ಮಂಗಳೂರು : ಚಪ್ಪಲಿಯಿಂದ ಸಾರ್ವಜನಿಕ ಸ್ಥಳದಲ್ಲೇ ತಾಯಿಗೆ ಥಳಿಸಿದ ಮಗಳು : ವಿಡಿಯೋ ವೈರಲ್​

Viral Video: ಜಗತ್ತಿನ ಅತ್ಯಂತ ಪವಿತ್ರ ಸಂಬಂಧಗಳ ಪೈಕಿ ತಾಯಿ ಮಗಳ ಸಂಬಂಧ ಕೂಡ ಒಂದು. ಆದರೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಕಾವೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದು ನಾಗರಿಕ ಸಮಾಜದಲ್ಲಿ ತಾಯಿ ಮಗಳ ಸಂಬಂಧವನ್ನೇ ಪ್ರಶ್ನಿಸುವಂತೆ ಮಾಡಿದೆ. ತಾಯಿಗೆ ಮಗಳು ಹಿಗ್ಗಾಮುಗ್ಗ ಥಳಿಸಿದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಮೂಡುಶೆಡ್ಡೆ ಗ್ರಾಮ ಪಂಚಾಯತದಲ್ಲಿ ಈ ಘಟನೆ ಸಂಭವಿಸಿದೆ. ಪದೇ ಪದೇ ಮಗಳ ಮೇಲೆ ದೂರು ಹೊತ್ತು ಪೊಲೀಸ್ ಠಾಣೆ ಹಾಗೂ ಪಂಚಾಯತಕ್ಕೆ ತಾಯಿ ಬರುತ್ತಿದ್ದರು ಎನ್ನಲಾಗಿದೆ.ಹೀಗೆಯೇ ದೂರು ಹೊತ್ತು ಪಂಚಾಯತ್​ ಕಟ್ಟಡದ ಬಳಿ ಬಂದ ತಾಯಿಯನ್ನು ಮಗಳು ಪಂಚಾಯತ ಕಟ್ಟಡದಿಂದ ಏಕಾಏಕಿ ತಳ್ಳಿದ್ದಾಳೆ. ಬಳಿಕ ಅವರ ಬಳಿ ಚಪ್ಪಲಿ ಹಾಕಿಕೊಳ್ಳುವಂತೆ ಒತ್ತಾಯಿಸಿದ್ದಾಳೆ.

ಮಗಳ ಮಾತನ್ನು ಕೇಳದೇ ತಾಯಿ ಅಲ್ಲಿಯೇ ಕಣ್ಣೀರು ಹಾಕಲು ಆರಂಭಿಸಿದ್ದಾರೆ. ಕೂಡಲೇ ತಾಯಿಯ ಚಪ್ಪಲನ್ನೇ ತೆಗೆದುಕೊಂಡ ಪುತ್ರಿಯು ಅಮ್ಮ ಎಂಬುದನ್ನೂ ನೋಡದೇ ಚಪ್ಪಲಿಯಿಂದಲೇ ಥಳಿಸಿದ್ದಾರೆ.

Also Read: Guest Lecturers : ಮಂಗಳೂರು : ಅತಿಥಿ ಉಪನ್ಯಾಸಕರಿಗೆ ಹೊಸ ಸಂಕಷ್ಟ : ಯುಜಿಸಿ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

ಪದೇ ಪದೇ ಮಗಳ ಮೇಲೆ ದೂರು ಹೇಳಿಕೊಂಡು ಬರುತ್ತಿದ್ದ ವೃದ್ಧ ತಾಯಿ ಆಕೆಯನ್ನು ನಮ್ಮ ವಂಶವೃಕ್ಷದಿಂದ ತೆಗೆದು ಹಾಕಿ ಎಂದು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ತಾಯಿ ಮಗಳ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿದ್ದು ಅನೇಕ ಬಾರಿ 112ಗೆ ಕೂಡ ಕರೆ ಮಾಡಿದ್ದರು ಎನ್ನಲಾಗಿದೆ.

ಪಂಚಾಯತ್​ನಲ್ಲಿ ಮಗಳು ತಾಯಿಗೆ ಥಳಿಸುತ್ತಿದ್ದರೆ ಗ್ರಾಮ ಪಂಚಾಯ್ತಿ ಸಿಬ್ಬಂದಿ ವಿಡಿಯೋ ಮಾಡುವುದರಲ್ಲಿಯೇ ಮಗ್ನರಾಗಿದ್ದಾರೆ. ಇಬ್ಬರ ನಡುವೆ ಗಲಾಟೆ ತಪ್ಪಿಸುವ ಗೋಜಿಗೆ ಪಂಚಾಯತ್​ ಸಿಬ್ಬಂದಿ ಹೋಗಿಲ್ಲ.

Also Read: ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ : ಕಿರಣ್ ಬುಡ್ಲೆಗುತ್ತು, ಅಬ್ಬಾಸ್ ಆಲಿ ಹೆಸರು ಮುಂಚೂಣಿಯಲ್ಲಿ

ಗಲಾಟೆ ಮಾಡಿಕೊಂಡ ತಾಯಿ – ಮಗಳು ಉತ್ತರ ಕರ್ನಾಟಕ ಮೂಲದವರು ಎನ್ನಲಾಗಿದೆ. ಇನ್ನು ಈ ವಿಚಾರವಾಗಿ ಮಾತನಾಡಿರುವ ಮಂಗಳೂರು(Mangaluru) ನಗರ ಪೊಲೀಸ್​ ಕಮಿಷನರ್​ ಸುಧೀರ್​ ರೆಡ್ಡಿ, ಇದು ಮೂರು ದಿನಗಳ ಹಿಂದೆ ನಡೆದಿರುವ ಘಟನೆ. ಈ ಸಂಬಂಧ ಈವರೆಗೆ ಯಾವುದೇ ರೀತಿಯ ಪೊಲೀಸ್​ ಕಂಪ್ಲೆಂಟ್​ ದಾಖಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇವರಿಬ್ಬರ ನಡುವೆ ಯಾವ ವಿಚಾರಕ್ಕೆ ಈ ರೀತಿ ಗಲಾಟೆ ಆಗುತ್ತಿತ್ತು ? ತಾಯಿ – ಮಗಳ ನಡುವೆ ಈ ಪರಿ ದ್ವೇಷಕ್ಕೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories