Olavina Nildana:ಮನೆಯವರ ಮುಂದೆ ತಾರಿಣಿಗೆ ಪ್ರೇಮ ನಿವೇದನೆ ಮಾಡ್ತಾನಾ ಸಿದ್ದಾಂತ್ : ತಿರುವು ಪಡೆದ ಒಲವಿನ ನಿಲ್ದಾಣ

(Olavina Nildana siddhanta love)ಒಲವಿನ ನಿಲ್ಧಾಣ ಧಾರವಾಹಿಯ ಪ್ರತಿಯೊಂದು ಸಂಚಿಕೆಗಳು ವೀಕ್ಷಕರಲ್ಲಿ ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದೆ.ಅದರಲ್ಲೂ ತಾರಿಣಿ ಮತ್ತು ಸಿದ್ಧಾಂತ ಜೋಡಿಯನ್ನು ನೋಡುವುದಕ್ಕೆ ವೀಕ್ಷಕರು ಕಾತುರದಿಂದ ಕಾಯುತ್ತಿರುತ್ತಾರೆ. ಈ ಧಾರವಾಹಿ ಸಂಜೆ 6 ರಿಂದ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಒಂದು ಕಡೆ ಸಿದ್ದಾಂತ್‌ ತೋರಿಸುವಂತಹ ಕಾಳಜಿ ತಾರಿಣಿಗೆ ಮತ್ತು ಅವರ ಮನೆಯವರಿಗೆ ಇಷ್ಟವಾಗುತ್ತಿದೆ. ತಾರಿಣಿಯು ಕೂಡ ಸಿದ್ದಾಂತ್‌ ನ ಪ್ರೀತಿಯನ್ನು ಗಳಿಸುವುದಕ್ಕೆ ಸಾಕಷ್ಟು ಪ್ರಯತ್ನವನ್ನು ಪಟ್ಟು ಕೈಚೆಲ್ಲಿದ್ದಾಳೆ. ಮೇಲ್ನೋಟಕ್ಕೆ ತಾರಣಿಯ ಮೇಲೆ ಪ್ರೀತಿ ಇಲ್ಲ ಎಂದು ಹೇಳಿದರು ನಿಧಾನಕ್ಕೆ ತಾರಿಣಿ ಕಡೆ ವಾಲುತ್ತಿರುವಂತಿದೆ. ಮನೆಯವರ ಮುಂದೆ ತಾರಿಣಿಯನ್ನು ಇಷ್ಟಪಡುತ್ತಿರುವ ವಿಷಯವನ್ನು ತಿಳಿಸುತ್ತೇನೆ ಎಂದು ಅಪ್ಪನ ಹತ್ತಿರ ಹೇಳಿಕೊಂಡಿದ್ದಾನೆ.

(Olavina Nildana)ತಾರಿಣಿಯ ಮನೆಗೆ ಸಿದ್ಧಾಂತ್‌ ಅಪ್ಪನನ್ನು ಕರೆದುಕೊಂಡು ಹೋಗಿದ್ಧಾನೆ. ಮನೆಯವರೆಲ್ಲ ಸಿದ್ದಾಂತ್‌ ಫ್ಯಾಮಿಲಿಯನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು, ಇವರಿಬ್ಬರೆ ಬಂದಿರುವುದನ್ನು ನೋಡಿ ತಾರಿಣಿ ಮನೆಯವರು ಪ್ರಶ್ನೆಯನ್ನು ಮಾಡುತ್ತಾರೆ. ಆಗ ಸಿದ್ಧಾಂತ್‌ ಅವರೆಲ್ಲರೂ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದಾರೆ ನಾಳೆ ಲಗ್ನಪತ್ರಿಕೆ ಪೂಜೆಯ ಸಮಯಕ್ಕೆ ಬರುತ್ತಾರೆ ಎಂದು ಹೇಳುತ್ತಾನೆ. ಇತ್ತ ತಾರಿಣಿಯ ಮಾವ ಪಾಲಾಕ್ಷ ತಾರಿಣಿ ಮತ್ತು ಸಿದ್ಧಾಂತ್‌ ಮದುವೆಯನ್ನು ಮುರಿಯುವುದಕ್ಕೆ ಪಿತೂರಿ ಮಾಡಿದ್ದಾನೆ. ಸಿದ್ಧಾಂತ್‌ ಅಮ್ಮನಿಗೆ ತಾರಿಣಿ ಮತ್ತು ಸಿದ್ದಾಂತ್‌ ವಿಷಯ ತಿಳಿದಿಲ್ಲ ಎಂಬುದು ಪಾಲಾಕ್ಷನಿಗೆ ತಿಳಿದಿದೆ ಹಾಗಾಗಿ ಸಿದ್ಧಾಂತ್ ಅತ್ತಿಗೆ ಸಂಗೀತನಿಗೆ ಬರುವಂತೆ ಹೇಳಿದ್ದಾನೆ. ಸಂಗೀತ ಕೂಡ ಸಿದ್ದಾಂತ್‌ ಸುಳ್ಳು ಹೇಳುತ್ತಿದ್ದಾನೆ ಇಲ್ಲವ ಎಂಬ ಸತ್ಯವನ್ನು ತಿಳಿದುಕೊಳ್ಳೊದಕ್ಕೆ ಕಾತುರದಿಂದ ಕಾಯುತ್ತಿದ್ದಾಳೆ.

ಇದನ್ನೂ ಓದಿ:puneeth rajkumar :‘ಗಂಧದಗುಡಿ’ ಮೂಲಕ ಮತ್ತೊಮ್ಮೆ ಕರುನಾಡಿನಲ್ಲಿ ಜೀವಿಸಿದ ಅಪ್ಪು: ನಿರೀಕ್ಷೆಯಂತೆ ಕನ್ನಡಿಗರ ಮನಗೆದ್ದ ಅಪ್ಪು ಕನಸು

ಇದನ್ನೂ ಓದಿ:Elon Musk: ಎಲೋನ್‌ ಮಸ್ಕ್‌ ಟ್ವಿಟರ್‌ ನ ಹೊಸ ಮಾಲಿಕ; ಸಿಇಓ ಪರಾಗ್‌ ಅಗರ್ವಾಲ್‌ ವಜಾ

ಇದನ್ನೂ ಓದಿ:India will win T20 world cup : ಭಾರತ ಈ ಬಾರಿ ಟಿ20 ವಿಶ್ವಕಪ್ ಗೆಲ್ಲೋದು ಪಕ್ಕಾ.. ಕಾರಣ ಐರ್ಲೆಂಡ್

ಸಿದ್ಧಾಂತ್‌ ತಾರಿಣಿಗೆ ಮನೆಯವರ ಮುಂದೆ ಪ್ರೀತಿ ಮಾಡುತ್ತಿರುವ ವಿಷಯವನ್ನು ಹೇಳಬೇಕೆಂದು ಕಾಯುತ್ತಿದ್ದಾನೆ. ತಾರಿಣಿಗೂ ಕೂಡ ಮನೆಯವರ ಮುಂದೆ ಒಂದು ಸಪ್ರೈಸ್‌ ಕಾದಿದೆ ಎಂದು ಹೇಳಿದ್ದಾನೆ. ಆದರೆ ತಾರಿಣಿ ಮನೆಯವರ ಮುಂದೆ ಮದುವೆ ಇಷ್ಟ ಇಲ್ಲ ಎಂದು ಹೇಳುವುದು ಸಪ್ರೈಸ್‌ ಕೊಡುವುದಾ ಎಂದು ಬೇಸರವಾಗಿದ್ದಾಳೆ. ತಾರಿಣಿಗೆ ಪ್ರಪೋಸ್‌ ಮಾಡುವ ವಿಷಯ ಅವರ ಅಪ್ಪನಿಗೂ ಕೂಡ ತಿಳಿದಿದೆ. ಸಿದ್ಧಾಂತ್‌ ಅಪ್ಪ ಈಗಲೇ ಫೋನ್‌ ಮಾಡಿ ಕರೆಸಿಕೊಂಡು ವಿಷಯವನ್ನು ತಿಳಿಸಿದರೆ ತಾರಿಣಿ ಸಂತೋಷ ಪಡುತ್ತಿದ್ದಳು ಎಂದು ಹೇಳುತ್ತಾನೆ. ಆಗ ಸಿದ್ಧಾಂತ್‌ ಒಂದು ವರ್ಷ ಬಿಟ್ಟು ಈ ವಿಷಯವನ್ನು ಹೇಳುತ್ತಿಲ್ಲ, ನಾಳೆ ಮನೆಯವರ ಮುಂದೆ ಹೇಳುತ್ತೆನೆ ಈಗ ಮಲಗು ಎಂದು ಸುಮ್ಮನಾಗಿಸುತ್ತಾನೆ. ಸಿದ್ದಾಂತ್‌ ತಾರಿಣಿಯನ್ನು ಪ್ರೀತಿಸುತ್ತಿರುವ ವಿಷಯವನ್ನು ಎಲ್ಲರ ಮುಂದೆ ತಿಳಿಸಿದಾಗ ಸಿದ್ದಾಂತ್ ಮನೆಯವರ ರಿಯಾಕ್ಷನ್‌ ಹೇಗಿರುತ್ತದೆ ಎಂದು ಕಾದುನೋಡಬೇಕಿದೆ.

Siddhanta express his love to Tharini in front of the family: a station of favor that took a turn

Comments are closed.