ಕೇರಳ ನರ್ಸ್‌ ನಿಮಿಷಾ ಪ್ರಿಯ ಗಲ್ಲುಶಿಕ್ಷೆ ಮುಂದೂಡಿಕೆ : ಮುಂದೇನಾಗುತ್ತೆ ಪ್ರಕರಣ ?

ಕೇರಳ : ಯೆಮೆನ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್‌ ನಿಮಿಷಾ ಪ್ರಿಯ (Nimisha Priya) ಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ಗಲ್ಲು ಶಿಕ್ಷೆಯನ್ನು ಮುಂದೂಡಿಕೆ ಮಾಡಲಾಗಿದ್ದು, ಮಾತುಕತೆ ಮುಂದುವರಿದಿದೆ.

ನರ್ಸ್‌ ನಿಮಿಷಾ ಪ್ರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿಕೆ ಮಾಡಿದೆ. ಮತ್ತೊಂದೆಡೆ ಮುಸ್ಲೀಂ ಮುಖಂಡರು ಯೆಮೆನ್‌ ಸರಕಾರದ ಜೊತೆಗೆ ಮಾತುಕತೆ ಮುಂದುವರಿಸಿದ್ದಾರೆ.

ಯೆಮೆನ್‌ನಲ್ಲಿ ಸದ್ಯ ರಾಜಕೀಯ ಅಸ್ಥಿರತೆ ಮತ್ತು ಭಾರತಕ್ಕೆ ಹೌತಿ ಬಂಡುಕೋರರ ನಿಯಂತ್ರಣದಲ್ಲಿರುವ ಸನಾ ಪ್ರದೇಶದಲ್ಲಿ ಭಾರತಕ್ಕೆ ರಾಜತಾಂತ್ರಿಕ ಕೊರತೆಯಿಂದ ಮಾತುಕತೆ ನಡೆಸುವುದು ಕಷ್ಟಸಾಧ್ಯವಾಗಿದೆ.

ಆದರೂ ಭಾರತೀಯ ಅಧಿಕಾರಿಗಳು ಸ್ಥಳೀಯ ಜೈಲು ಅಧಿಕಾರಿಗಳು ಹಾಗೂ ಪ್ರಾಸಿಕ್ಯೂಟರ್‌ ಕಚೇರಿಯ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Nimisha Priya : ಬ್ಲಡ್‌ಮನಿ ಸ್ವೀಕರಿಸಿದ್ರೆ ನಿಮಿಷಾಗೆ ರಿಲೀಫ್‌

ಯೆಮೆನ್‌ನ ಷರಿಯಾ ಕಾನೂನಿನ ಪ್ರಕಾರ, ಮೃತರ ಕುಟುಂಬವು ಪರಿಹಾರ ಧನ (“ಬ್ಲಡ್ ಮನಿ”) ಸ್ವೀಕರಿಸಲು ಒಪ್ಪಿದರೆ, ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬಹುದು ಅಥವಾ ಜೀವಾವಧಿ ಶಿಕ್ಷೆಗೆ ಪರಿವರ್ತಿಸಬಹುದು.

ಈ ಮಾತುಕತೆಗಳು ಯಶಸ್ವಿಯಾಗಿ, ಕುಟುಂಬವು ಕ್ಷಮಾದಾನ ನೀಡಿದರೆ, ಅವರ ಜೀವ ಉಳಿಯುತ್ತದೆ. ಬ್ಲಡ್‌ ಮನಿಯಾಗಿ ನಿಮಿಷಾ ಪ್ರಿಯ ಸುಮಾರು 8 ಕೋಟಿ ರೂಪಾಯಿಯನ್ನು ಮೃತ ತಲಾಲ್‌ ಅಬ್ದೋ ಮಹ್ದಿಗೆ ನೀಡಬೇಕಾಗಿದೆ.

Also Read : ಯೆಮೆನ್ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ16ರಂದು ಗಲ್ಲುಶಿಕ್ಷೆ : ಏನಿದು ಪ್ರಕರಣ ?

ಒಂದೊಮ್ಮೆ ಮೃತನ ಕುಟುಂಬಸ್ಥರು ಹಣ ಸ್ವೀಕರಿಸಲು ಒಪ್ಪಿದ್ರೆ, ನಿಮಿಷಾ ಪ್ರಿಯ ಗಲ್ಲುಶಿಕ್ಷೆಯಿಂದ ಬಿಡುಗಡೆ ಆಗುವ ಸಾಧ್ಯತೆಯಿದೆ.

ಬ್ಲಡ್‌ಮನಿ ನೀಡಿದ ನಂತರವೂ ಯೆಮೆನ್‌ನ ಕಾನೂನಿನ ಪ್ರಕಾರ ಉಳಿದ ಯಾವುದೇ ನಿಯಮಗಳಿದ್ದರೂ ಕೂಡ ಅದನ್ನೂ ನಿಮಿಷಾ ಪ್ರಿಯ ಪೂರ್ಣಗೊಳಿಸಲೇ ಬೇಕಾಗಿದೆ.

Nimisha Priya : ಜುಲೈ 18ಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ

ನಿಮಿಷಾ ಪ್ರಿಯ ಅವರ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಭಾರತದ ಸುಪ್ರೀಂ ಕೋರ್ಟ್‌ ಜುಲೈ 14ರಂದು ಪ್ರಕರಣದ ವಿಚಾರಣೆಯನ್ನು ನಡೆಸಿ, ಮುಂದಿನ ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿಕೆ ಮಾಡಿದೆ.

ಯೆಮೆನ್‌ ಸರಕಾರ ಜೊತೆಗೆ ಭಾರತ ಸರಕಾರ ನಡೆಸಿರುವ ಮಾತುಕತೆಯ ಮಾಹಿತಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್‌ ಈಗಾಗಲೇ ಸೂಚಿಸಿದೆ. ಕೇಂದ್ರ ಸರಕಾರ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ತನ್ನ ಹೇಳಿಕೆಯನ್ನು ನೀಡಿದೆ.

ಭಾರತ ಸರಕಾರ ಪ್ರಯತ್ನ :

ಕೇರಳದ ನರ್ಸ್‌ ನಿಮಿಷಾ ಪ್ರಿಯ ಅವರನ್ನು ಗಲ್ಲುಶಿಕ್ಷೆಯಿಂದ ಪಾರು ಮಾಡಬೇಕು ಅನ್ನೋ ಉದ್ದೇಶದಿಂದಲೇ ಭಾರತ ಸರಕಾರ ಕೂಡ ನಿರಂತರವಾಗಿ ಪ್ರಯತ್ನವನ್ನು ಮುಂದುವರಿಸಿದೆ.

ಮಿಷಾ ಪ್ರಿಯಾ ಅವರ ಸುರಕ್ಷಿತ ವಾಪಸಾತಿಗಾಗಿ ರಾಜತಾಂತ್ರಿಕ ಮತ್ತು ಮಾನವೀಯ ಪ್ರಯತ್ನಗಳನ್ನು ಮಾಡುತ್ತಿದೆ. ಯೆಮೆನ್‌ನಲ್ಲಿನ ರಾಜಕೀಯ ಪರಿಸ್ಥಿತಿ ಮತ್ತು ನೇರ ರಾಜತಾಂತ್ರಿಕ ಸಂಬಂಧಗಳ ಕೊರತೆಯು ಈ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸುತ್ತದೆ.

Also Read : ಹೊಸ ಪಡಿತರ ಚೀಟಿ, ತಿದ್ದುಪಡಿಗೆ ಅವಕಾಶ : ಅರ್ಜಿ ಸಲ್ಲಿಸಲು ಕ್ಲಿಕ್‌ ಮಾಡಿ

Nimisha Priya : ಗಲ್ಲುಶಿಕ್ಷೆಯಿಂದ ಪಾರಾಗಿ ಭಾರತಕ್ಕೆ ಬರ್ತಾರಾ ನಿಮಿಷಾ ಪ್ರಿಯ ?

ಯೆಮೆನ್‌ ಪ್ರಜೆಯ ಕೊಲೆ ಆರೋಪವನ್ನು ಹೊತ್ತಿರುವ ಕೇರಳದ ನರ್ಸ್‌ ನಿಮಿಷಾ ಪ್ರಿಯ ಸದ್ಯಕ್ಕೆ ಗಲ್ಲುಶಿಕ್ಷೆ ಮುಂದೂಡಿಕೆ ಆಗಿದೆ. ಆದರೆ ಗಲ್ಲುಶಿಕ್ಷೆಯಿಂದ ಸಂಪೂರ್ಣವಾಗಿ ರಿಲೀಫ್‌ ಸಿಗುತ್ತೆ ಅಂತಾ ಹೇಳೋದಕ್ಕೆ ಸಾಧ್ಯವಿಲ್ಲ.

ಭಾರತ ಸರಕಾರ ಕಳೆದ ಹಲವು ವರ್ಷಗಳಿಂದಲೂ ನಿಮಿಷಾ ಪ್ರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತುಕತೆಯನ್ನು ನಡೆಸುತ್ತಿದ್ದು, ಎಲ್ಲಾ ಪ್ರಯತ್ನಗಳನ್ನು ಮುಂದುವರಿಸಿದೆ.

ಆದರೆ ಯೆಮೆನ್‌ ರಾಜಕೀಯ ಬಿಕ್ಕಟ್ಟು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬ್ಲಡ್‌ಮನಿಯನ್ನು ಕೊಲೆಯಾಗಿರುವ ತಲಾಲ್‌ ಕಟುಂಬಸ್ಥರು ಸ್ವೀಕಾರ ಮಾಡಿದ ನಂತರದಲ್ಲಿ, ಅವರು ಈ ಪ್ರಕರಣವನ್ನು ಹೇಗೆ ಪರಿಗಣಿಸುತ್ತಾರೆ ಅನ್ನೋದ್ರ ಮೇಲೆಯೇ ನಿಮಿಷಾ ಪ್ರಿಯ ಅವರ ಭವಿಷ್ಯ ನಿಂತಿದೆ.

ಯೆಮೆನ್‌ ಕಾನೂನಿನ ಮೂಲಕ ನಿಮಿಷಾ ಪ್ರಿಯ ಬಿಡುಗಡೆ ಆಗಿ ಭಾರತಕ್ಕೆ ಬರುವ ಸಾಧ್ಯತೆಯೂ ಇದೆ. ಇಲ್ಲಾ ಗಲ್ಲುಶಿಕ್ಷೆಯಿಂದ ಪಾರಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸಲೂ ಬಹುದು. ಆದರೆ ಈ ಕಾನೂನು ಪ್ರಕ್ರೀಯೆ ಪೂರ್ಣಗೊಳಿಸಿ ಭಾರತಕ್ಕೆ ಬರುವುದಕ್ಕೆ ಹಲವು ವರ್ಷಗಳೇ ಬೇಕಾಗಬಹುದು.

Kerala nurse Nimisha Priya death sentence postponed yemen What happens next in the case Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories