Atal Bihari Vajpayee : ಅಟಲ್​ ಬಿಹಾರಿ ವಾಜಪೇಯಿ ಜೀವನಾಧಾರಿತ ಸಿನಿಮಾ ನಿರ್ಮಾಣಕ್ಕೆ ಬಾಲಿವುಡ್​ ತಯಾರಿ

Atal Bihari Vajpayee : ದೇಶ ಕಂಡ ಮಹಾನ್​ ರಾಜಕೀಯ ವ್ಯಕ್ತಿತ್ವ, ಅಜಾತ ಶತ್ರು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜೀವನ ಚರಿತ್ರೆಯನ್ನು ತೆರೆಯ ಮೇಲೆ ತಂದಿಡಲು ಬಾಲಿವುಡ್​ ನಿರ್ಮಾಪಕರಾದ ವಿನೋದ್​ ಭಾನುಶಾಲಿ ಹಾಗೂ ಸಂದೀಪ್​ ಸಿಂಗ್​ ಒಟ್ಟಾಗಿದ್ದಾರೆ. ಈ ಸಿನಿಮಾಗೆ ‘ ಮೇ ರಹೂ ಯಾ ನಾ ರಹೂ ಯೇ ದೇಶ ರೆಹನಾ ಚಾಯಿಯೆ – ಅಟಲ್​​’ ಎಂದು ಶೀರ್ಷಿಕೆ ನೀಡಲಾಗಿದೆ. ಅಂದರೆ ನಾನು ಇರಲಿ ಬಿಡಲಿ ಈ ದೇಶ ಮಾತ್ರ ಇರಬೇಕು ಎಂದರ್ಥವಾಗಿದೆ.


ಖ್ಯಾತ ಲೇಖಕ ಉಲ್ಲೇಖ್​ ಎನ್​​.ಪಿ ಬರೆದಿರುವ ದಿ ಅನ್‌ಟೋಲ್ಡ್ ವಾಜಪೇಯಿ: ಪೊಲಿಟಿಶಿಯನ್ ಅಂಡ್ ಪ್ಯಾರಡಾಕ್ಸ್ (The Untold Vajpayee: Politician and Paradox ) ಎಂಬ ಪುಸ್ತಕವನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ.


ಅಟಲ್​​ ಸಿನಿಮಾ ಕುರಿತು ಮಾತನಾಡಿದ ನಿರ್ಮಾಪಕ ವಿನೋದ್​, ನನ್ನ ಜೀವಮಾನದುದ್ದಕ್ಕೂ ನಾನು ಅಟಲ್​ ಬಿಹಾರಿ ವಾಜಪೇಯಿಯವರ ದೊಡ್ಡ ಅಭಿಮಾನಿಯಾಗಿದ್ದೇನೆ. ಹುಟ್ಟು ನಾಯಕ, ರಾಜನೀತಿ ಶ್ರೇಷ್ಠ, ದೂರದೃಷ್ಟಿಯನ್ನು ಹೊಂದಿದ್ದ ವಾಜಪೇಯಿಯವರು ಎಲ್ಲರಿಗಿಂತ ಮೇಲಿದ್ದಾರೆ. ನಮ್ಮ ರಾಷ್ಟ್ರವನ್ನು ನಿರ್ಮಿಸಲು ಅಟಲ್​ ನೀಡಿದ ಕೊಡುಗೆ ಅಪ್ರತಿಮವಾಗಿದೆ. ಭಾನುಶಾಲಿ ಸ್ಟುಡಿಯೋಸ್​ ಕಡೆಯಿಂದ ಇಂತದ್ದೊಂದು ಮೇರು ವ್ಯಕ್ತಿತ್ವವುಳ್ಳ ವ್ಯಕ್ತಿಯ ಜೀವನ ಚರಿತ್ರೆಯಾಧಾರಿತ ಸಿನಿಮಾ ಹೊರಬರುತ್ತಿರುವುದು ನಿಜಕ್ಕೂ ಒಂದು ಗೌರವದ ವಿಚಾರವಾಗಿದೆ ಎಂದು ಹೇಳಿದ್ದಾರೆ.


ಸಿನಿಮಾ ನಿರ್ಮಾಪಕನಾಗಿ ಹೇಳಲು ಸಾಧ್ಯವಾಗದ ಕತೆಗಳನ್ನು ಸಿನಿಮಾ ರೂಪದಲ್ಲಿ ತೋರಿಸುವುದು ಒಂದು ಅತ್ಯುತ್ತಮ ಮಾರ್ಗ ಎಂದು ನಾನು ಭಾವಿಸುತ್ತೇನೆ. ಈ ಸಿನಿಮಾವು ವಾಜಪೇಯಿ ಅವರ ರಾಜಕೀಯ ಸಿದ್ಧಾಂತ ಮಾತ್ರವಲ್ಲದೇ ಮಾನವೀಯ ಹಾಗೂ ಕಾವ್ಯಾತ್ಮಕ ಅಂಶಗಳನ್ನು ಅನಾವರಣಗೊಳಿಸಲಿದೆ. ಪ್ರತಿಪಕ್ಷಗಳೂ ಪ್ರೀತಿಸುತ್ತಿದ್ದ ಅಪ್ರತಿಮ ನಾಯಕ ಎಂದರೆ ಅದು ಅಟಲ್​ ಬಿಹಾರಿ ವಾಜಪೇಯಿ ಎಂದು ವಿನೋದ್​ ಹೇಳಿದ್ದಾರೆ.
ಅಟಲ್​ ಪಾತ್ರಕ್ಕೆ ನಾಯಕ ನಟನಿಗಾಗಿ ಹುಡುಕಾಟ ಆರಂಭವಾಗಿದೆ. ಶೀಘ್ರದಲ್ಲಿಯೇ ನಟ ಹಾಗೂ ನಿರ್ದೇಶಕರ ಘೋಷಣೆಯಾಗಲಿದೆ. ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಅವರ 99ನೇ ಜನ್ಮ ವಾರ್ಷಿಕೋತ್ಸವದ ನಿಮಿತ್ತ ಮುಂದಿನ ವರ್ಷ ಕ್ರಿಸ್​ಮಸ್​ ದಿನದಂದು ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದು ವಿನೋದ್​​ ಹೇಳಿದ್ದಾರೆ.

ಇದನ್ನು ಓದಿ : India Vs New Zealand : ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಟೂರ್: ಕಿವೀಸ್ ವಿರುದ್ಧ ಟಿ20, ಏಕದಿನ ಸರಣಿ ಆಡಲಿದೆ ಟೀಮ್ ಇಂಡಿಯಾ

ಇದನ್ನೂ ಓದಿ : No Place for Virat Kohli : ಸೆಹ್ವಾಗ್ ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿಯೇ ಇಲ್ಲ

Vinod Bhanushali and Sandeep Singh come together to make a biopic on late PM Atal Bihari Vajpayee

Comments are closed.