Best Chutneys : ಬೆಳಗಿನ ಉಪಹಾರಕ್ಕೆ 3 ಬೆಸ್ಟ್‌ ಚಟ್ನಿಗಳು : ಮಾಡುವುದು ಹೇಗೆ ?

ದಕ್ಷಿಣ ಭಾರತದ ಸುಪ್ರಸಿದ್ಧ ಉಪಹಾರಗಳಾದ(South Indian Dishes) ಇಡ್ಲಿ, ದೋಸಾ, ವಡಾ, ಉಪ್ಪಿಟ್ಟು, ಉತ್ತಪ್ಪ, ಅಪ್ಪಂ ಎಲ್ಲದಕ್ಕೂ ಚಟ್ನಿ(Best Chutneys) ಬೇಕೇ ಬೇಕು. ಅದಕ್ಕಾಗಿಯೇ ಇಲ್ಲಿ ಅಂತಹ ಮೂರು ಚಟ್ನಿಗಳನ್ನು ಹೇಗೆ ಮಾಡುವುದು ಎಂದು ಹೇಳಿದ್ದೇವೆ. ಇವುಗಳು ಬರೀ ದಕ್ಷಿಣ ಭಾರತದ ಉಪಹಾರಗಳಿಗಷ್ಟೇ ಅಲ್ಲ, ರೋಟಿ, ಚಪಾತಿ, ಪರಾಠಾಗಳಿಗೂ ಉತ್ತಮ ಕಾಂಬಿನೇಷನ್‌ ಆಗಬಲ್ಲದು. ಈ ಚಟ್ನಿಗಳನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು.

ದಕ್ಷಿಣ ಭಾರತದ 3 ಬೆಸ್ಟ್‌ ಚಟ್ನಿಗಳೆಂದರೆ (Best Chutneys ) ತೆಂಗಿನ ಕಾಯಿ ಚಟ್ನಿ, ಟೊಮೆಟೋ ಚಟ್ನಿ ಮತ್ತು ಬೆಳ್ಳುಳ್ಳಿ ಚಟ್ನಿ. ಇವುಗಳನ್ನು ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಮಾಡುವುದು ಹೇಗೆ?

1 ತೆಂಗಿನಕಾಯಿ ಚಟ್ನಿ :

ಬೇಕಾಗುವ ಪದಾರ್ಥಗಳು :
1 ಕಪ್‌ ತುರಿದ ತೆಂಗಿನಕಾಯಿ (ತೆಂಗಿನ ಹೋಳು), ಕಾಲು ಕಪ್‌ ಶೇಂಗಾ, ಕಾಲು ಕಪ್‌ ಪುಟಾಣಿ, 2 ರಿಂದ 3 ಹಸಿಮೆಣಸಿನಕಾಯಿ, 1 ಇಂಚು ಶುಂಠಿ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ :
ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಒಂದು ಮಿಕ್ಸರ್‌ ಜಾರ್‌ ಗೆ ಹಾಕಿ. ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಂದು ಬೌಲ್‌ಗೆ ವರ್ಗಾಯಿಸಿ. ಅದಕ್ಕೆ ಎಣ್ಣೆ, ಸಾಸಿವೆ, ಕರಿಬೇವಿನ ಸೊಪ್ಪು ಹಾಕಿ ಒಂದು ಒಗ್ಗರಣೆ ಕೊಡಿ.

ಇದನ್ನೂ ಓದಿ : Expensive Mango : ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣಿನ ಬಗ್ಗೆ ನಿಮಗೆ ಗೊತ್ತೇ?

2 ಟೊಮೆಟೋ ಚಟ್ನಿ :

ಬೇಕಾಗುವ ಪದಾರ್ಥಗಳು:
2 ಕಪ್‌ ಹೆಚ್ಚಿದ ಟೊಮೆಟೋ, 1 ಸಣ್ಣಗೆ ಹೆಚ್ಚಿದ ಈರುಳ್ಳಿ, 10 ಕರಿಬೇವಿನ ಎಲೆಗಳು, ಒಂದು ಇಂಚು ಶುಂಠಿ, 2 ರಿಂದ 3 ಹಸಿ ಮೆಣಸಿನಕಾಯಿ, 3 ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಚಮಚ ಸಾಸಿವೆ 3 ಚಮಚ ಅಡುಗೆ ಎಣ್ಣೆ.

ತಯಾರಿಸುವ ವಿಧಾನ :
ಒಂದು ಪಾನ್‌ಗೆ 2 ಚಮಚ ಅಡುಗೆ ಎಣ್ಣೆ ಹಾಕಿ. ಅದು ಬಿಸಿಯಾದ ಮೇಲೆ ಹೆಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕರಬೇವಿನ ಎಲೆಗಳು, ಶುಂಠಿ, ಟೊಮೆಟೋ, ಈರುಳ್ಳಿ, ಕೊತ್ತುಂಬರಿ ಸೊಪ್ಪು ಸೇರಿಸಿ ಹುರಿಯಿರಿ. ತಣ್ಣಾಗದ ನಂತರ ಮಿಕ್ಸರ್‌ ಜಾರ್‌ಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಎಣ್ಣೆ, ಸಾಸಿವೆ ಹಾಕಿ ಒಂದು ಒಗ್ಗರೆಣೆ ಕೊಡಿ.

3 ಬೆಳ್ಳುಳ್ಳಿ ಚಟ್ನಿ :

ಬೇಕಾಗುವ ಪದಾರ್ಥಗಳು :
ಅರ್ಧ ಕಪ್‌ ಸಿಪ್ಪೆ ತೆಗೆದ ಬೆಳ್ಳುಳ್ಳಿ, ಒಂದು ಚಿಕ್ಕ ನಿಂಬೆ ಗಾತ್ರದ ಹುಣಸೆಹಣ್ಣು, 5 ಕೆಂಪು ಮೆಣಸಿನಕಾಯಿ, 1 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ :
ಮೊದಲಿಗೆ ಬಿಸಿ ನೀರಿನಲ್ಲಿ 10 ನಿಮಿಷಗಳ ಕಾಲ ಕೆಂಪು ಮೆಣಸಿನ ಕಾಯಿಗಳನ್ನು ನೆನೆಸಿ. ಒಂದು ಮಿಕ್ಸರ್‌ ಜಾರ್‌ಗೆ ನೆನಸಿದ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಸೆಹಣ್ಣು, ಈರುಳ್ಳಿ ಮತ್ತು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೊಂದು ಒಗ್ಗರಣೆ ಕೊಡಿ.

ಇದನ್ನೂ ಓದಿ : Coconut Water Benefits : ದೇಹ ಜೀವ ಎರಡಕ್ಕೂ ಆಧಾರ ಎಳನೀರು; ಹೊಸವರ್ಷದ ಮೊದಲ ದಿನ ಒಂದು ಬೊಂಡ ಹೀರಿಬಿಡೋಣ

(Best Chutneys that can be paired with any kind of meal)

Comments are closed.