ಬಾಗಮನೆ ಟೆಕ್‌ಪಾರ್ಕ್‌ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಅಗ್ನಿ ಅವಘಡ, ಅಗ್ನಿಶಾಮಕ ಸಿಬ್ಬಂದಿಗೆ ಗಾಯ

ಬೆಂಗಳೂರು : ಇಂದಿರಾನಗರದಲ್ಲಿ ಸಿಲಿಂಡರ್ ಬ್ಲ್ಯಾಸ್ಟ್ ಪ್ರಕರಣದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದ್ದು ಮಾರತಹಳ್ಳಿಯ ಕಾರ್ತಿಕ್ ನಗರದಲ್ಲಿರೋ ಬಾಗಮನಿ ಟೆಕ್ ಪಾರ್ಕ್ (Bagmane Tech Park) ನಲ್ಲಿ ಇಂಟಿರೀಯರ್ ವರ್ಕ್ ನಡೆಯುತ್ತಿದ್ದ ಕಂಪನಿಯಲ್ಲಿ ರವಿವಾರ ರಾತ್ರಿ 10.45 ರ ವೇಳೆಗೆ ಅಗ್ನಿಅವಘಡ ನಡೆದಿದೆ.

ಕಟ್ಟಡದ ಐದು ಮತ್ತು ಆರನೇ ಅಂತಸ್ತಿನ ಬೆಂಕಿ ಕಾಣಿಸಿಕೊಂಡಿದ್ದು, ಮಧ್ಯರಾತ್ರಿ ವೇಳೆ ಬೆಂಕಿ ಧಗಧಗಿಸಿ ಉರಿದಿದೆ. ಬೆಂಕಿ ಹೊತ್ತಿ ಕೊಳ್ಳುತ್ತಿದ್ದಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಮೂರಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡದಿಂದ ಹೊರಕ್ಕೆ ಓಡಿ ಬಂದಿದ್ದು ಜೀವ ಉಳಿಸಿಕೊಂಡಿದ್ದಾರೆ. ಲ್ಯಾಡರ್ ಸೇರಿದಂತೆ 10 ಅಗ್ನಿಶಾಮಕದಳ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಕಟ್ಟಡದ ಒಳಗೆ ಕಂಪನಿ (Bagmane Tech Park) ಇಂಟಿರಿಯರ್ ವರ್ಕ್ ನಡೀತಿದ್ದು, ಶಾರ್ಟ್ ಸೆಕ್ಯೂರ್ಟ್ ನಿಂದ ಬೆಂಕಿ ತಗಲಿರೋ ಶಂಕೆ ವ್ಯಕ್ತವಾಗಿದೆ ಪ್ಲೇವುಡ್, ಬಾಕ್ಸ್ ಗಳು, ಪೇಪರ್ಸ್ ಮತ್ತು ಥರ್ಮ ಕೋಲ್ ಶೀಟ್ ಹೆಚ್ಚಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿ ವ್ಯಾಪಿಸುವ ಆತಂಕವಿತ್ತ ನಿರ್ಮಾಣ ಹಂತದಲ್ಲಿದ್ದ ಲೊಗ್ಯಾಟೋ ಕಂಪನಿಯ 5 ಹಾಗೂ 6 ನೇ ಅಂತಸ್ಥಿನಲ್ಲಿ ಘಟನೆ ಸಂಭವಿಸಿದೆ. ಇನ್ನು ಬೆಂಕಿ ನಂದಿಸುವ ವೇಳೆ ಅಗ್ನಿಶಾಮಕ ಸಿಬ್ಬಂದಿ ಆಯ ತಪ್ಪಿ ನಾಲ್ಕನೇ ಅಂತಸ್ಥಿನಿಂದ ಬಿದ್ದಿದ್ದು ಗಾಯಗೊಂಡಿದ್ದಾರೆ.

ಮಹದೇವಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವಿನಯ್ ಗಾಯಗೊಂಡವರಾಗಿದ್ದು, ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಖಾಸಗಿ ವಿನಯ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಳಗಿದ್ದ ಸೇಫ್ಟಿ ನೆಟ್ ಮೇಲೆ ಬಿದ್ದ ರಭಸಕ್ಕೆ ಕೈ ಕಾಲು ಹಾಗೂ ತಲೆಗೆ ಪೆಟ್ಟಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾರತಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಅಗ್ನಿಅವಘಡ ಸುರಕ್ಷತಾ ನಿಯಮಗಳು ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಡೆಯಲಾಗಿತ್ತಾ ಎಂಬುದನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : Namma Metro : ಶಾಪಿಂಗ್ ಮಾಲ್ ಗಳಾಗ್ತಿವೇ ಬೆಂಗಳೂರಿನ ಮೆಟ್ರೋ ಸ್ಟೇಶನ್ ಗಳು

ಇದನ್ನೂ ಓದಿ : Cylinder Blast : ಹೊಟೇಲ್ ನಲ್ಲಿ ಸಿಲಿಂಡರ್ ಸ್ಪೋಟ ; ಗ್ರಾಹಕರು ಸೇರಿ 7 ಜನರಿಗೆ ಗಾಯ

( Fire Mishap in Bagmane Tech Park Software Company Burned fire fighters injured )

Comments are closed.