ಗೋವಿಂದಪುರ ಡ್ರಗ್ಸ್‌ ಕೇಸ್‌ ಪ್ರಕರಣ : ಸೆಲೆಬ್ರಿಟಿಗಳ ಮನೆ ಮೇಲೆ ಪೊಲೀಸ್‌ ದಾಳಿ

ಬೆಂಗಳೂರು : ಡ್ರಗ್ಸ್‌ ಕೇಸ್‌ ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಸ್ಯಾಂಡಲ್‌ವುಡ್‌ ನಟ, ನಟಿಯರು, ನಿರ್ಮಾಪಕರ ಮನೆಗಳ ಮೇಲೆ ದಾಳಿ ನಡೆದಿದೆ. ಇದೀಗ ಗೋವಿಂದಪುರ ಡ್ರಗ್ಸ್‌ ಕೇಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮೂರು ಕಡೆಗಳಲ್ಲಿ ಪೊಲೀಸರು ದಾಳಿಯನ್ನು ನಡೆಸಿದ್ದಾರೆ.

ಸ್ಯಾಂಡಲ್‌ವುಡ್‌ ನಟಿ ಸೋನಿಯಾ ಅಗರ್‌ವಾಲ್‌, ಡಿಜೆ ವಚನ್‌ ಚೆನ್ನಪ್ಪ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿ ಭರತ್‌ ಅವರ ಮನೆಯ ಮೇಲೆ ದಾಳಿಯನ್ನು ನಡೆಸಲಾಗಿದೆ. ಈಗಾಗಲೇ ಬಂಧನಕ್ಕೆ ಒಳಗಾಗಿರುವ ಡ್ರಗ್ಸ್‌ ಪೆಡ್ಲರ್‌ ಥಾಮಸ್‌ ನೀಡಿದ ಮಾಹಿತಿಯ ಆಧಾರ ಮೇಲೆ ಈ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ.

ರಾಜಾಜಿನಗರ, ಪದ್ಮನಾಭನಗರ ಹಾಗೂ ಬೆನ್ಸನ್‌ ಟೌನ್‌ನಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮಿ ಭರತ್‌ ಮನೆ ಮನೆ ಮೇಲೆ ದಾಳಿಯನ್ನು ನಡೆಸಲಾಗಿದ್ದು, ಈ ವೇಳೆಯಲ್ಲಿ ಡ್ರಗ್ಸ್‌ ಪತ್ತೆಯಾಗಿದೆ ಅನ್ನೋ ಮಾಹಿತಿಯಿದೆ.

ಇದನ್ನೂ ಓದಿ : Actor Armaan Kohili : ಡ್ರಗ್ಸ್‌ ಕೇಸ್‌ನಲ್ಲಿ ಬಾಲಿವುಡ್‌ ನಟ ಅರ್ಮಾನ್‌ ಕೊಯ್ಲಿ ಅರೆಸ್ಟ್‌

ಇದನ್ನೂ ಓದಿ : ಮೈಸೂರು ಗ್ಯಾಂಗ್ ರೇಪ್ : ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಆರೋಪಿಗಳು

Comments are closed.