Vacuum cleaner: ಬೆಂಗಳೂರಿನ ರಸ್ತೆಗೆ ಹೈಟೈಕ್ ಸ್ಪರ್ಶ: ಕಸಗುಡಿಸಲು ಬರಲಿದೆ ವ್ಯಾಕ್ಯೂಮ್ ಕ್ಲೀನರ್

ಬೆಂಗಳೂರು: (Vacuum cleaner) ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂದೆಲ್ಲ ಕರೆಯಿಸಿಕೊಳ್ಳೋ ಬೆಂಗಳೂರು ತನ್ನೆಲ್ಲ ಹೆಗ್ಗಳಿಕೆಯನ್ನು ಉಳಿಸಿಕೊಳ್ಳೋಕೆ ಕಾರಣವಾಗಿರೋದು ಸ್ವಚ್ಛವಾಗಿ ನಗರವನ್ನು ಕಾಪಾಡ್ತಿರೋ ಸಾವಿರಾರು ಪೌರ ಕಾರ್ಮಿಕರು. ಈಗ ನಗರದ ಸ್ವಚ್ಛತೆ ಕಾಪಾಡೋ ಕೈಗಳಿಗೆ ಇನ್ನಷ್ಟು ಬಲ ತುಂಬಲು ಬಿಬಿಎಂಪಿ ಯೋಜನೆ ರೂಪಿಸಿದ್ದು, ಸದ್ಯದಲ್ಲೇ ವ್ಯಾಕ್ಯೂಮ್ ಕ್ಲೀನರ್ ಯಂತ್ರ ಪೌರ ಕಾರ್ಮಿಕರ ಕೈ ಸೇರಲಿದೆ.

ಬೆಂಗಳೂರಿನ ಸಾವಿರಾರು ರಸ್ತೆಗಳನ್ನು ಪ್ರತಿನಿತ್ಯ ಸ್ವಚ್ಛವಾಗಿರಿಸೋದು ಸುಲಭದ ಕೆಲಸವಲ್ಲ. ಸಾವಿರಾರು ಪೌರ ಕಾರ್ಮಿಕರು ಪ್ರತಿನಿತ್ಯ ಇದಕ್ಕಾಗಿ ದುಡಿಯುತ್ತಾರೆ. ಈಗ ಪೊರಕೆ ಹಿಡಿದು ನಗರವನ್ನು ಸ್ವಚ್ಛವಾಗಿಸೋ ಕಾರ್ಮಿಕರ ಕೈಗೆ ಯಂತ್ರ ನೀಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಬಿಬಿಎಂಪಿ 815 ವಾಕ್ಯೂಮ್ ಕ್ಲೀನರ್(Vacuum cleaner) ಯಂತ್ರಗಳನ್ನು ಖರೀದಿಸಲು ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಟೆಂಡರ್ ಕೂಡ ಆಹ್ವಾನಿಸಿದೆ.

ಈಗಾಗಲೇ ನಗರದ ಕೆಲವು ಆಯ್ದ ಎರಿಯಾಗಳಲ್ಲಿ ವ್ಯಾಕ್ಯೂಮ್ ಕ್ಲೀನರ್ ಯಂತ್ರವನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. ಈ ಯಂತ್ರ ಬಳಕೆಗೆ ಪೌರ ಕಾರ್ಮಿಕರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿರೋದರಿಂದ ಈಗ ಬಿಬಿಎಂಪಿ 815 ಯಂತ್ರ ಖರೀದಿಗೆ ಮುಂದಾಗಿದೆ. ಒಂದು ಯಂತ್ರವೂ ಕಸ ಕಡ್ಡಿ ಸೇರಿದಂತೆ ಒಟ್ಟು ಸುಮಾರು 5 ಕೆಜಿ ಧೂಳು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಣಕ್ಕೆ ಈಗ ಬಿಬಿಎಂಪಿ ವ್ಯಾಕ್ಯೂಮ್ ಕ್ಲೀನರ್ ಯಂತ್ರದ ಮೊರೆ ಹೋಗಲು ನಿರ್ಧರಿಸಿದ್ದು, ಇದರಿಂದ ಪೌರ ಕಾರ್ಮಿಕರು ಹೆಚ್ಚು ದೈಹಿಕ ಶ್ರಮವಿಲ್ಲದೇ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದೆ.

ಮಾರುಕಟ್ಟೆಯಲ್ಲಿ ತರೇಹವಾರಿ ವ್ಯಾಕ್ಯೂಮ್ ಕ್ಲೀನರ್ ಯಂತ್ರಗಳು ಲಭ್ಯವಿದೆ. ಈ ಪೈಕಿ ಬಿಬಿಎಂಪಿ ಹಸ್ತ ಚಾಲಿತವಾಗಿ ತಳ್ಳುವ ಮಾದರಿಯ ಸ್ವಿಪಿಂಗ್ ಯಂತ್ರವನ್ನು ಬಿಬಿಎಂಪಿ ಖರೀದಿಸಲಿದೆ. ಈ ಯಂತ್ರವೊಂದಕ್ಕೆ ಅಂದಾಜು 40 ಸಾವಿರ ರೂಪಾಯಿ ವೆಚ್ಚವಾಗಲಿದೆ.

ಯಂತ್ರದ ಪ್ರತಿ ಮೂಲೆಯಲ್ಲಿ ನಾಲ್ಕು ಬ್ರಷ್ ಗಳಿರಲಿದ್ದು, ಗಾಡಿಯ ಕೆಳಗೆ ಎರಡು ಬ್ರಷ್ ಅಳವಡಿಸಲಾಗಿದೆ. ಈ ಬ್ರಶ್ ಗಳು ಧೂಳಿನ ಕಣಗಳನ್ನು ಒಳಕ್ಕೆ ಎಳೆದುಕೊಳ್ಳುವ ಸಾಮರ್ಥ್ಯವನ್ನು ಒಳಗೊಂಡಿದೆ. ಸದ್ಯ ಬೆಂಗಳೂರಿನಲ್ಲಿ 16 ಸಾವಿರ ಪೌರ ಕಾರ್ಮಿಕರಿದ್ದು, ಈ ಪೈಕಿ 815 ಪೌರ ಕಾರ್ಮಿಕರ ಬಳಕೆಗೆ ಈ ಯಂತ್ರ ದೊರೆಯಲಿದೆ. ದಿನಕ್ಕೆ ಕನಿಷ್ಠ ಒಂದು ಕಿಲೋಮೀಟರ್ ಬಳಕೆಗೆ ಈ ಯಂತ್ರ ಯೋಗ್ಯವಾಗಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : ವರದಕ್ಷಿಣೆ ಕಿರುಕುಳ ಹಾಗೂ ಕಳ್ಳರು ಕದ್ದ ಬಂಗಾರ ಖರೀದಿ ಆರೋಪ: ಅಟ್ಟಿಕಾ ಗೋಲ್ಡ್‌ ಕಂಪನಿಯ ಮಾಲಿಕ ಬಾಬು ಅರೆಸ್ಟ್‌

ಬೆಂಗಳೂರಿನ ಕಸದ ಸಮಸ್ಯೆ ಹಾಗೂ ಬೀದಿಗಳ ನಿರ್ವಹಣೆಯೇ ಬಿಬಿಎಂಪಿ ಗೆ ದೊಡ್ಡ ಸವಾಲಾಗಿರುವಾಗ ಈ ಯಂತ್ರಗಳು ಬಿಬಿಎಂಪಿ ಗೆ ನೆರವಾಗುತ್ತಾ ಅನ್ನೋದು ಸದ್ಯದ ಕುತೂಹಲ.

(Vacuum cleaner) Whether it is called Silicon City or Garden City, the reason why Bengaluru retains its pride is the thousands of civic workers who keep the city clean. Now the BBMP has made a plan to give more strength to the hands of maintaining the cleanliness of the city, and soon the vacuum cleaner machine will be in the hands of the civic workers.

Comments are closed.