BMTC PASS : ಬಿಎಂಟಿಸಿ ಪ್ರಯಾಣಕ್ಕೆ ಪಾಸ್ ಬೇಡ, ಟಿಕೇಟ್ ಬೇಡ : ಮೊಬೈಲ್ ಜೊತೆಗಿದ್ದರೆ ಸಾಕು

ಬೆಂಗಳೂರು : ಬಿಎಂಟಿಸಿ ಬೆಂಗಳೂರು ಜನರ ಜೀವನಾಡಿ.‌ ಗಾರ್ಮೆಂಟ್ಸ್ ನಿಂದ ಆರಂಭಿಸಿ ಐಟಿಬಿಟಿ ತನಕ ಎಲ್ಲರೂ ಆಶ್ರಯಿಸಿರೋದು ಬಿಎಂಟಿಸಿ ಬಸ್ ಗಳನ್ನ. ಹೀಗಾಗಿ ಪ್ರತಿ ತಿಂಗಳು ಮಾಸಿಕ ಬಸ್ (BMTC PASS) ಪಾಸ್ ಪಡೆಯೋಕೆ ದೊಡ್ಡ ಕ್ಯೂ ಇರುತ್ತೆ. ಆದರೆ ಈ ಸರತಿ ಸಾಲಿನ ಗೋಳು ತಪ್ಪಿಸಲು ಈಗ ಬಿಎಂಟಿಸಿ ಹೊಸ ಪ್ರಯೋಗ ವೊಂದಕ್ಕೆ ಸಿದ್ಧವಾಗಿದ್ದು, ಕೈಯಲ್ಲಿ ಮೊಬೈಲ್ ಇದ್ದರೇ ಸಾಕು, ಪಾಸ್ ಯಾಕೆ ಬೇಕು ಎಂದಿದೆ.

ಹೌದು, ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ನೂತನ ತಂತ್ರಜ್ಞಾನ ಪರಿಚಯಿಸಲು ಮುಂದಾಗಿದೆ. ಪಾಸ್‌ ಖರೀದಿಸುವ ರಗಳೆಯೇ ಇಲ ಕೇವಲ ಮೊಬೈಲ್‌ ಫೋನ್‌ನ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಪ್ರಯಾಣಿಸುವುದಕ್ಕೆ ಅವಕಾಶ ನೀಡಲು ಸಿದ್ಧವಾಗಿದೆ. ಖಾಸಗಿ ಸಂಸ್ಥೆ ಟುಮೊಕ್‌ ಕಂಪೆನಿಯ ಸಹಭಾಗಿತ್ವದಲ್ಲಿ ಹೊಸ ಮೊಬೈಲ್‌ ಆ್ಯಪ್ ಪರಿಚಯಿಸಲು ಬಿಎಂಟಿಸಿ ಸಿದ್ಧವಾಗಿದ್ದು, ನಿಮ್ಮ ಸ್ಮಾರ್ಟ್‌ ಫೋನ್‌ಗಳಲ್ಲೇ ಟುಮೊಕ್‌ ಸಂಸ್ಥೆಯ ಆ್ಯಫ್ ಡೌನ್‌ಲೋಡ್‌ ಮಾಡಿಕೊಂಡು ದಿನದ ಮತ್ತು ವಾರದ ಹಾಗೂ ಮಾಸಿಕ ಪಾಸುಗಳನ್ನು ಪಡೆಯಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ.

ಈ ಮೊಬೈಲ್‌ ಆ್ಯಪ್ ನ್ನು ಬಸ್‌ನ ಕಂಡಕ್ಟರ್ ಬಳಿಯ ಎಲೆಕ್ಟ್ರಾನಿಕ್‌ ಟಿಕೆಟ್‌ ಮಿಷನ್‌(ETM)ನಲ್ಲಿ ಸ್ಕ್ಯಾನ್ ಮಾಡಿ ಪ್ರಯಾಣಿಸಬಹುದು. ಇದರಿಂದ ಪ್ರತಿ ತಿಂಗಳು ಪ್ರಯಾಣಿಕರು ಸರದಿ ಸಾಲಿನಲ್ಲಿ ನಿಂತು ಪಾಸು ಪಡೆಯುವ ಗೋಜಿಗೆ BMTC ಬ್ರೇಕ್ ಹಾಕ್ತಿದೆ. ಒಂದೊಮ್ಮೆ ಈ ವ್ಯವಸ್ಥೆ ಸಕ್ಸಸ್ ಆದಲ್ಲಿ ಇನ್ಮುಂದೆ ಬಸ್‌ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್‌ ಖರೀದಿಸುವ ಅಗತ್ಯವಿರೋದಿಲ್ಲ.

ವೊಲ್ವೋ ಬಸ್‌ಗಳ ಕಂಡೆಕ್ಟರ್ ಗೆ ಇಟಿಎಂ ಮಿಷನ್‌ಗಳಿರಲಿದ್ದು, ಅದರಲ್ಲಿ ಮೊಬೈಲ್‌ನಲ್ಲಿನ ಕ್ಯೂಆರ್‌ಕೋಡ್‌ ಸ್ಕ್ಯಾನ್‌ ಮಾಡಬಹು. ಆದರೆ ಸಾಮಾನ್ಯ ಬಸ್‌ಗಳಲ್ಲಿ ಕಂಡೆಕ್ಟರ್ ಬಳಿ ಇರುವ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ಪ್ರಯಾಣಿಸಬಹುದಾಗಿದೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ‌. ಬಿಎಂಟಿಸಿ ಆರಂಭದಲ್ಲಿ ಈ ವ್ಯವಸ್ಥೆಯನ್ನು 200 ಬಸ್ ಗಳಲ್ಲಿ ಆರಂಭಿಸಲಿದ್ದು, ಯಶಸ್ವಿಯಾದ ಬಳಿಕ ನಗರದಲ್ಲಿ ಸಂಚರಿಸುವ ಸಾವಿರಾರು ಬಸ್ ಗಳಲ್ಲಿ ಇದೇ ವ್ಯವಸ್ಥೆ ಜಾರಿಗೆ ಬರಲಿದೆ.

ಇದರಿಂದ ಪ್ರಯಾಣಿಕರು ಪ್ರತಿ ತಿಂಗಳು ಪಾಸ್ ಖರೀದಿಸಲು ನೂಕು ನುಗ್ಗಲು ಅನುಭವಿಸುವುದು ತಪ್ಪಲಿದೆ. ಮಾತ್ರವಲ್ಲ ಬಸ್ ಗಳಲ್ಲಿ ಟಿಕೇಟ್ ವಂಚನೆ, ಚಿಲ್ಲರೇ ಸಮಸ್ಯೆ ಹಾಗೂ ದಂಡ ನೀಡುವ ತೊಂದರೆ ಕಡಿಮೆಯಾಗಲಿದೆ. ಅಲ್ಲದೇ ಇದು ಮೋದಿ ಡಿಜಿಟಲ್ ಇಂಡಿಯಾಕ್ಕೂ ಸಪೋರ್ಟ್ ನೀಡಲಿದೆ ಅನ್ನೋದು ಬಿಎಂಟಿಸಿ ಚಿಂತನೆ.

ಇದನ್ನೂ ಓದಿ : ಕೊರೊನಾ ಸಂಕಷ್ಟದಲ್ಲಿ ನೆರವಾದ ವೈದ್ಯರಿಗೆ ಅನ್ಯಾಯ : ಗುತ್ತಿಗೆ ವೈದ್ಯರನ್ನು ಕೈಬಿಡಲು ಬಿಬಿಎಂಪಿ ಸಿದ್ಧತೆ

ಇದನ್ನೂ ಓದಿ : Karaga festival : ಕೊರೋನಾ ಬಳಿಕ ಮೊದಲ ಕರಗ : ಉತ್ಸವಕ್ಕೆ ಭರದಿಂದ ನಡೆದಿದೆ ಸಿದ್ಧತೆ

( No passes, no tickets for BMTC PASS hi tech BUS )

Comments are closed.