Textbook Controversy : ಭುಗಿಲೆದ್ದ ಪಠ್ಯಪುಸ್ತಕ ವಿವಾದ : ಶಿಕ್ಷಣ ಸಚಿವರ ವಜಾಕ್ಕೆ ಟ್ವೀಟ್ ವಾರ್

ಬೆಂಗಳೂರು : ಹಿಜಾಬ್, ಹಲಾಲ್, ಮಸೀದಿ ಮಂದಿರ ಬಳಿಕ ಈಗ ರಾಜ್ಯದಲ್ಲಿ ಪಠ್ಯಪುಸ್ತಕ ವಿವಾದ (Textbook Controversy) ಭುಗಿಲೆದ್ದಿದೆ. ಶಾಲಾ ಮಕ್ಕಳ ಪಠ್ಯಪುಸ್ತಕದಲ್ಲಿ ಪಠ್ಯಗಳನ್ನು ಸೇರ್ಪಡೆಗೊಳಿಸುವ ಹಾಗೂ ಕೈಬಿಡುವ ವಿಚಾರ ಈಗ ಎಡ ಹಾಗೂ ಬಲಪಂಥೀಯ ಹೋರಾಟಕ್ಕೆ ಮುನ್ನುಡಿ ಬರೆದಿದೆ. ಈ ಮಧ್ಯೆ ನಾಡಿನ ಸಾಹಿತಿಗಳು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದು ಹಲವು ಪಾಠಗಳನ್ನು ಕೈಬಿಟ್ಟ ಬಲಪಂಥಿಯ ಬರಹಗಾರ ರೋಹಿತ್ ಚಕ್ರತೀರ್ಥ ವಿರುದ್ಧ ಸಮರ ಸಾರಿದ್ದಾರೆ.

ಈ ಮಧ್ಯೆ ಸಚಿವ ಬಿ.ಸಿ.ನಾಗೇಶ್ ಪಠ್ಯಪುಸ್ತಕ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಯಾವುದೇ ಪಠ್ಯವನ್ನು ಕೈಬಿಡಲಾಗಿಲ್ಲ. ಆದರೆ ನಮ್ಮ ಸಂಸ್ಕೃತಿಗೆ ಮಾರಕವಾದ ಕೆಲ ವಿಚಾರಗಳನ್ನು ಕೈ ಬಿಟ್ಟಿದ್ದೇವೆ ಎಂದಿದ್ದರು. ಆದರೆ ಈಗ ಈ ವಿಚಾರ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪಠ್ಯ ಪರಿಷ್ಕರಣೆ ಖಂಡಿಸಿ ಟ್ವಿಟರ್ ವಾರ್ ಆರಂಭವಾಗಿದ್ದು, ಸುದ್ದಿಗೋಷ್ಟಿ ನಡೆಸಿ ಶಿಕ್ಷಣ ಸಚಿವರು ಸುಳ್ಳು ಹೇಳಿದ್ದಾರೆಂದು ಹಲವು ಹೋರಾಟಗಾರರು ಅಭಿಯಾನ ಆರಂಭಿಸಿದ್ದಾರೆ.

ಟ್ವಿಟರ್ ನಲ್ಲಿ #DismissLyingMinister ಹಾಗೂ #BCNageshExposed ಎಂಬ ಹ್ಯಾಶ್ ಟ್ಯಾಗ್ ನಡಿಯಲ್ಲಿ ಅಭಿಯಾನ ಆರಂಭವಾಗಿದೆ. ಶಿಕ್ಷಣ ಸಚಿವ ಬಿಸಿ ನಾಗೇಶ್ ರಾಜೀನಾಮೆ ಆಗ್ರಹ ಮತ್ತು ವಿವಾದಕ್ಕೆ ಮಧ್ಯ ಪ್ರವೇಶ ಮಾಡುವಂತೆ ಸಿಎಂಗೆ ಮನವಿ ಮಾಡಿ ಅಭಿಯಾನ ಆರಂಭಗೊಂಡಿದೆ. ಈ ಅಭಿಯಾನಕ್ಕೆ ಕರವೇ ನಾರಾಯಣಗೌಡರು ಟ್ವೀಟ್ ಮಾಡುವ ಮೂಲಕ ಸಾಥ್ ಕೊಟ್ಟಿದ್ದಾರೆ. ಅಲ್ಲದೇ ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ ಸೇರಿದಂತೆ ನಾಡಿನ ಶಿಕ್ಷಣ ತಜ್ಞರು ಸೇರಿಸಿ ಸಭೆ ನಡೆಸಿ ವಿವಾದ ಇತ್ಯರ್ಥ ಮಾಡುವಂತೆ ಸಿಎಂಗೆ ನಾರಾಯಣ ಗೌಡ್ರು ಮನವಿ ಮಾಡಿದ್ದಾರೆ.

ಅಲ್ಲದೇ ನಾನು ಎಡ, ಬಲ ಯಾವುದಕ್ಕು ಸೇರಿದವನಲ್ಲ, ನಾನು ಕುವೆಂಪು ಹೇಳಿದ ವಿಶ್ವ ಮಾನವ ಪಂಥಕ್ಕೆ ಸೇರಿದವನು. ಪಠ್ಯ ಪುಸ್ತಕ ಬದಲಾವಣೆ ಹೆಸರಿನಲ್ಲಿ ಆಗುತ್ತಿರುವ ಅಪಾಯಕಾರಿ ಬೆಳವಣಿಗೆ ಬಗ್ಗೆ ಗೊತ್ತಿದೆನಾವು ನಾಡಿನ ಸಾಹಿತಿಗಳ ಪರವಾಗಿ ನಿಲ್ಲುತ್ತೇವೆ ಎಂದು ಕರವೇ ನಾರಾಯಣ ಗೌಡ್ರು ಟ್ವೀಟ್ ಮಾಡಿದ್ದಾರೆ. ಕೇವಲ ಟ್ವೀಟ್ ಮಾತ್ರವಲ್ಲ ಕರವೇ ವತಿಯಿಂದ ಶುಕ್ರವಾರ ರಾಜ್ಯದಾದ್ಯಂತ ಹೋರಾಟ ಕೂಡ ನಡೆಯಲಿದ್ದು, ಕರವೇ ಕಾರ್ಯಕರ್ತರು ಕೂಡ ಟ್ವೀಟ್ ಅಭಿಯಾನದ ಮೂಲಕ ಪಠ್ಯ ವಿವಾದದ ಬಗ್ಗೆ ರಾಜ್ಯದ ಗಮನ ಸೆಳೆಯಲಿದ್ದಾರಂತೆ. ಒಟ್ಟಿನಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಪಠ್ಯಪುಸ್ತಕವೂ ವಿವಾದದ ಕೇಂದ್ರಬಿಂದುವಾಗಿದೆ.

ಇದನ್ನೂ ಓದಿ : baraguru ramachandrappa : ಪಠ್ಯದಲ್ಲಿ ಕೇಸರಿಕರಣ, ಕಾಂಗ್ರೆಸ್ಸೀಕರಣ ನೋಡಬೇಡಿ : ಬರಗೂರು ರಾಮಚಂದ್ರಪ್ಪ ಕಿವಿಮಾತು

ಇದನ್ನೂ ಓದಿ : taamboola prashne :ಏನಿದು ತಾಂಬೂಲ ಪ್ರಶ್ನೆ: ಹೇಗೆ ನಡೆಯುತ್ತೆ ಈ ಶಾಸ್ತ್ರ, ಇಲ್ಲಿದೆ ಮಾಹಿತಿ

Textbook Controversy tweet war for dismissal of Education Minister

Comments are closed.