18 ತಿಂಗಳು ಕಳೆದಿದ್ರು ಬಂಟ್ವಾಳ ಪುರಸಭೆಗಿಲ್ಲ ಅಧ್ಯಕ್ಷರ ಭಾಗ್ಯ !

0

ಬಂಟ್ವಾಳ : ಬಂಟ್ವಾಳ ಪುರಸಭೆಗೆ ಚುನಾವಣೆ ನಡೆದು ಬರೋಬ್ಬರಿ 18 ತಿಂಗಳು ಕಳೆದು ಹೋಗಿದೆ. ಆದ್ರೆ ಇದುವರೆಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕಾತಿ ನಡೆದಿಲ್ಲ. ಇದರಿಂದಾಗಿ ಜನರ ಪುರಸಭೆಗೆ ಅಲೆದಾಡಿದ್ರೂ ತಮ್ಮ ಸಮಸ್ಯೆಗೆ ಸ್ಪಂಧಿಸುವವರೇ ಇಲ್ಲದಂತಾಗಿದೆ.
ಮೀಸಲಾತಿ ವಿವಾದ ಹೈಕೋರ್ಟ್ ಮೆಟ್ಟಿಲು ಹತ್ತಿತ್ತು. ಸಮ್ಮಿಶ್ರ ಸರಕಾರದ ಸಂದರ್ಭದಲ್ಲೂ ನ್ಯಾಯಾಲಯದಿಂದ ಇತ್ಯರ್ಥ ಪಡಿಸುವ ಬಗ್ಗೆ ಯಾವುದೇ ಪ್ರಯತ್ನ ನಡೆದಿರಲಿಲ್ಲ. ರಾಜ್ಯದಲ್ಲೀಗ ಬಿಜೆಪಿ ಸರಕಾರವಿದ್ದು, ಬಂಟ್ವಾಳ ಕ್ಷೇತ್ರವನ್ನು ಬಿಜೆಪಿಯ ಶಾಸಕರೇ ಪ್ರತಿನಿಧಿಸುತ್ತಿದ್ದಾರೆ. ಹೀಗಿದ್ದರೂ ಅಧಿಕಾರಿಗಳ ಆಡಳಿತಕ್ಕೆ ಅವಕಾಶ ಕಲ್ಪಿಸಿದ್ದಾರೆ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ.
ಚುನಾವಣೆ ನಡೆದರೂ ಅಧಿಕಾರಿಗಳೇ ಆಡಳಿತ ನಡೆಸೋದಾದ್ರೆ ಯಾವ ಕಾರಣಕ್ಕೆ ಚುನಾವಣೆ ನಡೆಸಬೇಕು ಅನ್ನೋದು ಜನಸಾಮಾನ್ಯರ ಪ್ರಶ್ನೆ.
ಇನ್ನಾದ್ರೂ ಸರಕಾರ ವಿವಾದವನ್ನು ನ್ಯಾಯಾಲಯದಲ್ಲಿ ಬಗೆ ಹರಿಸುವ ಪ್ರಯತ್ನವನ್ನು ಮಾಡದೇ ಇದ್ರೆ ಬಂಟ್ವಾಳ ಪುರಸಭೆಯ ಆಡಳಿತ ಯಂತ್ರ ಸಂಪೂರ್ಣವಾಗಿ ಜಡ್ಡು ಹಿಡಿಯುವುದರಲ್ಲಿ ಎರಡು ಮಾತಿಲ್ಲ.

Leave A Reply

Your email address will not be published.