Evening Snacks : ಸಂಜೆಯ ಸ್ನ್ಯಾಕ್ಸ್‌ಗೆ ಸ್ಪೆಷಲ್ ಕಟ್ಲೆಟ್‌ ರೆಸಿಪಿ

  • ಸುಶ್ಮಿತಾ ಸುಬ್ರಹ್ಮಣ್ಯ

ಸಂಜೆ ಹೊತ್ತು ಮಳೆ ಬರುವ ಸಮಯ ಏನಾದರು ಬಿಸಿ ಬಿಸಿ ತಿನ್ನಬೇಕೆನ್ನುವ ಆಸೆ ಯಾರಿಗೆ ಇರಲ್ಲ ಹೇಳಿ. ಅದರಲ್ಲು ಹೋಟೆಲ್‌ ತಿಂಡಿ ಮನೆಯಲ್ಲೇ ಸಿಕ್ಕರೇ ಯಾರುತಾನೆ ಬೀರ್ತಾರೆ. ನಿಮ್ಮ ಬಾಯಿ ರುಚಿ ಪಡಿಸಲು ಹೊಸ ಕಟ್ಲೆಟ್‌ ರೆಸಿಪಿಯನ್ನ ಒಂದು ಸಲ ಟ್ರೈ ಮಾಡಿ . ಯಾವರೀತಿಯಾಗಿ ತರಕಾರಿ ಮಸಾಲ ಕಟ್ಲೆಟ್‌ ತಯಾರಿಸೋದು ನಾವು ಹೇಳ್ತಿವಿ.

ಹಲವು ತರಕಾರಿಗಳಿಂದ ತಯಾರಿಸಬಹುದಾದ “ತರಕಾರಿ ಮಸಾಲ ಕಟ್ಲೆಟ್‌ ರೆಸಿಪಿ” ವೆಜ್‌ ಮಸಾಲ ಕಟ್ಲೆಟ್‌ ರೆಸಿಪಿ ಮಾಡುವ ಹಂತ ಹಂತದ ವಿಧಾನವನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ. ತರಕಾರಿಯನ್ನೇ ತಿನ್ನದ ಮಕ್ಕಳಿಗೆ, ನಿತ್ಯ ಅದೇ ತರಕಾರಿ ತಿಂದು ಬೇಜಾರ್‌ ಆಗಿರುವ ಹಿರಿಯರಿಗೆ, ಸಂಜೆಗೆ ವಿಭಿನ್ನವಾಗಿ ಆರೋಗ್ಯಕರ ಸ್ನ್ಯಾಕ್ಸ್‌ ಸವಿಯಲು ಈ ತರಕಾರಿ ಮಸಾಲ ಕಟ್ಲೆಟ್‌ ರೆಸಿಪಿ ಅತ್ಯುತ್ತಮ ಆಯ್ಕೆ.

ತರಕಾರಿ ಮಸಾಲ ಕಟ್ಲೆಟ್‌ ರೆಸಿಪಿ ಮಾಡುವ ವಿಧಾನ : ಬೇಕಾಗುವ ಪದಾರ್ಥಗಳು : ಕತ್ತರಿಸಿದ ಕ್ಯಾರೆಟ್ – ½ ಕಪ್, ಕತ್ತರಿಸಿದ ಫ್ರೆಂಚ್ ಬೀನ್ಸ್ – ¼ ಕಪ್, ಕತ್ತರಿಸಿದ ಆಲೂಗಡ್ಡೆ – 1 ಕಪ್‌, ತಾಜಾ ಹಸಿರು ಬಟಾಣಿ – 1 ಕಪ್‌, ಶುಂಠಿ – ಅರ್ಧ ಚಮಚ, ಹಸಿರು ಮೆಣಸಿನಕಾಯಿ – 1 ಚಮಚ, ಬೆಳ್ಳುಳ್ಳಿ – 3 ತುಂಡು, ¼ ಚಮಚ ಕೆಂಪು ಮೆಣಸಿನ ಪುಡಿ, – ¼ ಚಮಚ ಜೀರಿಗೆ ಪುಡಿ ,- ½ ಟೀ ಕೊತ್ತಂಬರಿ ಪುಡಿ ,- ¼ ಚಮಚ ಗರಂ ಮಸಾಲ ಪುಡಿ, – ¼ ಚಮಚ ಬ್ರೆಡ್ ತುಂಡುಗಳ ಪುಡಿ/ ಬ್ರೆಡ್ ಕ್ರಂಬ್ಸ್, – 1 ಕಪ್‌ ಕತ್ತರಿಸಿದ ಕೊತ್ತಂಬರಿ ಸೊಪ್ಪು, – 1 ಚಮಚ ಮೈದಾ ಹಿಟ್ಟು, – 1 ಕಪ್‌ ಉಪ್ಪು ರುಚಿಗೆ, ಎಣ್ಣೆ – ¼ ಕಪ್‌, ನೀರು – ಅರ್ಧ ಕಪ್‌.

Veg cutlet recipe

ತಯಾರಿಸುವ ವಿಧಾನ : ಕ್ಯಾರೆಟ್, ಆಲೂಗಡ್ಡೆ, ಫ್ರೆಂಚ್ ಬೀನ್ಸ್, ಬಟಾಣಿ ತರಕಾರಿಗಳನ್ನು ತೊಳೆದು ಸಣ್ಣದಾಗಿ ಕತ್ತರಿಸಿ ಪ್ರೆಶರ್ ಕುಕ್ಕರ್‌ನಲ್ಲಿ ಮೆತ್ತಗಾಗುವ ವರೆಗೆ ಕುದಿಸಿ. ನಂತರ ಬೇಯಿಸಿದ ತರಕಾರಿಗಳು ತಣ್ಣಗಾದ ನಂತರ ಅಗಲವಾದ ಬಟ್ಟಲಿನಲ್ಲಿ ಹಾಕಿ ಬ್ಲೆಂಡರ್‌ನಲ್ಲಿ ಚೆನ್ನಾಗಿ ಮ್ಯಾಶ್‌ ಮಾಡಿ/ ಮಸೆಯಿರಿ. ನಂತರ ಸಂಪೂರ್ಣ ಪೇಸ್ಟ್ ತಯಾರಿಸಬೇಡಿ ಆದರೆ ಸಣ್ಣ ಪ್ರಮಾಣದ ತರಕಾರಿಗಳು ಸ್ವಲ್ಪ ಚಂಕಿಯರ್ ಆಗಿ ಇರಿಸಿ. ಕತ್ತರಿಸಿದ ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಅರ್ಧ ಪೇಸ್ಟ್ ಮಾಡಿ ತರಕಾರಿ ಮಿಶ್ರಣಕ್ಕೆ ಹಾಕಿ.

ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಪುಡಿ, ಕೊತ್ತಂಬರಿ ಪುಡಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಬ್ರೆಡ್ ಕ್ರಂಬ್ಸ್ ಮತ್ತು ಉಪ್ಪನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಮತ್ತೊಂದು ಸಣ್ಣ ಬಟ್ಟಲಿನಲ್ಲಿ ಮೈದಾ ಹಿಟ್ಟು ಮತ್ತು ನೀರನ್ನು ಯಾವುದೇ ಉಂಡೆಗಳಿಲ್ಲದೆ ನಯವಾದ ಪೇಸ್ಟ್ ಮಾಡಿಕೊಳ್ಳಿ. ಈಗ ಕಟ್ಲೆಟ್ ಮಿಶ್ರಣವನ್ನು ತೆಗೆದುಕೊಂಡು ಚಪ್ಪಟೆ ಮಾಡುವ ಮೂಲಕ ಸಣ್ಣ ಗಾತ್ರದ ಮಧ್ಯಮ ಗಾತ್ರದ ದುಂಡಗಿನ ಕಟ್ಲೆಟ್‌ ಅಚ್ಚನ್ನು ಮಾಡಿಕೊಳ್ಳಿ.

ಕಟ್ಲೆಟ್ ತೆಗೆದುಕೊಂಡು ಮೈದಾ ಪೇಸ್ಟ್ ಅನ್ನು ನಿಧಾನವಾಗಿ ಅದ್ದಿ ನಂತರ ಕಟ್ಲೆಟ್ ಅನ್ನು ಬ್ರೆಡ್ ತುಂಡುಗಳ ಪುಡಿಯಲ್ಲಿ ಹುರುಳಿಸಿ, ಹೆಚ್ಚುವರಿ ಬ್ರೆಡ್ ಕ್ರಂಬ್ಸ್ ಅನ್ನು ತೆಗೆಯಿರಿ. ಈಗ ಬಿಸಿಯಾದ ತವಾ ಮೇಲೆ ಚೆನ್ನಾಗಿ ಎಣ್ಣೆ ಹಾಕಿ. ತಿಳಿ ಗೋಲ್ಡನ್ ಬಣ್ಣಕ್ಕೆ ಬರುವ ವರೆಗೂ ಎರಡೂ ಬದಿ ಫ್ಲಿಪ್ ಮಾಡಿ ಫ್ರೈ ಮಾಡಿ. ಅಗತ್ಯವಿದ್ದರೆ ಹೆಚ್ಚಿನ ಎಣ್ಣೆಯನ್ನು ಸೇರಿಸಿ ಗರಿಗರಿಯಾಗುವವರೆಗೆ ಹುರಿಯಿರಿ. ಈಗ ರುಚಿಕರ ತರಕಾರಿ ಮಸಾಲ ಕಟ್ಲೆಟ್ ಪುದೀನ ಚಟ್ನಿ / ಕೊತ್ತಂಬರಿ ಚಟ್ನಿ/ ಹುಣಸೆ ಚಟ್ನಿ/ ಟೊಮೆಟೊ ಕೆಚಪ್ ನೊಂದಿಗೆ ಸವಿಯಲು ಸಿದ್ಧ.

ಇದನ್ನೂ ಓದಿ : ದಿಢೀರ್ ಅಂತಾ ಟೊಮ್ಯೋಟೋ ಉಪ್ಪಿನಕಾಯಿ ಮಾಡೋದು ಹೇಗೆ ?

ಇದನ್ನೂ ಓದಿ : Onion Juice on Hair : ಕೂದಲ ರಕ್ಷಣೆಗೆ ಈರುಳ್ಳಿ ಬಳಸಿ

(Special Cutlet Recipe for Evening Snacks)

Comments are closed.