ರಾಮನವಮಿ : ಮಾರ್ಚ್ 27ಕ್ಕೆ ಬೆಂಗಳೂರಲ್ಲಿ ಮಾಂಸ ಮಾರಾಟ ಬಂದ್
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನವಾದ 'ಶ್ರೀರಾಮನವಮಿ'ಯನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಈ ಪವಿತ್ರ ದಿನದಂದು ಪ್ರಾಣಿ ಹಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲಾ 8 ವಲಯಗಳಲ್ಲೂ ಈ ನಿಯಮ ಅನ್ವಯವಾಗಲಿದೆ.

Rama Navami : ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಳೆ (ಮಾರ್ಚ್ 27 ) ಮಾಂಸಪ್ರಿಯರಿಗೆ ಶಾಕ್ ಕಾದಿದೆ. ಶ್ರೀರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ನಗರದಾದ್ಯಂತ ಮಾಂಸ ಮಾರಾಟ ಮತ್ತು ಕಸಾಯಿಖಾನೆಗಳನ್ನು ಬಂದ್ ಮಾಡಲು ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ (GBA) ಅಧಿಕೃತ ಆದೇಶ ಹೊರಡಿಸಿದೆ.
Rama Navami : ಮಾಂಸ ಮಾರಾಟ ಬಂದ್ : ಬಿಬಿಎಂಪಿ ಆದೇಶದಲ್ಲಿ ಏನಿದೆ ?
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನವಾದ ‘ಶ್ರೀರಾಮನವಮಿ’ಯನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಈ ಪವಿತ್ರ ದಿನದಂದು ಪ್ರಾಣಿ ಹಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿರುವ ಎಲ್ಲಾ 8 ವಲಯಗಳಲ್ಲೂ ಈ ನಿಯಮ ಅನ್ವಯವಾಗಲಿದೆ.
- ಬೆಂಗಳೂರು ನಗರದ ಎಲ್ಲಾ ಸಾರ್ವಜನಿಕ ಕಸಾಯಿಖಾನೆಗಳು ಬಂದ್ ಇರಲಿವೆ.
- ಚಿಲ್ಲರೆ ಮಾಂಸದ ಅಂಗಡಿಗಳಲ್ಲಿ (ಕುರಿ, ಕೋಳಿ, ಮೀನು) ಮಾರಾಟ ನಿಷೇಧಿಸಲಾಗಿದೆ.
- ಅನಧಿಕೃತವಾಗಿ ಎಲ್ಲೂ ಮಾಂಸ ಮಾರಾಟ ಮಾಡುವಂತಿಲ್ಲ.
ಮಾಂಸ ಮಾರಾಟ ಬಂದ್ : ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
ಗ್ರೇಟರ್ ಬೆಂಗಳೂರು ನೀಡಿರುವ ಸೂಚನೆಯಂತೆ, ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಪಶುಪಾಲನಾ ಇಲಾಖೆಯ ತಂಡಗಳು ನಾಳೆ ನಗರದಾದ್ಯಂತ ತಪಾಸಣೆ ನಡೆಸಲಿವೆ.
ಒಂದು ವೇಳೆ ಸರ್ಕಾರದ ಆದೇಶವನ್ನು ಮೀರಿ ಯಾರಾದರೂ ಮಾಂಸ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಮತ್ತು ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಸುಡುವ ಬಿಸಿಲು: ಬೆಂಗಳೂರು, ಉಡುಪಿ ಸೇರಿ ಹಲವೆಡೆ ತಾಪಮಾನ ಏರಿಕೆ; ‘ಹೀಟ್’ ಅಲರ್ಟ್ ಎಚ್ಚರಿಕೆ ?
ರಾಮನವಮಿ : ಹೋಟೆಲ್‌ಗಳಲ್ಲಿ ಮಾಂಸದ ಊಟ ಸಿಗುತ್ತಾ?
ಸಾಮಾನ್ಯವಾಗಿ ಕಸಾಯಿಖಾನೆ ಮತ್ತು ಮಾಂಸದ ಅಂಗಡಿಗಳಿಗೆ ಮಾತ್ರ ಈ ನಿಷೇಧ ಅನ್ವಯವಾಗುತ್ತದೆ. ಆದರೆ, ಅನೇಕ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಹಬ್ಬದ ಗೌರವಾರ್ಥವಾಗಿ ಸ್ವಯಂಪ್ರೇರಿತವಾಗಿ ನಾನ್-ವೆಜ್ ಖಾದ್ಯಗಳ ಮಾರಾಟ ಇರುವುದಿಲ್ಲ. ಆದರೂ, ಮಾಂಸದ ಅಂಗಡಿಗಳು ಸಂಪೂರ್ಣ ಬಂದ್ ಇರುವುದರಿಂದ ಫ್ರೆಶ್ ಮಾಂಸದ ಲಭ್ಯತೆ ಇರುವುದಿಲ್ಲ.
ಹಬ್ಬದ ಸಿದ್ಧತೆಯಲ್ಲಿ ಸಿಲಿಕಾನ್ ಸಿಟಿ
ಶ್ರೀರಾಮನವಮಿಯ ಹಿನ್ನೆಲೆಯಲ್ಲಿ ಬೆಂಗಳೂರಿನ ಶ್ರೀರಾಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾರಗಳು ನಡೆಯುತ್ತಿವೆ. ಮನೆಮನೆಗಳಲ್ಲಿ ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ ವಿತರಣೆಗೆ ಸಿದ್ಧತೆಗಳು ನಡೆದಿವೆ. ಈ ಧಾರ್ಮಿಕ ಭಾವನೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಬಿಬಿಎಂಪಿ ಪ್ರತಿ ವರ್ಷದಂತೆ ಈ ವರ್ಷವೂ ಮಾಂಸ ಮಾರಾಟಕ್ಕೆ ಬ್ರೇಕ್ ಹಾಕಿದೆ.
ಇದನ್ನೂ ಓದಿ : ಬಿಎಂಟಿಸಿ, ನಮ್ಮ ಮೆಟ್ರೋ ಪ್ರಯಾಣಕ್ಕೆ ಇನ್ಮುಂದೆ ಒಂದೇ ಸ್ಮಾರ್ಟ್ ಕಾರ್ಡ್ : ಯಾರಿಗೆಲ್ಲ ಲಾಭ ?
ನೀವು ಮಾಂಸಪ್ರಿಯರಾಗಿದ್ದರೆ , ನಾಳೆ ನಾನ್-ವೆಜ್ ಅಡುಗೆ ಮಾಡುವ ಪ್ಲಾನ್ ಹೊಂದಿದ್ದರೆ, ಇಂದೇ ನಿಮ್ಮ ಖರೀದಿಯನ್ನು ಪೂರೈಸಿಕೊಳ್ಳುವುದು ಉತ್ತಮ. ಏಕೆಂದರೆ ನಾಳೆ ನಗರದಲ್ಲಿ ಮಾಂಸದ ಅಂಗಡಿಗಳ ಬಾಗಿಲು ತೆರೆಯುವುದಿಲ್ಲ.
Bangalore meat sale ban on Rama Navami march 27 bbmp order



