ಬೆಳ್ತಂಗಡಿ : ರಾತ್ರಿ ವೇಳೆ ಮನೆಗೆ ಎಂಟ್ರಿಕೊಟ್ಟ ಚಿರತೆ : ಸಾಕು ನಾಯಿ ಹೊತ್ತೊಯ್ದು ಪರಾರಿ
ಬೆಳ್ತಂಗಡಿ : ran away with a pet dog: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗ ವ್ಯಾಘ್ರಗಳ ಕಾಟ ಜೋರಾಗಿದೆ. ಬೆಳ್ತಂಗಡಿ(Belthangady) ತಾಲೂಕಿನ ದಿಡುಪೆ ಗ್ರಾಮದ ಕೊಂಡಾಳು ಎಂಬಲ್ಲಿ ಮನೆಯ ಹೊರಗಡೆ ಮಲಗಿದ್ದ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದ ಘಟನೆಯು ಬೆಳಕಿಗೆ ಬಂದಿದೆ.
ಕೊಂಡಾಳು ನಾರಾಯಣ ಗೌಡ ಎಂಬವರಿಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ. ಚಿರತೆ ನಾಯಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯಾವಳಿಗಳು ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸ್ಥಳೀಯವಾಗಿ ವೈರಲ್ ಆಗಿದೆ.
ರಾತ್ರಿ ವೇಳೆಗೆ ಕೊಂಡಾಳು ನಾರಾಯಣಗೌಡ ಎಂಬವರ ಮನೆಗೆ ಬಂದ ಚಿರತೆಯು ಅಲ್ಲೇ ಮಲಗಿದ್ದ ನಾಯಿಯನ್ನು ತಿನ್ನಲು ಹೊಂಚು ಹಾಕಿದೆ.
ಅಲ್ಲೇ ಮಲಗಿದ್ದ ಬೆಕ್ಕು ಚಿರತೆ ದಾಳಿಯಿಂದ ಪಾರಾಗಿದೆ. ಆದರೆ ನಾಯಿಯನ್ನು ಚಿರತೆಯು ಹೊತ್ತೊಯ್ದಿದೆ. ಸ್ಥಳೀಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ದಿಡುಪೆ ಗ್ರಾಮಸ್ಥರು ಕಂಗಾಲಾಗಿದ್ದಾರೆ.
Also Read: ಸುರತ್ಕಲ್ : ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷನಿಂದ 1 ಕೋಟಿ ರೂಪಾಯಿ ವಂಚನೆ : ದೂರು ದಾಖಲು
ಈ ಹಿಂದೆ ಕೂಡ ಅನೇಕ ಬಾರಿ ದಿಡುಪೆ ಪರಿಸರದಲ್ಲಿ ಈ ರೀತಿ ಚಿರತೆಯು ಸಾಕು ಪ್ರಾಣಿಗಳನ್ನು ಹೊತ್ತೊಯ್ದಿತ್ತು. ಹೀಗಾಗಿ ಈ ಪರಿಸರದಲ್ಲಿ ಇದೀಗ ಸಂಜೆಯಾಗುತ್ತಿದ್ದಂತೆಯೇ ಮನೆಯಿಂದ ಹೊರ ಬರಲು ಗ್ರಾಮಸ್ಥರು ಯೋಚಿಸುವಂತಾಗಿದೆ.
ಸ್ಥಳೀಯ ಅರಣ್ಯಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.



