Weight Loss Tips:ವೈಟ್ ಲಾಸ್ ಮಾಡಲು ಪ್ರಯತ್ನಿಸುತ್ತಿದ್ದೀರಾ ! ಆಹಾರದ ಮೂಲಕವೇ ವೈಟ್ ಲಾಸ್ ಮಾಡಲು ಇಲ್ಲಿದೆ ಒಂದಿಷ್ಟು ಟಿಪ್ಸ್

ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಬುದ್ದಿವಂತಿಕೆಯಿಂದ ತಿನ್ನುವುದು ನಿಮಗೆ ಅತ್ಯಂತ ಮುಖ್ಯವಾದ ವಿಷಯವಾಗಿರಬೇಕು. ಸರಿಯಾದ ಆಹಾರವನ್ನು ಆರಿಸುವುದು ನಿಮ್ಮ ವೈಟ್ ಲಾಸ್ ಗೆ ಅತ್ಯಂತ ಮುಖ್ಯವಾದ ಅಂಶ. ವ್ಯಾಯಾಮದೊಂದಿಗೆ ಉತ್ತಮ ಡಯಟ್ ಅನ್ನು ಫಾಲೋ ಮಾಡಿ ನಿಮ್ಮ ತೂಕ ಕಮ್ಮಿ ಮಾಡಬಹುದು. ಸೆಲರಿ ಮತ್ತು ಫ್ಯಾನ್ಸಿ ಬೆರ್ರಿಗಳಂತಹ ದುಬಾರಿ ಆಹಾರ ಪದಾರ್ಥಗಳು ಈಗ ಎಲ್ಲ ಕಡೆ ಪ್ರಸಿದ್ದಿ ಪಡೆಯುತ್ತಿವೆ . ಇದರ ಬದಲು ಈ ಕೆಳಗಿನ ಭಾರತೀಯ ಪದಾರ್ಥಗಳು ಅತ್ಯಂತ ಹೆಲ್ದಿಯ ಜೊತೆ ಪಾಕೆಟ್ ಫ್ರೆಂಡ್ಲಿ ಸೂಪರ್ ಫುಡ್ ಆಗಿದೆ(Weight Loss Tips).

ದಲಿಯಾ
ದಲಿಯಾ ಫೈಬರ್ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಫೈಬರ್ ಜೀರ್ಣಕ್ರಿಯೆ ಮತ್ತು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಪ್ರೋಟೀನ್ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳುದರಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿರುತ್ತದೆ ಮತ್ತು ನಿಮ್ಮ ಹಸಿವನ್ನು ನೀಗಿಸುತ್ತದೆ .

ಪಿಸ್ತಾ
ಪಿಸ್ತಾಗಳು ನಿಜವಾಗಿಯೂ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ತೂಕ ಇಳಿಸುವ ಉತ್ಸಾಹದಲ್ಲಿರುವವರಿಗೆ ಇದು ಉತ್ತಮ ತಿಂಡಿ ಆಯ್ಕೆಯಾಗಿದೆ. ಜರ್ನಲ್ ಆಫ್ ಅಮೇರಿಕನ್ ಕಾಲೇಜ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನವು ಪ್ರೆಟ್ಜೆಲ್‌ಗಳ ಬದಲಿಗೆ ಪಿಸ್ತಾಗಳನ್ನು ಸೇವಿಸಿದವರು ತಮ್ಮ ಬಾಡಿ ಮಾಸ್ ಇಂಡೆಕ್ಸ್‌ನಲ್ಲಿ (ಬಿಎಂಐ) ಎರಡು ಪಟ್ಟು ಕಡಿತವನ್ನು ಅನುಭವಿಸಿದ್ದಾರೆ ಎಂದು ತೀರ್ಮಾನಿಸಿದೆ.

ಮೊಸರು
ದಹಿ ಅಥವಾ ಮೊಸರು, ಪ್ರೋಬಯಾಟಿಕ್ ಅಂಶಗಳು ಮತ್ತು ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳ ಉತ್ತಮ ಮೂಲವಾಗಿದೆ, ಇದು ಜೀರ್ಣಾಂಗ ವ್ಯವಸ್ಥೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುದರ ಜೊತೆಗೆ ಪೋಷಕಾಂಶಗಳ ಉತ್ತಮ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಹೆಚ್ಚಿನ ಕ್ಯಾಲ್ಸಿಯಂ ಅಂಶ ಹೊಂದಿದ ಕಾರಣ ಮೊಸರು ಉತ್ತಮ ಕೊಬ್ಬು ಬರ್ನರ್ ಕೂಡ ಆಗಿದೆ.

ಹುಣಸೆಹಣ್ಣು
ಇಮ್ಲಿ ಅಥವಾ ಹುಣಸೆಹಣ್ಣು ಹೈಡ್ರಾಕ್ಸಿಸಿಟ್ರಿಕ್ ಆಮ್ಲ (HCA) ಎಂದು ಕರೆಯಲ್ಪಡುವ ಕಾಂಪೌಂಡ್ ಹೊಂದಿರುತ್ತದೆ, ಇದು ಹಸಿವನ್ನು ನಿಗ್ರಹಿಸುತ್ತದೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಇದು ಮೆದುಳಿನಲ್ಲಿ ಸಿರೊಟೋನಿನ್ ಎಂಬ ಹಾರ್ಮೋನ್ ಬಿಡುಗಡೆ ಮಾಡುವ ಕಾರಣ ನಮಗೆ ಹೆಚ್ಚು ಹಸಿವಾಗುವುದಿಲ್ಲ.

ಸಿಹಿ ಆಲೂಗಡ್ಡೆ
ಸಿಹಿ ಆಲೂಗಡ್ಡೆಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ನೀವು ಖಂಡಿತವಾಗಿಯೂ ಅವುಗಳನ್ನು ಡಯಟ್ ನಲ್ಲಿ ಸೇರಿಸಬಹುದು . ಅವು ಫೈಬರ್ನಲ್ಲಿ ಸಮೃದ್ಧವಾಗಿವೆ ಮತ್ತು ಬಹಳಷ್ಟು ನೀರನ್ನು ಹೊಂದಿರುತ್ತವೆ, ಇದು ಅವುಗಳನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.

ಟೊಮೆಟೊ
ಟೊಮ್ಯಾಟೋ ನಿಮ್ಮ ಹಸಿವನ್ನು ನಿಗ್ರಹಿಸಲು ಪರಿಗಣಿಸಲಾಗುತ್ತದೆ. ಈ ಹಣ್ಣಿನಲ್ಲಿ ನೀರು ಮತ್ತು ನಾರಿನಂಶವು ತುಂಬಾ ಹೆಚ್ಚಿರುವುದರಿಂದ ಹೆಚ್ಚು ತಿಂದಂತೆ ಅನಿಸುತ್ತದೆ . ತೈವಾನ್‌ನ ವೈದ್ಯಕೀಯ ವಿಶ್ವವಿದ್ಯಾಲಯದ ಅಧ್ಯಯನವು ಎರಡು ತಿಂಗಳ ಕಾಲ ದಿನಕ್ಕೆ ಸುಮಾರು 250 ಮಿಲಿ ಟೊಮೆಟೊ ರಸವನ್ನು ಸೇವಿಸಿದ ಮಹಿಳೆಯರಲ್ಲಿ ದೇಹದ ಕೊಬ್ಬು ಮತ್ತು ತೂಕದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಎಂದು ಕಂಡುಹಿಡಿದಿದೆ.

ಕಡಲೆ
ದಲಿಯಂತೆಯೇ, ಕಡಲೆ ಅಥವಾ ಚನಾವು ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದೆ, ಇದು ವೆಯಿಟ್ ಲಾಸ್ ಗೆ ಸಹಾಯ ಮಾಡುತ್ತದೆ. ಫೈಬರ್ ಅಂಶವು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತೆ ಇರಿಸುತ್ತದೆ ಮತ್ತು ನಿಮ್ಮ ಕರುಳಿನ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ.

ಇದನ್ನೂ ಓದಿ : Rainbow Diet : ರೈನ್ ಬೋ ಡಯಟ್ ಎಂದರೇನು? ಈ ಕಲರ್ ಫುಲ್ ಡಯಟ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

(Weight Loss Tips)

Comments are closed.