Interfaith marriage of Kerala woman | Mangaluru News: ಮಂಗಳೂರು: ಕೇರಳ ಮೂಲದ ಕಾಲೇಜು ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಓಡಿಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಯಾದ 23 ವರ್ಷದ ಯುವತಿ ಮಂಗಳೂರಿನ ಸುರತ್ಕಲ್‌ನಲ್ಲಿರುವ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರು ಅಲ್ಲಿನ ಪಿಜಿ (PG) ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಫೆಬ್ರವರಿ 9 ರಂದು ಹಾಸ್ಟೆಲ್‌ನಿಂದ ಹೊರಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂದಿನಿಂದ ಆಕೆ ನಾಪತ್ತೆಯಾಗಿದ್ದು, ಪೋಷಕರು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ರಿಜಿಸ್ಟರ್ ಮ್ಯಾರೇಜ್ ಶಂಕೆ:
ಪೊಲೀಸ್ ಮೂಲಗಳ ಪ್ರಕಾರ, ವೈಶಾಲಿ ಅವರು ಮಹಮ್ಮದ್ ಮಿದ್ಲಾಜ್ ಎಂಬ ಯುವಕನೊಂದಿಗೆ ಜನವರಿ 31 ರಂದು ಕೇರಳದ ವಯನಾಡ್ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಪೋಷಕರಿಗೆ ಈ ವಿಷಯ ತಿಳಿದು ಅವರು ಸುರತ್ಕಲ್‌ಗೆ ಧಾವಿಸಿ ವಿಚಾರಿಸಿದಾಗ ಯುವತಿ ನಾಪತ್ತೆಯಾಗಿರುವುದು ದೃಢಪಟ್ಟಿದೆ.
ಪೊಲೀಸ್ ತನಿಖೆ:
ತಮ್ಮ ಮಗಳನ್ನು ಪತ್ತೆ ಹಚ್ಚಿಕೊಡುವಂತೆ ಪೋಷಕರು ನೀಡಿದ ದೂರಿನ ಮೇರೆಗೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯನ್ನು ಪತ್ತೆ ಹಚ್ಚಲು ಮತ್ತು ಈ ಮದುವೆಯ ಹಿಂದಿನ ಸಂದರ್ಭಗಳನ್ನು ತಿಳಿಯಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
Instagram Virus : ಉಡುಪಿ–ಕುಂದಾಪುರದಲ್ಲಿ ಹರಡುತ್ತಿರುವ ‘ಇನ್‌ಸ್ಟಾಗ್ರಾಂ ವೈರಸ್’
ಬೆಂಗಳೂರಿನಲ್ಲಿ ಮತ್ತೊಂದು ದೂರು: ಮತಾಂತರ ಮಾಡಿ ವಂಚಿಸಿದ ಆರೋಪ
ಇದೇ ವೇಳೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ. ಕೋಲ್ಕತ್ತಾ ಮೂಲದ ಮಹಿಳೆಯೊಬ್ಬರು ತಮ್ಮ ಪತಿ ಸೈಯದ್ ಇಮ್ತಿಯಾಜ್ ವಿರುದ್ಧ ದೂರು ನೀಡಿದ್ದಾರೆ.
ಆರೋಪಿ ಸೈಯದ್ ತನ್ನನ್ನು ಪ್ರೀತಿಸುವಂತೆ ನಟಿಸಿ, ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಮದುವೆಯಾಗಿದ್ದನು. ಆದರೆ ಮಗು ಹುಟ್ಟಿದ ನಂತರ ತನ್ನನ್ನು ಕೈಬಿಟ್ಟು ವಂಚಿಸಿದ್ದಾನೆ ಎಂದು ಮಹಿಳೆ ದೂರಿದ್ದಾರೆ. ಈ ಕುರಿತು ಸಂತ್ರಸ್ತ ಮಹಿಳೆ ತನ್ನ ಅಳಲನ್ನು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಿ ಸೈಯದ್ ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಎಂದು ಗುರುತಿಸಲಾಗಿದೆ.


