ಪೊಲೀಸರಿಗೂ ಒಕ್ಕರಿಸಿದ ಕೊರೊನಾ ಸೋಂಕು : ಒಂದೇ ಠಾಣೆಯ 60  ಮಂದಿಗೆ ಹೆಮ್ಮಾರಿ ವೈರಸ್

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಸಿಲಿಕಾನ್ ಸಿಟಿ ಬೆಂಗಳೂರನ್ನು ತತ್ತರಿಸಿ ಹೋಗುವಂತೆ ಮಾಡಿದೆ. ಇದೀಗ ಪೊಲೀಸ್ ಸಿಬ್ಬಂದಿಗೂ ಕೊರೊನಾ ಸೊಂಕು ಒಕ್ಕರಿಸಿದ್ದು, ಒಂದೇ ಠಾಣೆಯ 60 ಮಂದಿಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಬೆಂಗಳೂರಲ್ಲಿ ದಿನ ನಿತ್ಯವೂ ಬರೋಬ್ಬರಿ 5 ಸಾವಿರ ದಂಚಿನಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿ ದ್ದಾರೆ. ಬರೋಬ್ಬರಿ 35 ಸಾವಿರಕ್ಕೂ ಅಧಿಕ ಸಕ್ರೀಯ ಪ್ರಕರಣಗಳಿವೆ.‌ ಇದೀಗ ಕೊರೊನಾ ವಾರಿಯರ್ಸ್‌ ಆಗಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೂ ಮಹಾಮಾರಿ ಒಕ್ಕರಿಸಿದೆ.

ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಷೆಯ 60 ಮಂದಿ ಪೊಲೀಸ್ ಸಿಬ್ಬಂಧಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿ ದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಸಂಪರ್ಕದಲ್ಲಿ ಇರುವವ ರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

Comments are closed.