ಬೆಂಗಳೂರು RCB ಕಾಲ್ತುಳಿತಕ್ಕೆ 3 ಸಂಸ್ಥೆಗಳೇ ಹೊಣೆ : ನ್ಯಾ. ಮೈಕಲ್ ಡಿ. ಕುನ್ನಾ ವರದಿಯಲ್ಲೇನಿದೆ ?

Bangalore RCB stamped case: ಬೆಂಗಳೂರು : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸಂಭ್ರಮಾಚರಣೆಯ ವೇಳೆ ನಡೆದಿರುವ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಹೊರಬಿದ್ದಿದೆ.

ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ನಾ ಅವರ ನೇತೃತ್ವದ ನ್ಯಾಯಾಂಗ ತನಿಖಾ ಆಯೋಗ ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಕರ್ನಾಟಕ ಸರಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ.

ವರದಿಯಲ್ಲಿ ಆರ್‌ಸಿಬಿ ಕಾಲ್ತುಳಿತ ಪ್ರಕರಣಕ್ಕೆ ಮೂರು ಪ್ರಮುಖ ಸಂಸ್ಥೆಗಳೇ ಹೊಣೆ ಎಂದು ಉಲ್ಲೇಖಿಸಿದೆ. ನ್ಯಾಯಮೂರ್ತಿ ಮೈಕಲ್ ಡಿ. ಕುನ್ನಾ ಅವರು ಜುಲೈ 11, 2025 ರಂದು ತಮ್ಮ ಎರಡು ಸಂಪುಟಗಳ ತನಿಖಾ ವರದಿಯನ್ನು ಹಸ್ತಾಂತರಿಸಿದೆ.

Also Read : ಭಾರತದ ಬೆಂಕಿ ಬೌಲರ್‌..! ಯಾರು ಈ ಆಕಾಶ್‌ ದೀಪ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ, DNA ಎಂಟರ್‌ಟೈನ್ಮೆಂಟ್ ನೆಟ್‌ವರ್ಕ್ಸ್ (ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ) ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಯೇ ಕಾರಣ ಎಂದಿದೆ.

ವರದಿಯಲ್ಲಿ ಬೆಂಗಳೂರುನಗರ ಪೊಲೀಸರ ಕೆಲವು ಅಧಿಕಾರಿಗಳ ಕರ್ತವ್ಯ ಲೋಪವನ್ನೂ ಎತ್ತಿ ಹಿಡಿದಿದೆ. ಮಾಜಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೇರಿದಂತೆ 5 ಪೊಲೀಸ್‌ ಅಧಿಕಾರಿಗಳ ತಲೆದಂಡ ಮಾಡಿತ್ತು.

ಆರ್‌ಸಿಬಿ ತಂಡವು ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ಘೋಷಿಸುವ ಮೊದಲು ಪೊಲೀಸರ ಅನುಮತಿ ಪಡೆಯಲಿಲ್ಲ ಎಂದು ವರದಿಯು ಹೇಳಿದೆ. ಜನಸಂದಣಿ ನಿಯಂತ್ರಣಕ್ಕೆ ಸಮರ್ಪಕ ವ್ಯವಸ್ಥೆಗಳು ಇರಲಿಲ್ಲ ಎಂಬ ಅಂಶವನ್ನೂ ಇದು ದೃಢಪಡಿಸಿದೆ.

ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಡಿ.ಕುನ್ನಾ ಸಮಿತಿ ನೀಡಿರುವ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವ ಕುರಿತು ಚರ್ಚೆ ಹಾಗೂ ಮುಂದಿನ ಕ್ರಮ ಕೈಗೊಳ್ಳಲು ಸರಕಾರ ಜುಲೈ 17, 2025 ರಂದು ಸಚಿವ ಸಭೆ ಸೇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Also Read : ಉದ್ಯಮಿಗಳಿಗೆ MSME ನೀಡಲಿದೆ ₹250 ಕೋಟಿವರೆಗೆ ಸಾಲ

ವರದಿಯನ್ನು ಸಂಪೂರ್ಣವಾಗಿ ಓದಿಲ್ಲ ಎಂದು ಅವರು ಹೇಳಿದ್ದು, ಕ್ಯಾಬಿನೆಟ್ ಸಭೆಯಲ್ಲಿ ಇದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.

ಈ ತನಿಖೆಯು, ಘಟನೆಗೆ ಕಾರಣವಾದ ಅಂಶಗಳು ಮತ್ತು ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಬೆಳಕು ಚೆಲ್ಲುವ ನಿರೀಕ್ಷೆಯಿದೆ.

Bangalore RCB stamped case : ಕಾಲ್ತುಳಿತ ಪ್ರಕರಣ : 3 ಸಂಸ್ಥೆಗಳ ತಪ್ಪೇನು ?

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ:

ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ (CAT) ನು, ಆರ್‌ಸಿಬಿ ತಂಡವು ಸಮರ್ಪಕ ಅನುಮತಿ ಪಡೆಯದೆ, ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳನ್ನು ಆಹ್ವಾನಿಸಿ ಲಕ್ಷಾಂತರ ಜನರು ಸೇರಲು ಕಾರಣವಾಗಿದೆ ಎಂದು ಹೇಳಿದೆ.

ಪೊಲೀಸರಿಗೆ ಸಿದ್ಧತೆಗಳನ್ನು ಮಾಡಲು ಸಾಕಷ್ಟು ಸಮಯ ನೀಡಲಾಗಿಲ್ಲ ಎಂದೂ CAT ಅಭಿಪ್ರಾಯಪಟ್ಟಿದೆ.

ಘಟನೆ ನಡೆದ ನಂತರ ಆರ್‌ಸಿಬಿ, ಮೃತರ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗಾಗಿ “RCB ಕೇರ್ಸ್” ನಿಧಿಯನ್ನು ಘೋಷಿಸಿದೆ.

DNA ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ (ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ):

ಈ ಘಟನೆಯನ್ನು ಆಯೋಜಿಸುವ ಜವಾಬ್ದಾರಿ DNA ಕಂಪನಿಯ ಮೇಲಿತ್ತು.

ಪೊಲೀಸರ ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜಿಸಲಾಗಿದೆ ಮತ್ತು ಜನ ದಟ್ಟಣೆಯನ್ನು ನಿಯಂತ್ರಿಸಲು ಸರಿಯಾದ ವ್ಯವಸ್ಥೆಗಳನ್ನು ಮಾಡಿಲ್ಲ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಬ್ಯಾರಿಕೇಡ್‌ಗಳು, ತುರ್ತು ನಿರ್ಗಮನಗಳು ಅಥವಾ ಸರಿಯಾದ ಜನ ನಿರ್ವಹಣಾ ಯೋಜನೆಯು ಇರಲಿಲ್ಲ ಎಂದು FIR ಹೇಳಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA):

ಚಿನ್ನಸ್ವಾಮಿ ಕ್ರೀಡಾಂಗಣದ ಮಾಲೀಕರು ಮತ್ತು ಕಾರ್ಯಕ್ರಮಕ್ಕೆ ಆವರಣವನ್ನು ಒದಗಿಸಿದ ಸಂಸ್ಥೆಯಾಗಿ, KSCA ಸಹ ಪ್ರಕರಣದಲ್ಲಿ ಆರೋಪಿಯಾಗಿ FIR ದಾಖಲಾಗಿದೆ.

ಕೆಲವು ವರದಿಗಳ ಪ್ರಕಾರ, KSCA ಕಾರ್ಯದರ್ಶಿ ಮತ್ತು ಖಜಾಂಚಿ ಘಟನೆ ನಂತರ ರಾಜೀನಾಮೆ ನೀಡಿದ್ದಾರೆ.

ಆದರೆ, KSCA ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ಕ್ರೀಡಾಂಗಣವನ್ನು ಆರ್‌ಸಿಬಿ ತಂಡವು ಗುತ್ತಿಗೆಗೆ ತೆಗೆದುಕೊಂಡಿತ್ತು ಮತ್ತು ಜನಸಂದಣಿ ನಿಯಂತ್ರಣ ಪೊಲೀಸ್ ಇಲಾಖೆ ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಜವಾಬ್ದಾರಿ ಎಂದು ವಾದಿಸಿದೆ.

ಈ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಯುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿದೆ ಮತ್ತು ಕರ್ತವ್ಯ ಲೋಪದ ಆರೋಪದ ಮೇಲೆ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.

rcb ksca dna and bangaluru city police responsible for Bangalore rcb stamped case in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories