ಮೇಘನಾಗೆ ಇನ್ನು ಚಿರು ಸಾವನ್ನುಅರಗಿಸಿಕೊಳ್ಳೋಕಾಗಿಲ್ಲ….! ಮಗಳ ನೋವನ್ನು ಬಿಚ್ಚಿಟ್ಟ ಸುಂದರ ರಾಜ್…!!

ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ ನಾಲ್ಕು ತಿಂಗಳುಗಳೇ ಕಳೆದಿದ್ದರೂ ಇನ್ನು ಸರ್ಜಾ ಹಾಗೂ ಮೇಘನಾ ರಾಜ್ ಮನೆಯಲ್ಲಿ ಸೂತಕದ ಛಾಯೆ ಇನ್ನು ಮುಗಿದಿಲ್ಲ. ಜ್ಯೂನಿಯರ್ ಚಿರು ಧರೆಗೆ ಬಂದಿದ್ದರೂ ಎರಡು ಕುಟುಂಬಗಳು ಇನ್ನು ಅಗಲಿದ ಮಗನ ನೆನಪಿನಲ್ಲೇ ಕಳೆಯುತ್ತಿದ್ದಾರೆ. ಈ ಮಧ್ಯೆ ಮೇಘನಾ ಕೂಡ ಚಿರು ಸಾವನ್ನು ಅರಗಿಸಿಕೊಂಡಿಲ್ಲವಂತೆ. ಹೀಗಾಗಿ ಆಗಾಗ ಚಿರುಗೆ ಏನಾಯ್ತು ಅಂತ ಡಾಕ್ಟರ್ ಗಳನ್ನು ಕೇಳುತ್ತಾಳಂತೆ.

ಆರೋಗ್ಯವಾಗಿದ್ದ ಚಿರಂಜೀವಿ ಸರ್ಜಾ ದೀಢೀರ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಒಂದು ದಿನದ ಹಿಂದೆ ಆಸ್ಪತ್ರೆಗೆ ಹೋಗಿಬಂದಿದ್ದ ಚಿರುಗೆ ವೈದ್ಯರು ಹೆಚ್ಚೇನು ತೊಂದರೆ ಇಲ್ಲ. ಗಾಡಿ ಓಡಿಸಲು ಕೊಡಬೇಡಿ ಎಂದಿದ್ದರಂತೆ. ಆದರೆ ಮಾರನೇ ದಿನವೇ ದಿಢೀರ್ ಕುಸಿದು ಬಿದ್ದ ಚಿರು  ಮತ್ತೆ ಮೇಲೇಳಲೇ ಇಲ್ಲ.  ಆದರೆ ಈ ಸಾವು ಇನ್ನು ಮೇಘನಾಗೆ ಜೀರ್ಣವಾಗಿಲ್ಲ.

ಇಂದಿಗೂ ತನ್ನ ಪರಿಚಯದ ಡಾಕ್ಟರ್ ಗಳ ಬಳಿ ಚಿರು ಗೆ ಏನಾಗಿರಬಹುದು. ಯಾಕೆ ಹೀಗಾಯ್ತು ಅಂತೆಲ್ಲ ಪ್ರಶ್ನೆ ಮಾಡ್ತಾಳೆ. ಇನ್ನು ಗೂಗಲ್ ನಲ್ಲಿ ಸರ್ಚ್ ಮಾಡಿ ನೋಡ್ತಾಳೆ. ಒಂದು ಸಾವನ್ನು ಅರಗಿಸಿಕೊಳ್ಳೋಕು ಆಗದೇ ವಯಸ್ಸಾದ ನಮ್ಮ ಎದುರು ತನ್ನ ನೋವನ್ನು ಹೇಳಿಕೊಳ್ಳೋಕು ಆಗದೇ ಸಂಕಟ ಪಡ್ತಾಳೆ. ಅದನ್ನು ಮಾತ್ರ ನೋಡೋಕೆ ಬೇಸರವಾಗುತ್ತೆ ಎಂದು ಮೇಘನರಾಜ್ ತಂದೆ ಸುಂದರ್ ರಾಜ್  ಮಾಧ್ಯಮಗಳ ಬಳಿ ಕಣ್ಣಿರಿಟ್ಟಿದ್ದಾಳೆ.

ಮೇಘನಾ ಚಿರು ಸಾವಿನಿಂದ ಹೇಳಲಲಾರದಷ್ಟು ಕೊರಗಿ-ಸೊರಗಿ ಹೋಗಿದ್ದರೂ ತನ್ನ ತಾಯ್ತನವನ್ನು ಕಾಪಾಡಿಕೊಳ್ಳುವಲ್ಲಿ ಆಕೆಯ ಧೈರ್ಯವೇ ಕಾರಣವಾಯ್ತು ಅನ್ನೋದು ಮೇಘನಾ ಮನೆಯವರ ಅನಿಸಿಕೆ. ಆಕೆ ಚಿರು ಅಗಲಿದ ನೋವಲ್ಲಿದ್ದರೂ ನಮ್ಮನ್ನೆಲ್ಲ ಸಮಾಧಾನ ಮಾಡುತ್ತಿದ್ದಳು.

ಅಪ್ಪ ನೀವು ಯಾವಾಗಲೂ ಅಳುತ್ತೀರಿ. ಹೀಗಾಗಿ ನನ್ನ ಡೆಲಿವರಿ ಆಗೋ ತನಕ ನನ್ನ ಎದುರು ಬಂದು ನನ್ನನ್ನು ಅಳಿಸಬೇಡಿ. ಡೆಲಿವರಿ ಆದ ಮೇಲೆ ಹೇಳ್ತಿನಿ ಬಂದು ನೋಡಿ ನನಗೆ ಸಾಂತ್ವನಿಸುತ್ತಿದ್ದಳು ಎಂದು ಸುಂದರ ರಾಜ್ ತಮ್ಮ ಮಗಳ ನೋವನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ : ಮೂರು ತಿಂಗಳ ಬಳಿಕ ಅದ್ದೂರಿ ನಾಮಕರಣ….! ಜ್ಯೂನಿಯರ್ ಚಿರುಗೆ ಮೇಘನಾ ಇಟ್ಟ ಹೆಸರೇನು ಗೊತ್ತಾ…!!

ಮಗಳನ್ನು ತುಂಬ ಪ್ರೀತಿಸುತ್ತಿದ್ದ ಚಿರು, ಆಕೆಯ ಪ್ರಗ್ನೆಂಟ್ ಅಂತ ಗೊತ್ತಾದ ಮೇಲಂತೂ ಮತ್ತಷ್ಟು ಜೋಪಾನವಾಗಿನೋಡಿಕೊಳ್ಳುತ್ತಿದ್ದ. ಆಕೆಗೆ ಒಳ್ಳೆಯ ಹಾಸ್ಪಿಟಲ್ ನಲ್ಲಿ ಡೆಲಿವರಿ ಮಾಡಿಸಬೇಕೆಂದು ನಿರ್ಧರಿಸಿದ್ದ ಚಿರು ಆಕೆಗಾಗಿ ಅಕ್ಷ್ ಹಾಸ್ಪಿಟಲ್ ಆಯ್ಕೆ ಮಾಡಿದ್ದ ಅಷ್ಟೇ ಅಲ್ಲ,  ಅಲ್ಲಿ ಯಾವ ಕೋಣೆಯಲ್ಲಿ ಡೆಲಿವರಿ ಆಗಬೇಕೆಂದು ನಿರ್ಧರಿಸಿದ್ದರು.

ಇದನ್ನು ಓದಿ : ಚಿರು ಇಲ್ಲದ ಮೇಲೆ…! ನವೆಂಬರ್ 1 ರಂದು ಲೈವ್ ನಲ್ಲಿ ಮೇಘನಾ ಮನದಾಳ..!!

ಆಕೆಯನ್ನು ಸಿನಿಮಾಗೆ ಕರೆದೊಯ್ದರೇ ಗೋಲ್ಡ್ ಕ್ಲಾಸ್ ನಲ್ಲೇ ಮೂವಿ ತೋರಿಸುತ್ತಿದ್ದ. ಆದರೆ ಈಗ ಆತನಿಲ್ಲ ಅನ್ನೋದನ್ನೇ ನಮಗೆ ನಂಬೋಕೆ ಆಗ್ತಿಲ್ಲ. ಚಿರುವಿನಂತ ಜ್ಯೂನಿಯರ್ ಚಿರು ಭೂಮಿಗೆ ಬಂದಿದ್ದಾನೆ ಅನ್ನೋದು ನಮ್ಮ ಪಾಲಿಗೆ ಪುಟ್ಟ ಖುಷಿಯ ಸಂಗತಿ ಎನ್ನುತ್ತ ದುಃಖ ಮರೆಯುವ ಪ್ರಯತ್ನದಲ್ಲಿದ್ದಾರೆ ಮೇಘನಾ ರಾಜ್  ತಂದೆ ಸುಂದರ್ ರಾಜ್.

Comments are closed.