ಯವನ್ನು ಕೈಗೊಂಡಿದೆ. ಆದರೆ ಜಾತಿಗಣತಿಗೆ ಶಿಕ್ಷಕರನ್ನು ನಿಯೋಜನೆ ಮಾಡಿದೆ. ಬಹುತೇಕ ಕಡೆಗಳಲ್ಲಿ ಶಿಕ್ಷಕರಿಗೆ ನಾಯಿಗಳು ಕಾಟ ಕೊಡ್ತಿವೆ.

ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಶಿಕ್ಷಕರಿಗೆ ನಾಯಿ ಕಡಿತದ ಪ್ರಕರಣ ದಾಖಲಾಗಿದೆ. ಶಿಕ್ಷಕರ ಶಾಲಾ ವ್ಯಾಪ್ತಿ, ಅವರ ಮನೆ ಪರಿಸರ ಬಿಟ್ಟು ಪರಿಚಯವೇ ಇಲ್ಲದ ದೂರದ ಪ್ರದೇಶಗಳಿಗೆ ಶಿಕ್ಷಕರನ್ನು ನಿಯೋಜನೆ ಮಾಡಿರುವ ಜಿಲ್ಲಾಡಳಿತ ಅವರ ಸಹಾಯಕ್ಕಾಗಿ ಯಾರನ್ನೂ ನೇಮಕ ಮಾಡುವ ಗೋಜಿಗೆ ಹೋಗಿಲ್ಲ. ಚುನಾವಣೆಗಳು ಬಂದಾಗ ಮನೆ ಬಾಗಿಲಿಗೆ ಬರುವ ಜನನಾಯಕರು ಕೂಡ ಶಿಕ್ಷಕರ ಕಾರ್ಯಕ್ಕೆ ಸಾಥ್‌ ಕೊಡ್ತಿಲ್ಲ.

ಅತೀ ಸೂಕ್ಷ್ಮ ಪ್ರದೇಶದಲ್ಲಿ ಒಬ್ಬಂಟಿ ಶಿಕ್ಷಕಿಯರಿಂದ ಗಣತಿ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಠಕ್ಕೆ ಬಿದ್ದವರಂತೆ ತರಾತುರಿಯಲ್ಲಿ ಜಾತಿಗಣತಿ ಕಾರ್ಯವನ್ನು ಕೈಗೊಂಡಿದ್ದಾರೆ. ಆದರೆ ಇದಕ್ಕೆ ಯಾವುದೇ ಪೂರ್ವ ತಯಾರಿ ಮಾಡಿಕೊಂಡಿಲ್ಲ ಅನ್ನೋ ಕಾರ್ಯವೈಖರಿ ನೋಡಿದ್ರೆ ಗೊತ್ತಾಗುತ್ತೆ. ಅತೀ ಸೂಕ್ಷ್ಮ ಪ್ರದೇಶಗಳಿಗೆ ಚುನಾವಣೆಗಳು ಬಂದಾಗ ವಿಶೇಷ ಭದ್ರತೆಯಲ್ಲಿ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳು ಇದೀಗ ಒಬ್ಬಂಟಿ ಶಿಕ್ಷಕಿಯರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿರುವುದು ನಿಜಕ್ಕೂ ನಾಚಿಕೆಗೇಡು.

ಹೇಗಾದ್ರೂ ಪರವಾಗಿಲ್ಲ ಶಿಕ್ಷಕರು ಜಾತಿಗಣತಿ ಮಾಡಲೇ ಬೇಕು ಅಂತಾ ಹಠಕ್ಕೆ ಬಿದ್ದಿರುವುದು ಕರ್ನಾಟಕ ಸರಕಾರಕ್ಕೆ ಶಿಕ್ಷಕರ ಬಗೆಗಿನ ಕಾಳಜಿ ಎದ್ದು ತೋರುತ್ತದೆ. ಜಿಲ್ಲಾಧಿಕಾರಿಗಳಿಂದ ಹಿಡಿದು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಶಿಕ್ಷಕರನ್ನು ಕನಿಷ್ಠವಾಗಿ ದುಡಿಸಿಕೊಳ್ತಾ ಇದ್ದಾರೆ. ಜಾತಿಗಣತಿ ಶಿಕ್ಷಕರನ್ನು ನಿಯೋಜನೆ ಮಾಡಿರುವ ಸರಕಾರ, ಶಿಕ್ಷಕರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳದೇ ಇರುವುದು ವಿಪರ್ಯಾಸ.

Karnataka Caste Survey : ಜಾತಿಗಣತಿಗೆ ಸಹಾಯಕ್ಕೆ ನೇಮಿಸಲಿ

ಕರ್ನಾಟಕ ಸರಕಾರ ಜಾತಿಗೆ ತಂದಿರುವ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ಸಮಿತಿಯನ್ನು ನೇಮಕ ಮಾಡಿದೆ. ಇದೀಗ ಹಠಕ್ಕೆ ಬಿದ್ದವರಂತೆ ಶಿಕ್ಷಕರಿಂದ ಗಣತಿ ಕಾರ್ಯ ನಡೆಸಿಕೊಳ್ತಾ ಇರೋ ಸರಕಾರ ಶಿಕ್ಷಕರಿಗೆ ಸಹಾಯಕರನ್ನು ನೇಮಿಸಲಿ. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಶಿಕ್ಷಕರ ಕಾರ್ಯಕ್ಕೆ ನೆರವಾಗಲಿ. ಇಲ್ಲಾ ಆಶಾ ಕಾರ್ಯಕರ್ತರು, ಅಂಗನವಾಡಿ ಸಹಾಯಕಿಯರು, ಗ್ರೂಪ್‌ ಡಿ ನೌಕರರು, ಪಂಚಾಯತ್‌ ಸಿಬ್ಬಂದಿಗಳನ್ನು ಸಹಾಯಕರನ್ನಾಗಿ ನೇಮಕ ಮಾಡಲಿ ಅನ್ನೋ ಒತ್ತಡ ಕೇಳಿಬಂದಿದೆ.

ಸಸ್ಪೆಂಡ್‌ ಆದ್ರೂ ಓಕೆ, ಜಾತಿಗಣತಿ ಬೇಡಾ

ಕರ್ನಾಟಕದ ಕಾಂಗ್ರೆಸ್‌ ಸರಕಾರ ಒತ್ತಡದಿಂದ ನಡೆಸುತ್ತಿರೋ ಜಾತಿಗಣತಿಯ ಬಗ್ಗೆ ಶಿಕ್ಷಕರ ವಲಯದಲ್ಲಿ ಅಪಸ್ವರ ಕೇಳಿಬಂದಿದೆ. ಸರ್ವರ್‌ ಸಮಸ್ಯೆ,, ನಾಯಿಗಳ ಕಾಟ, ಜನರ ಅಸಹಕಾರ, ಮೇಲಾಧಿಕಾರಿಗಳ ಒತ್ತಡ ಹೀಗೆ ನಾನಾ ಕಾರಣಗಳಿಂದಾಗಿ ಶಿಕ್ಷಕರು ಜಾತಿಗಣತಿ ನಡೆಸೋಕ್ಕೆ ಮನಸ್ಸಿಲ್ಲ. ಸಸ್ಪೆಂಡ್‌ ಆದ್ರೂ ಓಕೆ ಆದರೆ ಜಾತಿಗಣತಿ ಮಾತ್ರ ಬೇಡವೇ ಬೇಡ ಅನ್ನೋ ನಿರ್ಧಾರಕ್ಕೆ ಶಿಕ್ಷಕರು ಬಂದಿದ್ದಾರೆ.

ಈಗಾಗಲೇ ಸಾವಿರಾರು ಶಿಕ್ಷಕರು ಜಾತಿಗಣತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ರಾಜ್ಯ ಸರಕಾರ ಶಿಕ್ಷಕರಿಗೆ ಸೌಲಭ್ಯಗಳನ್ನು ಒದಗಿಸಿ ಗಣತಿ ಕಾರ್ಯ ನಡೆಸೋದು ಬಿಟ್ಟು, ಜಿಲ್ಲಾಧಿಕಾರಿಗಳ ಮೂಲಕ ಒತ್ತಡ ಹೇರುವ ಕಾರ್ಯ ಮಾಡುತ್ತಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories