Sea Walk : ಪ್ರಕೃತಿ ಪ್ರಿಯ ನೆಚ್ಚಿನ ತಾಣ ಒತ್ತಿನೆಣೆ ಬೀಚ್‌ನಲ್ಲಿ ನಿರ್ಮಾಣವಾಗಲಿದೆ ಸೀ ವಾಕ್

  • ಸುಶ್ಮಿತಾ ಸುಬ್ರಹ್ಮಣ್ಯ

ಕುಂದಾಪುರ : ಒತ್ತಿನೆಣೆ ಬೀಚ್ ಈಗಾಗಲೇ ಪ್ರವಾಸಿಗರನ್ನುತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಒತ್ತಿನೆಣೆ ನೆಸರಧಾಮದಿಂದ ನೋಡಿದರೆ ಬೀಚ್‌ನ ಸುತ್ತಮುತ್ತದ ಸುಂದರ ದೃಶ್ಯ ಯಾರಾದರು ಒಮ್ಮೆ ಮೈಮರೆಯುತ್ತಾರೆ. ಕಾಡು, ಬೆಟ್ಟ, ನದಿ, ಸಮುದ್ರದ ಸಮ್ಮಿಲನವೇ ಈ ಒತ್ತಿನೆಣೆ.

ಇಂಥ ನಿಸರ್ಗವನ್ನು ನಾವು ಬೇರೆ ಕಡೆ ನೋಡುವುದು ಕಷ್ಟ. ಇಲ್ಲಿನ ಪ್ರದೇಶ ಸದಾಕಾಲ ಪ್ರವಾಸಿಗರಿಂದ ತುಂಬಿರುತ್ತದೆ. ಎಲ್ಲಿಯೂ ಕಾಣಸಿಗದ ಸಮದ್ರವನ್ನು ಎತ್ತರದಿಂದ ನೋಡುವ ಸೌಕರ್ಯ ಇಲ್ಲಿದೆ. ಇದರ ಜೊತೆ ನಮ್ಮ ಸರಕಾರವು ಈ ಸ್ಥಳವನ್ನು ಇನ್ನಷ್ಟು ಅಬಿವೃದ್ದಿಗೊಳಿಸಲು ಮುಂದಾಗಿದೆ .

ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಕೇಂದ್ರವಾಗಿ ಮಾರ್ಪಟ್ಟ ನಂತರದಲ್ಲಿ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳು ಸಾಕಾರಗೊಳ್ಳುತ್ತಿದೆ. ಅದರಲ್ಲಿ ಒಂದು ಒತ್ತಿನೆಣೆ ಯನ್ನು ಅಭಿವೃದ್ಧಿಗೊಳಿಸುವ ಕಾರ್ಯ. ರಾಜ್ಯ ಸರಕಾರವು ಈ ಪ್ರವಾಸಿತಾಣದಲ್ಲಿ ಸೀವಾಕ್ ನಿರ್ಮಾಣದ ಬಗ್ಗೆ ಚಿಂತನೆ ನಡೆಸಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಮಲ್ಪೆ, ಕುಂದಾಪುರ ಕೋಡಿಯಲ್ಲಿ ಈಗಾಗಲೇ ಸೀ ವಾಕ್‌ ನಿರ್ಮಾಣವಾಗಿದ್ದು, ಪ್ರವಾಸಿಗರಿಂದ ಮೆಚ್ಚುಗೆ ಗಳಿಸಿದೆ. ಅದ್ರಲ್ಲೂ ಉಡುಪಿ ಜಿಲ್ಲೆಯಲ್ಲಿನ ಹಲವು ಬೀಚ್‌ಗಳನ್ನು ಈಗಾಗಲೇ ಅಭಿವೃದ್ದಿ ಪಡಿಸಲಾಗಿದೆ. ಜಿಲ್ಲಾಧಿಕಾರಿಗಳೇ ಖುದ್ದು ವಿಶೇಷ ಮುತುವರ್ಜಿ ತೋರಿಸುತ್ತಿದ್ದಾರೆ. ಅದ್ರಲ್ಲೂ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಒತ್ತಿನೆಣೆ ಬೀಚ್‌ ಸರಹಕಾರಿಯಾಗಿದೆ.

ರಾಜ್ಯದಲ್ಲಿ ಕರಾವಳಿ, ಜಲ ಪ್ರವಾಸೋದ್ಯಮವನ್ನು ಉತ್ತೇಜಿಸಿ ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶ ದಿಂದ ಹಲವು ಅಭಿವೃದ್ದಿ ಯೋಜನೆಗಳನ್ನು ಆರಂಭಿಸಲಾಗುತ್ತಿದ್ದು, ರಾಜ್ಯಸರಕಾರದ ಕನಸು ಚಿಗುರೊಡೆಯುತ್ತಿದೆ. ಜಲ ಆಧಾರಿತ ಪ್ರವಾಸೋದ್ಯಮ ಚಟುವಟಿಕೆ ಆರಂಭಿಸುವುದು ಇರದ ಮುಖ್ಯ ಅಂಶಗಳಾಗಿವೆ.

ಇದನ್ನೂ ಓದಿ : ಇದು ಪ್ರವಾಸಿಗರ ಸ್ವರ್ಗ… !!! ಬ್ಯೂಟಿ ಆಫ್ ದೇವರಮನೆ

ಮರೀನಾ, ಸೀ ಪ್ಲೇನ್ ಸೌಲಭ್ಯ ಕೂಡ ಇಲ್ಲಿ ಶುರುಮಾಡುವ ಬಗ್ಗೆ ರಾಜ್ಯ ಸರಕಾರವು ಚಿಂತನೆ ನಡೆಸಿದೆ. ಸೋಮೇಶ್ವರ ಕಡಲ ಕಿನಾರೆಯ ಸೌಂದರ್ಯ ಇನ್ನು ಮುಂದೆ ಸಂಪೂರ್ಣ ವಾಗಿ ಬದಲಾಗಲಿದೆ. ಇದು ಬೈಂದೂರಿನ ಹಾಗೂ ರಾಜ್ಯದ ಸಾಮಾಜಿಕ- ಆರ್ಥಿಕ ಅಭಿವೃದ್ಧಿಗೆ ವಿಶೇಷ ಕೊಡುಗೆಯಾಗಲಿದೆ.

ಇದನ್ನೂ ಓದಿ : ಹೆಂಡ್ತಿ ಜೊತೆ ಹನಿಮೂನ್ ಹೋಗೋ ಹೊತ್ತಲ್ಲಿ…ಅಮ್ಮನ ಜೊತೆ ಟ್ರಿಪ್…!! ಪೋಟೋ ನೋಡಿ ಮೆಚ್ಚಿದ ನೆಟ್ಟಿಗರು…!!

(Ottinene beach famous tourist place in Udupi )

Comments are closed.