Most Searched Recipe on Google in 2022 : ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ರೆಸಿಪಿ ಯಾವುದು ಗೊತ್ತಾ…

ರುಚಿಯಾದ ಅಡುಗೆಯಿದ್ದರೆ ಒಂದು ತುತ್ತು ಹೆಚ್ಚು ಊಟ, ನಮ್ಮ ಹೊಟ್ಟೆಯೊಳಗೆ ಇಳಿಯುತ್ತದೆ. ರುಚಿಯಾದ, ಕೆನೆಭರಿತ, ಪೌಷ್ಟಿಕಾಂಶವಿರುವ ಅಡಿಗೆಯಾದರಂತೂ ಇನ್ನೂ ಸ್ವಲ್ಪ ಜಾಸ್ತಿ ಅನ್ನಬಹುದು. ಹಾಗಾದರೆ ಅಂತಹ ರೆಸಿಪಿ ಹುಡುಕುತ್ತಿದ್ದೀರಾ? ಅದಕ್ಕೆ ಫುಲ್‌ಸ್ಟಾಪ್‌ ಎಂದರೆ ಪನೀರ್‌. ಹೌದು ಗೂಗಲ್‌ನ ವರದಿಯ ಪ್ರಕಾರ 2022ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಸರ್ಚ್‌ ಮಾಡಿದ ಅಡುಗೆ (Most Searched Recipe on Google in 2022) ಪನೀರ್‌ ಪಸಂದ್‌ (Paneer Pasanda) ಎಂದರೆ ಆಶ್ಚರ್ಯವಾಗುತ್ತಿದೆಯೇ. ಆದರೂ ನಿಜ. ಗೂಗಲ್‌ ಸರ್ಚ್‌ ಇಂಜಿನ್‌ ನೀಡಿದ ವರ್ಷದ ಸರ್ಚ್‌ ರಿಪೋರ್ಟ್‌ನ ಪ್ರಕಾರ ಜನರು ಅತಿ ಹೆಚ್ಚು ಸರ್ಚ್ ಮಾಡಿದ ಅಡುಗೆ ಇದಾಗಿದೆ. ರುಚಿಯಾದ, ಪರಿಮಳದ ಪನೀರ್‌ ಪಸಂದ ಯಾರಿಗೆ ಇಷ್ಟವಿಲ್ಲ ಹೇಳಿ.

ಪಸಂದ್‌ ಅಂದರೆ ಟೊಮೆಟೊ ಮತ್ತು ಈರುಳ್ಳಿಗೆ ಭಾರತೀಯರ ಮಸಾಲೆಗಳನ್ನು ಸೇರಿಸಿ ಮಾಡುವ ಸ್ವಲ್ಪ ದಪ್ಪವಾದ ಗ್ರೇವಿ. ಅದರ ಮೇಲೆ ಬಾದಾಮಿ ಮತ್ತು ಕ್ರೀಮ್‌ ಅನ್ನು ಹಾಕಲಾಗುತ್ತದೆ. ಬಹಳಷ್ಟು ಶೆಫ್‌ಗಳು ಅದರ ಸ್ವಾದ ಹೆಚ್ಚಿಸುವ ಸಲುವಾಗಿ ಬಾದಾಮಿಯ ಪೇಸ್ಟ್‌ ಅನ್ನು ಸಹ ಅದರಲ್ಲಿ ಸೇರಿಸುತ್ತಾರೆ. ಇದನ್ನು ಚಪಾತಿ, ನಾನ್‌, ರೋಟಿಗಳ ಜೊತೆ ತಿನ್ನಲಾಗುತ್ತದೆ. ಆದರೆ ಈ ರೆಸಿಪಿಗೆ ಮುಖ್ಯವಾದದ್ದು ಪನೀರ್‌. ರುಚಿಯಾದ ಮತ್ತು ಪೋಷಕಾಂಶಗಳಿಂದ ಕೂಡಿದ ಇದನ್ನು ಬರಿ ಸಸ್ಯಹಾರಿಗಳಷ್ಟೇ ಅಲ್ಲ, ಮಾಂಸಾಹಾರಿಗಳು ಇಷ್ಟ ಪಡುತ್ತಾರೆ.

ಪನೀರ್‌ ಪಸಂದ್‌ನ ಇತಿಹಾಸ :
ಇದು ಮೊಘಲರ ಕಾಲದ ರೆಸಿಪಿ ಎಂದು ವ್ಯಾಪಕವಾಗಿ ನಂಬಲಾಗಿದೆ. ಆಗ ಪನೀರ್‌ನ ಬದಲಿಗೆ ಮೇಕೆಯ ಮಾಂಸವನ್ನು ಬಳಸುತ್ತಿದ್ದರಂತೆ. ಆಗ ಅದು ಮಾಂಸಾಹಾರ ಭಕ್ಷ್ಯವಾಗಿತ್ತಂತೆ. ಮೊಘಲ ಆಸ್ಥಾನದಲ್ಲಿದ್ದ ಕಾಯಸ್ತ ಸಮುದಾಯದ ಜನರು ಮಾಂಸದ ಬದಲಿಗೆ ಪನೀರ್‌ ಅನ್ನು ಪಸಂದ್‌ನಲ್ಲಿ ಸೇರಿಸಿ ಅದನ್ನು ಪನೀರ್‌ ಪಸಂದ್‌ ಎಂದು ಕರೆಯಲು ಪ್ರಾರಂಭಿಸಿದರಂತೆ.

ಪನೀರ್‌ನ ಆರೋಗ್ಯ ಪ್ರಯೋಜನಗಳು :
ಪನೀರ್‌ ನಮ್ಮ ದೇಹಕ್ಕೆ ಅನೇಕ ಅದ್ಭುತ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಹೊಟ್ಟೆಯನ್ನು ತುಂಬಿಸುವುದರ ಜೊತೆಗೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 100 ಗ್ರಾಂ ಪನೀರ್‌ನಲ್ಲಿ 20 ಗ್ರಾಂ ಫ್ಯಾಟ್‌ ಮತ್ತು ಪ್ರೋಟೀನ್‌ ಇರುತ್ತದೆ. ಒಂದು ಗ್ರಾಂನಷ್ಟು ಕಾರ್ಬೋಹೈಡ್ರೇಟ್‌ ಇರುವುದು. ಇದು ಮಾಂಸದ ಬದಲಿಗೆ ಉಪಯೋಗಿಸಬಹುದಾದ ಉತ್ತಮ ವಸ್ತುವಾಗಿದೆ. ಇದನ್ನು ಪ್ರೋಟೀನ್‌–ರಿಚ್‌ ಡಯಟ್‌ ನಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಪನೀರ್‌ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ ಅಂಶ ಹೆಚ್ಚಿರುವುದರಿಂದ ಮಹಿಳೆಯರಿಗೆ ಕಾಣಿಸಿಕೊಳ್ಳುವ ಬ್ರೆಸ್ಟ್‌ ಕ್ಯಾನ್ಸರ್‌ ಅನ್ನು ತಡೆಯುತ್ತದೆ. ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಇದು ಮೂಳೆ ಮತ್ತು ಹಲ್ಲುಗಳ ಆರೋಗ್ಯ ಕಾಪಾಡುತ್ತದೆ. ಪ್ರೋಟೀನ್‌ ಅಧಿಕವಾಗಿರುವುದರಿಂದ ಇದು ಹಸಿವನ್ನು ಬಹಳ ಕಾಲದ ವರೆಗೆ ತಡೆಯುತ್ತದೆ. ಇದಲ್ಲದೇ ಪನೀರ್‌ನಲ್ಲಿರುವ ಫ್ಯಾಟಿ ಆಸಿಡ್‌ಗಳು ಹೆಚ್ಚಿನ ಕ್ಯಾಲೋರಿಯನ್ನು ಬರ್ನ್‌ ಮಾಡಲು ಸಹಾಯ ಮಾಡುತ್ತದೆ. ಇದಲ್ಲಿರುವ ಫಾಸ್ಪರಸ್‌ ಮತ್ತು ಮ್ಯಾಗ್ನೇಸಿಯಂ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪನೀರ್‌ನಲ್ಲಿರುವ ಮ್ಯಗ್ನೇಸಿಯಂ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ : Flax Seed Gel:ತಲೆ ಕೂದಲು ಕಪ್ಪಾಗಬೇಕೆ ? ಹಾಗಾದ್ರೆ ಬಳಸಿ ಅಗಸೆ ಬೀಜದ ಜೆಲ್

ಇದನ್ನೂ ಓದಿ : Palak Dal Khichdi: ಚಳಿಗಾಲದಲ್ಲೊಂದು ಆರೋಗ್ಯಕರ ಪಾಕವಿಧಾನ; ಪಾಲಕ್ ದಾಲ್ ಖಿಚಡಿ ರೆಸಿಪಿ


(The most Searched Recipe on Google in 2022 is Paneer Pasanda. Know the health benefits of this dish)

Comments are closed.