ಬೆಳ್ತಂಗಡಿ: ಟಿಪ್ಪರ್​ನಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಮುಖ್ಯೋಪಾಧ್ಯಾಯ, ವಿಡಿಯೋ ವೈರಲ್​

ಬೆಳ್ತಂಗಡಿ: ಶಾಲಾ ಮಕ್ಕಳ ಅಧ್ಯಯನ ಪ್ರವಾಸದ ವಿಚಾರದಲ್ಲಿ ಮುಖ್ಯೋಪಾಧ್ಯಾಯರು ಭಾರೀ ನಿರ್ಲಕ್ಷ್ಯ ತೋರಿದ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ನಡೆದಿದೆ. ಜೇನು ಕೃಷಿ ಅಧ್ಯಯನ ವೀಕ್ಷಣೆಗೆ ತೆರೆದ ಪಿಕಪ್​ ಹಾಗೂ ಟಿಪ್ಪರ್​ ಗಾಡಿಗಳಲ್ಲಿ ವಿದ್ಯಾರ್ಥಿಗಳನ್ನು ದನ ತುಂಬಿದಂತೆ ತುಂಬಿಕೊಂಡು ಹೋಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ವಿಡಿಯೋ ವೈರಲ್​ ಆಗಿದೆ.

ಬಳೆಂಜದ ಹಿರಿಯ ಪ್ರಾಥಮಿಕ ಶಾಲೆಯ ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್​ ಎಂಬವರು ಈ ರೀತಿಯ ಅವಾಂತರ ಮಾಡಿದ್ದಾರೆ. ಜೇನು ಕೃಷಿ ಅಧ್ಯಯನಕ್ಕೆಂದು ನಾಲ್ಕೂರು ಬಳಿ ಇರುವ ಅನಿಲ್​ ಫಾರ್ಮ್​ಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಮುಖ್ಯೋಪಾಧ್ಯಾಯ ಕಿರಣ್​ ಪ್ಲಾನ್​ ರೂಪಿಸಿದ್ದರು.

ಇದನ್ನೂ ಓದಿ: 2011ಕ್ಕೂ ಮೊದಲು ನೇಮಕಗೊಂಡ ಶಿಕ್ಷಕರಿಗೆ ಹೊಸ ನಿಯಮ : ಬಡ್ತಿ ಬೇಕೆಂದರೆ ಈ ಅರ್ಹತೆ ಇರುವುದು ಕಡ್ಡಾಯ

ಆದರೆ ವಿದ್ಯಾರ್ಥಿಗಳಿಗೆ ಸೂಕ್ತ ವಾಹನ ವ್ಯವಸ್ಥೆ ಮಾಡುವುದನ್ನು ಬಿಟ್ಟು ವಿದ್ಯಾರ್ಥಿಗಳನ್ನು ಫಾರ್ಮ್​ಗೆ ಕರೆದುಕೊಂಡು ಹೋಗಲು ಪಿಕಪ್​ ಹಾಗೂ ಟಿಪ್ಪರ್​ ಗಾಡಿಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ಸ್ಥಳೀಯರು ಇದರ ವಿಡಿಯೋ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು ಎರಡೂ ವಾಹನಗಳ ಚಾಲಕರ ಮೇಲೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories