Save Dish From Too Much Salt : ನೀವು ತಯಾರಿಸಿದ ಅಡುಗೆಯಲ್ಲಿ ಉಪ್ಪು ಹೆಚ್ಚಾಯಿತೇ? ಈ ಸಿಂಪಲ್‌ ಟ್ರಿಕ್‌ ಉಪಯೋಗಿಸಿ ನೋಡಿ

ಅಡುಗೆ ಮಾಡುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಒಮ್ಮೊಮ್ಮೆ ಹೀಗೂ ಆಗಿ ಬಿಡುತ್ತದೆ, ನಾವು ತಯಾರಿಸಿದ ಅಡುಗೆಯಲ್ಲಿ ಖಾರ, ಸಿಹಿ, ಉಪ್ಪು ಇವುಗಳಲ್ಲಿ ಯಾವುದಾದರೂ ಒಂದು ಹೆಚ್ಚಾಗಿ ಬಿಡುತ್ತದೆ. ಇಲ್ಲವೇ ಕಡಿಮೆಯಾಗುತ್ತದೆ. ಕಡಿಮೆಯಾದರೆ ಚಿಂತೆಯಿಲ್ಲ, ಹೆಚ್ಚಾದರೆ ಏನು ಮಾಡುವುದು? ಒಂದು ವೇಳೆ ಖಾರ ಹೆಚ್ಚಾದರೆ ಅದಕ್ಕೆ ಸ್ವಲ್ಪ ಸಿಹಿ (Sugar) ಸೇರಿಸಿದರೆ ಆಯಿತು. ಆದರೆ ಉಪ್ಪು ಹೆಚ್ಚಾದರೆ ಏನು ಮಾಡುವುದು (Too Much Salt)? ಕೆಲವೊಮ್ಮೆ ಅಡುಗೆ ಮಾಡುವಾಗ ಯಾವುದೋ ಯೋಚನೆಯಲ್ಲಿ ಎರಡು ಸಲ ಉಪ್ಪ ಹಾಕಿಬಿಟ್ಟಿರುತ್ತೇವೆ. ಅದು ರುಚಿ ನೋಡಿದ ಮೇಲೆಯೇ ತಿಳಿಯುತ್ತದೆ ಉಪ್ಪು ಹೆಚ್ಚಾಯಿತು ಎಂದು. ಮತ್ತೆ ಹೊಸದಾಗಿ ತಯಾರಿಸಲು ಸಮಯವಿಲ್ಲದಾಗ ಅದನ್ನು ಸರಿಪಡಿಸುವುದು ಹೇಗೆ ಎಂಬ ಗೊಂದಲದಲ್ಲಿ ಬೀಳುತ್ತೇವೆ (Save Dish From Too Much Salt). ಅದಕ್ಕಾಗಿ ಇಲ್ಲಿ ಕೆಲವು ಸರಳ ಟ್ರಿಕ್ಸ್‌ ಹೇಳಿದ್ದೇವೆ ಓದಿ. ಅವು ನಿಮ್ಮ ಹಾಳಾದ ಅಡುಗೆಯನ್ನು ಉಳಿಸುತ್ತವೆ.

ಆಲೂಗಡ್ಡೆ :
ಹಸಿ ಆಲೂಗಡ್ಡೆಯನ್ನು ಕತ್ತರಿಸಿ. ಅದನ್ನು ಉಪ್ಪಾದ ಅಡುಗೆಯಲ್ಲಿ ಸೇರಿಸಿ. ಆಲೂಗಡ್ಡೆ ಉಪ್ಪನ್ನು ಹೀರಿಕೊಳ್ಳುತ್ತದೆ. ಮುಖ್ಯವಾಗಿ ಸೂಪ್‌, ಸಾರು ಮುಂತಾದವುಗಳಲ್ಲಿ ಈ ಟ್ರಿಕ್‌ ಬಹಳ ಉಪಯುಕ್ತವಾಗಿದೆ.

ಸಕ್ಕರೆ:
ತಯಾರಿಸಿದ ಅಡುಗೆಯಲ್ಲಿ ಉಪ್ಪಿನಂಶವನ್ನು ಕಡಿಮೆ ಮಾಡಲು ಸಕ್ಕರೆ ಅಥವಾ ಮೇಪಲ್ ಸಿರಪ್‌ನಂತಹ ಸಿಹಿಕಾರಕವನ್ನು ಸೇರಿಸಬಹುದು. ಸಿಹಿ ಮತ್ತು ಉಪ್ಪು ಒಂದು ಒಳ್ಳೆಯ ಕಾಂಬಿನೇಷನ್‌ ಆಗಿದೆ. ಸಕ್ಕರೆಯು ಆಹಾರದಲ್ಲಿನ ಉಪ್ಪನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ನಿಂಬೆ ರಸ:
ಉಪ್ಪಾದ ಅಡುಗೆಗೆ ನಿಂಬೆ ರಸ, ಮತ್ತು ಆಪಲ್‌ ಸೈಡರ್ ವಿನೆಗರ್ ಸೇರಿಸಬಹುದು. ಏಕೆಂದರೆ ಅವುಗಳು ಉಪ್ಪಿನಂಶವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಟೊಮೆಟೊ ಸಾಸ್ ಅಥವಾ ಟೊಮೆಟೊ ಪೇಸ್ಟ್‌ನಂತಹ ಟೊಮೆಟೊ ಉತ್ಪನ್ನಗಳು ಸಹ ಯಶಸ್ವಿಯಾಗಿ ಉಪ್ಪಿನಾಂಶವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಟೊಮ್ಯಾಟೊ ಆಮ್ಲೀಯ ಗುಣಧರ್ಮವನ್ನು ಹೊಂದಿದೆ.

ಡೈರಿ ಉತ್ಪನ್ನಗಳು:
ಉಪ್ಪಾದ ಅಡುಗೆಗೆ ದಪ್ಪ ಕೆನೆ (ಕ್ರೀಮ್‌) , ಹಾಲು ಸೇರಿಸಬಹುದು. ಡೈರಿಯು ಸಕ್ಕರೆಯ ಅಂಶವನ್ನು ಹೊಂದಿರುತ್ತದೆ. ಇದು ಉಪ್ಪಿನ ರುಚಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಓಟ್ಸ್‌ ಹಾಲು ಅಥವಾ ತೆಂಗಿನ ಹಾಲು ಮುಂತಾದ ಡೈರಿ ಉತ್ಪನ್ನಗಳಲ್ಲದ ಹಾಲುಗಳು ಇದೇ ರೀತಿ ಕೆಲಸ ಮಾಡುತ್ತದೆ. ಅವುಗಳನ್ನು ಸಹ ಸೇರಿಸಬಹುದು.

ಇದನ್ನೂ ಓದಿ:Harmone Health: ಹಾರ್ಮೋನ್‌ ಸಮಸ್ಯೆ ಸಮತೋಲನಕ್ಕೆ ಇಲ್ಲಿವೆ ಸುಲಭ ಪರಿಹಾರ

ಇದನ್ನೂ ಓದಿ: Healthy herbal tea: ಚಳಿಗಾಲದಲ್ಲಿ ಆರೋಗ್ಯವಾಗಿರಲು ಕುಡಿಯಿರಿ ಈ 5 ಆರೋಗ್ಯಕರ ಗಿಡಮೂಲಿಕೆ ಚಹಾ

(Save Dish From Too Much Salt. If you accidentally added too much salt in the dish, try these simple hacks to save the dish)

Comments are closed.