KSBC ಚುನಾವಣೆ: ಅಖಾಡಕ್ಕಿಳಿದ ಖ್ಯಾತ ನ್ಯಾಯವಾದಿ ಜಯಪ್ರಕಾಶ್ ರೈ ಕನ್ನೆಜಾಲು; ರಾಜ್ಯ ವಕೀಲರ ಪರಿಷತ್‌ಗೆ ನಾಮಪತ್ರ ಸಲ್ಲಿಕೆ

KSBC Election : ಬೆಂಗಳೂರು : : ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ (Karnataka State Bar Council) ಮುಂಬರುವ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ನ್ಯಾಯವಾದಿ ಜಯಪ್ರಕಾಶ್ ರೈ ಕನ್ನೆಜಾಲು (Jayaprakash Rai Kannevalu ) ಅವರು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು.
ಬೆಂಗಳೂರಿನಲ್ಲಿರುವ ಪರಿಷತ್‌ನ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರವನ್ನು ಹಸ್ತಾಂತರಿಸುವ ಮೂಲಕ ಕಣಕ್ಕಿಳಿದಿದ್ದಾರೆ. ಜಯಪ್ರಕಾಶ್ ರೈ ಕನ್ನೆಜಾಲು ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ವಕೀಲರ ಸಂಘದ ಸದಸ್ಯರ ಪೈಕಿ ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.
Also Read : ಕುಂದಾಪುರ : ಕೃಷಿ ಭೂಮಿಗೆ ಅಂಬ್ಯುಲೆನ್ಸ್ ಇಳಿಸಿ ವ್ಯಕ್ತಿಯ ಜೀವ ರಕ್ಷಣೆ
ಸುಳ್ಯದ ವಕೀಲರ ಸಂಘದ ಹಿರಿಯ ಸದಸ್ಯರಾಗಿ ಗುರುತಿಸಿಕೊಂಡಿರುವ ಜಯಪ್ರಕಾಶ್ ರೈ ಅವರು ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕೆನ್ನೆಜಾಲು ಮನೆತನದವಾಗಿದ್ದು, ಕೆವಿಜಿ ಕಾನೂನು ಮಹಾ ವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡಿದ್ದಾರೆ.
ಕಳೆದ ಹಲವು ವರ್ಷಗಳಿಂದಲೂ ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಹಿರಿಯ ವಕೀಲರಾದ ಪಿಪಿ ಹೆಗ್ಡೆ, ಸಂಧ್ಯಾ ಯು ಪ್ರಭು ಹಾಗೂ ಸಭಾಷ್ ಕೌಡಿಚಾರ್ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
Also Read : ಸಮೋಸಾ ವ್ಯಾಪಾರಿಯ ಸಿನಿಮಾ ಸ್ಟೈಲ್ ದರೋಡೆ ಸ್ಕೆಚ್ : ಶ್ರೀಮಂತನಾಗುವ ಆಸೆಗೆ ಈಗ ಜೈಲೇ ಗತಿ !
Jayaprakash Rai Kannevalu KSBC Election



