Herbs for Balancing Hormones : ಹಾರ್ಮೋನ್‌ಗಳ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುವ ಗಿಡಮೂಲಿಕೆಗಳು

ಯಾವುದೇ ವ್ಯಕ್ತಿಯ ಹಾರ್ಮೋನ್‌ಗಳಲ್ಲಿ ಅಸಮತೋಲನ (Hormones Imbalance) ಕಾಣಿಸಿದರೆ ಅದರಿಂದ ಅನೇಕ ತೊಂದರೆಗಳು ಪ್ರಾರಂಭವಾಗುತ್ತದೆ. ಅದು ಆ ವ್ಯಕ್ತಿಯ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ಸಂದೇಶವಾಹಕಗಳು. ಅವು ಜೀವಕೋಶಗಳು ದೇಹದೆಲ್ಲೆಡೆ ಸಂಚರಿಸಲು ಮತ್ತು ವಿವಿಧ ಕ್ರಿಯೆಗಳನ್ನು ಪ್ರಚೋದಿಸಲು ಸಹಾಯ ಮಾಡುತ್ತದೆ. ಇದು ದೇಹದ ಆಂತರಿಕ ವ್ಯವಸ್ಥೆಯ ತಳಹದಿಯಾಗಿದೆ. ಬೆಳವಣಿಗೆ, ಸಂತಾನೋತ್ಪತ್ತಿ, ಚಯಪಚಯ, ಉಷ್ಣತೆ ಮತ್ತು ಮಾನಸಿಕ ಆರೋಗ್ಯ ನಿಯಂತ್ರಿಸುತ್ತದೆ. ದೇಹದಲ್ಲಿ ಹಾರ್ಮೋನ್‌ಗಳ ಅಸಮತೋಲನವಾದರೆ ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಕೆಲವು ತೊಂದರೆಗಳನ್ನು ನಾವು ಮನೆಯಲ್ಲಿಯೇ ಸಿಗುವ ಗಿಡಮೂಲಿಕೆಗಳನ್ನು (Herbs for Balancing Hormones) ಉಪಯೋಗಿಸಿಕೊಂಡು ಸಮತೋಲನವನ್ನು ಸರಿದೂಗಿಸಿಕೊಳ್ಳಬಹುದು.

ಗಿಡಮೂಲಿಕೆಗಳೆಂದರೆ ಸಸ್ಯಗಳ ಗುಂಪು. ಅದರ ಎಲೆ, ಹೂವು, ಬೇರು ಮತ್ತು ಬೀಜಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ನಿಮಗೆ ಅಡುಗೆ ಮಾಡುವುದು ಇಷ್ಟವಾಗಿದ್ದರೆ, ನಿಮಗೆ ಇದರ ಬಗ್ಗೆ ಹೆಚ್ಚು ಪರಿಚಯವಿರುತ್ತದೆ. ಅಡುಗೆಮನೆಯಲ್ಲಿಯೇ ದೊರಕುವ ಅನೇಕ ಪದಾರ್ಥಗಳು ಗಿಡಮೂಲಿಕೆಗಳೇ ಆಗಿವೆ. ಅವುಗಳು ಸಾವಿರಾರು ವರ್ಷಗಳಿಂದ ನಮ್ಮ ಆರೋಗ್ಯದ ರಕ್ಷಣೆ ಮಾಡುತ್ತಿವೆ. ನಮ್ಮ ಪುರಾತನ ವೈದ್ಯ ಪದ್ಧತಿ ಆಯುರ್ವೇದದಲ್ಲಿ ಗಿಡಮೂಲಿಕೆಯನ್ನು ಸಮಪರ್ಕವಾಗಿ ಉಪಯೋಗಿಸುವುದನ್ನು ಹೇಳಿದ್ದಾರೆ.

ಗಿಡಮೂಲಿಕೆಗಳು ಸುರಕ್ಷಿತವೇ?

ಹಾರ್ಮೋನ್‌ಗಳ ಅಸಮತೋಲನವನ್ನು ಸರಿಪಡಿಸುವ ಹೆಚ್ಚಿನ ಗಿಡಮೂಲಿಕೆಗಳು ಸುರಕ್ಷಿತವಾಗಿವೆ. ಆದರೂ ಅವುಗಳನ್ನು ಸೇವಿಸುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಗರ್ಭಿಣಿ ಸ್ರೀಯರು, ಸ್ತನ್ಯಪಾನ ಮಾಡುವ ಮಹಿಳೆಯರು, ಮಾನಸಿಕ ಅಸ್ವಸ್ತತೆಯಿಂದ ಬಳಲುತ್ತಿದ್ದವರು, ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವವರು ಗಿಡಮೂಲಿಕೆಗಳನ್ನು ಉಪಯೋಗಿಸುವಾಗ ಎಚ್ಚರವಹಿಸುವುದು ಅತಿ ಅಗತ್ಯವಾಗಿದೆ. ದೇಹ ಪ್ರಕೃತಿಗೆ ಅನುಗುಣವಾಗಿ ಕೆಲವು ಗಿಡಮೂಲಿಕೆಗಳು ಹೆಚ್ಚಿನ ಅಡ್ಡ ಪರಿಣಾಮಗಳ ಅಪಾಯವನ್ನು ಹೊಂದಿರುತ್ತದೆ.

ಇದನ್ನೂ ಓದಿ : Leaves to Lose Weight : ನಿಮಗಿದು ಗೊತ್ತಾ; ಈ ಎಲೆಗಳನ್ನು ಸೇವಿಸುವುದರಿಂದಲೂ ತೂಕ ಕಡಿಮೆ ಮಾಡಿಕೊಳ್ಳಬಹುದು

ಹಾರ್ಮೋನ್‌ಗಳ ಅಸಮತೋಲನವನ್ನು ಸರಿಪಡಿಸಲು ಸಹಾಯ ಮಾಡುವ ಗಿಡಮೂಲಿಕೆಗಳು :

ಅಶ್ವಗಂಧ :
ಇದು ವಿಭಿನ್ನ ಉಪಚಾರಗಳಿಗೆ ಉಪಯೋಗಿಸುವ ಗಿಡಮೂಲಿಕೆಯಾಗಿದೆ. ಇದನ್ನು ಚಹಾದ ರೂಪದಲ್ಲಿ ಸೇವಿಸಬಹುದಾಗಿದೆ. ಇದರ ಬೇರಿನ ಪುಡಿಯು ನೈಸರ್ಗಿಕ ಪೂರಕವಾಗಿದೆ.

ಕರಿ ಜೀರಿಗೆ :
ಕರಿ ಜೀರಿಗೆಯಲ್ಲಿ ಆಂಟಿ–ಒಕ್ಸಿಡೆಂಟ್‌ ಗುಣಗಳ ಅಗಾಧವಾಗಿದೆ. ಕರಿ ಜೀರಿಗೆಯು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದು ಹಾರ್ಮೋನ್‌ಗಳ ಅಸಮತೋಲನವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ.

ಕಪ್ಪು ಕೊಹೋಶ್‌ ಬೇರು :
ಗಿಲಕಿ ಗಿಡ ಎಂದ ಕರಿಯುವ ಕಪ್ಪು ಕೋಹೋಶ್‌ ಬೇರುಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದೂ ಸಹ ಕರಿ ಜೀರಿಗೆಯ ವರ್ಗಕ್ಕೆ ಸೇರಿದ ಗಿಡವಾಗಿದೆ. ಇದನ್ನು ಚಹಾದಲ್ಲಿ ಅಥವಾ ನೀರು ಸೇರಿಸಿ ಊಟದ ನಂತರ ಸೇವಿಸುತ್ತಾರೆ.

(ಗಿಡಮೂಲಿಕೆಗಳನ್ನು ಉಪಯೋಗಿಸುವ ಮೊದಲು ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ)

ಇದನ್ನೂ ಓದಿ : Soaked Almonds : ಹೃದಯದ ಆರೋಗ್ಯ ಕಾಪಾಡಲು ಸೇವಿಸಿ, ನೀರಿನಲ್ಲಿ ನೆನೆಸಿದ ಬಾದಾಮಿ

(Herbs for Balancing Hormones maintain your hormone by adding these herbs to food)

Comments are closed.