ಪುತ್ತೂರು : Criminal entering an ENT clinic: ENT ಕ್ಲಿನಿಕ್ ಒಳಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ಎಸಗಿದ ದುಷ್ಕರ್ಮಿ, ವಿಡಿಯೋ ವೈರಲ್
Criminal entering an ENT clinic: ENT ಕ್ಲಿನಿಕ್ಗೆ ನುಗ್ಗಿ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು(Puttur) ತಾಲೂಕಿನ ದರ್ಬೆ ಎಂಬಲ್ಲಿ ಸಂಭವಿಸಿದೆ. ಡಾ. ರಾಮಮೋಹನ್ ರಾವ್ ಎಂಬವರಿಗೆ ಸೇರಿದ ಕ್ಲಿನಿಕ್ ಇದಾಗಿದ್ದು ಕ್ಲಿನಿಕ್ನ ಗಾಜುಗಳನ್ನು ಪುಡಿ ಮಾಡಿದ ಕಿಡಿಗೇಡಿ ದಾಂಧಲೆ ನಡೆಸಿದ್ದಾರೆ.
ಹಲ್ಲೆಯ ಸಂಪೂರ್ಣ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ತನ್ನ ಪರಿಚಯಸ್ಥರೊಬ್ಬರನ್ನು ತಪಾಸಣೆಗೆ ಬೇಗ ವೈದ್ಯರ ಬಳಿ ಬಿಟ್ಟಿನಲ್ಲಿ ಎಂಬ ಕಾರಣಕ್ಕೆ ಕೋಪಗೊಂಡ ಇಬ್ರಾಹಿಂ ಎಂಬಾತ ಕ್ಲಿನಿಕ್ ಸಿಬ್ಬಂದಿ ಶ್ರೀಕಾಂತ್ ಎಂಬವರ ಮೇಲೆ ಹಲ್ಲೆ ಎಸಗಿದ್ದಾರೆ. ಹಲ್ಲೆ ಎಸಗಿದ ಇಬ್ರಾಹಿಂ ಪುತ್ತೂರಿನ ಬಪ್ಪಳಿಗೆ ನಿವಾಸಿ ಎನ್ನಲಾಗಿದೆ.
ಕ್ಲಿನಿಕ್ ಸಿಬ್ಬಂದಿ ಶ್ರೀಕಾಂತ್ ಅವರ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲದೇ ರೋಗಿಗಳಿಗೆ ಭಯ ಹುಟ್ಟಿಸುವಂತೆ ಅವಾಚ್ಯ ಶಬ್ದಗಳಿಂದ ಇಬ್ರಾಹಿಂ ನಿಂದಿಸಿದ್ದ ಎಂದು ತಿಳಿದುಬಂದಿದೆ. ನವೆಂಬರ್ 29ರಂದು ಈ ಘಟನೆ ಸಂಭವಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿ.ಸಿ ಕ್ಯಾಮರಾ ದೃಶ್ಯಾವಳಿಗಳು ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
Also Read: ಪುತ್ತೂರು : ಹೊಂಡಾಗುಂಡಿ ರಸ್ತೆ – ನಗರಸಭೆ ಆಯುಕ್ತರಿಗೆ ಶಾಸಕರ ಕ್ಲಾಸ್
ಇನ್ನು ಹಲ್ಲೆ ನಡೆಸಿ ಕ್ಲಿನಿಕ್ನಲ್ಲಿ ದಾಂಧಲೆ ಎಸಗಿದ ಆರೋಪಿ ಇಬ್ರಾಹಿಂ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.



