ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ದೇಶದಲ್ಲಿ ಪತ್ತೆಯಾಯ್ತು ವೈಟ್ ಫಂಗಸ್ ..!!!

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತ್ತು. ಈ ನಡುವಲ್ಲೇ ದೇಶದಲ್ಲೀಗ ವೈಟ್ ಫಂಗಸ್ ಕಾಟ ಶುರುವಾಗಿದ್ದು, ಬಿಹಾರದಲ್ಲಿ 4 ಮಂದಿಗೆ ವೈಟ್ ಫಂಗಸ್ ಇರುವುದು ದೃಢಪಟ್ಟಿದೆ.

ವೈಟ್ ಫಂಗಸ್ ಶ್ವಾಸಕೋಶದ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ. ಅಲ್ಲದೇ ಸೋಂಕಿತ ರೋಗಿಯ ಮೇಲೆ ಎಚ್‍ಆರ್ ಸಿಟಿ ಸ್ಕ್ಯಾನ್ ನಡೆಸಿದಾಗ ಕೋವಿಡ್-19 ಗೆ ಹೋಲುವ ಸೋಂಕು ಇರುವುದು ಪತ್ತೆಯಾಗುತ್ತಿದೆ. ಇದೀಗ ಬಿಹಾರದ ಪಾಟ್ನಾದಲ್ಲಿ 4 ಮಂದಿಗೆ ವೈಟ್ ಫಂಗಸ್ ಕಾಣಿಸಿಕೊಂಡಿದೆ.

ಬ್ಲ್ಯಾಕ್ ಫಂಗಸ್ ಗಿಂತಲೂ ವೈಟ್ ಫಂಗಸ್ ಹೆಚ್ಚು ಅಪಾಯಕಾರಿಯಾಗಿದೆ. ಶ್ವಾಸಕೋಶದ ಜೊತೆ ಜೊತೆಗೆ ವೈಟ್ ಫಂಗಸ್ ದೇಹದ ಉಗುರು, ಚರ್ಮ, ಹೊಟ್ಟೆ, ಕಿಡ್ನಿ, ಬಾಯಿಗೂ ಹಾನಿಯನ್ನುಂಟು ಮಾಡುತ್ತದೆ. ವೈಟ್ ಫಂಗಸ್ ಗೆ ಆಂಟಿ-ಫಂಗಲ್ ಇಂಟ್ರಾವೆನಸ್ ಇಂಜೆಕ್ಷನ್ ನ್ನು ಸುಮಾರು ಎಂಟು ವಾರಗಳ ಕಾಲ ನೀಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಕೊರೊನಾ, ಬ್ಲ್ಯಾಕ್ ಫಂಗಸ್ ಜೊತೆಗೆ ಇದೀಗ ವೈಟ್ ಫಂಗಸ್ ಕಾಣಿಸಿ ಕೊಂಡಿರುವುದು ದೇಶದ ಜನರ ನಿದ್ದೆಗೆಡಿಸಿದೆ. ಬಿಹಾರದಲ್ಲಿ ವೈಟ್ ಫಂಗಸ್ ದೃಢಪಟ್ಟ ಬೆನ್ನಲ್ಲೇ ದೇಶದಾದ್ಯಂತ ವೈಟ್ ಫಂಗಸ್ ಪತ್ತೆ ಕಾರ್ಯವನ್ನು ಚುರುಕುಗೊಳಿಸಲಾಗಿದೆ.

https://kannada.newsnext.live/the-priest-who-theft-mangalasutra-at-marriage-telangana/
https://kannada.newsnext.live/bhuvneshwar-kumar-father-passes-away-at-the-age-of-63-due-to-cancer/

Comments are closed.