ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದ್ರೆ ದೇಹ ತೂಕ ಇಳಿಯುತ್ತೆ !

0

ಭಾರತೀಯ ಅಡುಗೆ ಪದ್ಧತಿಯಲ್ಲಿ ಜೀರಿಗೆಗೆ ಮಹತ್ವದ ಸ್ಥಾನವಿದೆ. ಹಲವಾರು ಆರೋಗ್ಯಕಾರಿ ಗುಣಗಳಿಂದ ಇದು ಮಹತ್ವದ ಔಷಧಿ ಪದಾರ್ಥವಾಗಿಯೂ ಬಳಸಲ್ಪಡುತ್ತದೆ. ಜೀರಿಗೆಯ ನೀರು ಸೇವಿಸುವುದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿ ಯಾಗಿದೆ. ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಸೇವಿಸಿದರೆ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು.

ಖಾಲಿ ಹೊಟ್ಟೆಯಲ್ಲಿ ಜೀರಿಗೆಯ ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳಗೊಂಡು ಜೀರ್ಣ ಕ್ರಿಯೆ ಕ್ರಿಯೆ ಸುಧಾರಿಸು ತ್ತದೆ. ಜೀರಿಗೆಯ ಉತ್ತಮ ಗುಣಗಳ ಬಗ್ಗೆ ಹೇಳುತ್ತಾ ಹೊರಟರೆ ಆ ಪಟ್ಟಿ ಮುಗಿಯುವುದಿಲ್ಲ. ಆದರೂ ಜೀರಿಗೆ ನೀರಿನ ಇನ್ನೊಂದು ಅತ್ಯಂತ ಮಹತ್ವದ ಉಪಯೋಗ ಯಾವುದು ಎಂಬುದನ್ನು ನೀವು ತಿಳಿದುಕೊಳ್ಳಲೇಬೇಕು.

ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನಶೈಲಿಯ ಕಾರಣದಿಂದ ಬಹಳಷ್ಟು ಜನ ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೊತೆಗೆ ಹೆಚ್ಚಾದ ಕೊಬ್ಬು ಕರಗಿಸಲು ಆಗದೆ ಅದರಿಂದ ಇನ್ನೂ ಹೆಚ್ಚು ಅನಾರೋಗ್ಯಗಳಿಗೆ ಒಳಗಾಗುತ್ತಿದ್ದಾರೆ. ಆದರೆ ದೇಹದಲ್ಲಿನ ಬೇಡ ವಾದ ಕೊಬ್ಬು ಕರಗಿಸಲು ಜೀರಿಗೆ ನೀರು ರಾಮಬಾಣವಾಗಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಜೀರಿಗೆ ನೀರು ಸೇವನೆಯಿಂದ ಕೇವಲ 15 ದಿನಗಳಲ್ಲಿ ದೇಹದಲ್ಲಿನ ಹೆಚ್ಚುವರಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡಬಹುದು ಎಂಬುದು ಆಶ್ಚರ್ಯವಾದರೂ ಸತ್ಯವಾಗಿದೆ.

ಜೀರಿಗೆ ನೀರು ತಯಾರಿಸುವುದು ಹೇಗೆ? ಜೀರಿಗೆ ನೀರು ತಯಾರಿಸು ವುದು ಅತ್ಯಂತ ಸುಲಭ. ರಾತ್ರಿ ಮಲಗುವ ಮುನ್ನ ಒಂದು ಬಟ್ಟಲು ನೀರಲ್ಲಿ ಒಂಚೂರು ಜೀರಿಗೆ ಹಾಕಿ ಇಟ್ಟರೆ ಸಾಕು. ಬೆಳಗ್ಗೆ ಎದ್ದ ತಕ್ಷಣ ಜೀರಿಗೆ ನೀರು ಸಿದ್ಧವಾಗಿರುತ್ತದೆ. ನೀರಲ್ಲಿ ಜೀರಿಗೆ ಬೆರೆಸಿದಾಗ ಓಸ್ಮೊಸಿಸ್ ಪ್ರಕ್ರಿಯೆ ನಡೆಯುತ್ತದೆ. ನೀರಲ್ಲಿ ಚೆನ್ನಾಗಿ ನೆನೆದ ಜೀರಿಗೆ ಕಾಳುಗಳು ತಮ್ಮಲ್ಲಿನ ಪೋಷಕಾಂಶಗಳನ್ನು ನೀರಿಗೆ ಬಿಡುಗಡೆ ಮಾಡುತ್ತವೆ. ಈ ಪೋಷಕಾಂಶಗಳಿಂದ ತುಂಬಿದ ಜೀರಿಗೆ ನೀರು ಹಳದಿ ಬಣ್ಣದ್ದಾಗಿ ಕಾಣುತ್ತದೆ.

ಕಡಿಮೆ ಕ್ಯಾಲೋರಿ ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಜೀರಿಗೆ ನೀರು ದೇಹಕ್ಕೆ ಯಾವುದೇ ಅಪಾಯ ಉಂಟು ಮಾಡುವು ದಿಲ್ಲ. ತೂಕ ಇಳಿಸುವ ಪ್ರಯತ್ನದಲ್ಲಿರುವಾಗ ಜೀರಿಗೆ ನೀರು ಸೇವನೆ ಅತ್ಯಂತ ಸೂಕ್ತವಾಗಿದೆ. ಒಂದು ಟೇಬಲ್ ಚಮಚೆ ಜೀರಿಗೆಯಲ್ಲಿ ಕೇವಲ ೭ ಕ್ಯಾಲೋರಿ ಶಕ್ತಿ ಇರುವುದರಿಂದ ಇದನ್ನು ಕರಗಿಸಲು ಹೆಚ್ಚುವರಿ ವ್ಯಾಯಾಮದ ಅವಶ್ಯಕತೆ ಇರುವುದಿಲ್ಲ. ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಅಧ್ಯಯನಗಳ ಪ್ರಕಾರ ಜೀರಿಗೆ ಅತ್ಯುತ್ತಮ ಆಂಟಿ ಆಕ್ಸಿಡೆಂಟ್ಗಳಾಗಿವೆ. ವಿಟಮಿನ್ ಎ, ಸಿ ಗಳಿಂದ ಸಮೃದ್ಧ ವಾಗಿರುವ ಜೀರಿಗೆಯಲ್ಲಿ ದೇಹಕ್ಕೆ ಅಗತ್ಯವಾದ ಮ್ಯಾಂಗನೀಸ್ ಮತ್ತು ತಾಮ್ರದ ಪೋಷಕಾಂಶಗಳೂ ಇವೆ. ಉತ್ತಮ ಆಂಟಿ ಆಕ್ಸಿಡೆಂಟ್ ಗಳಾಗಿರುತ್ತದೆ.

ಚಯಾಪಚಯ ಕ್ರಿಯೆ ಸುಧಾರಣೆ ದೇಹದಲ್ಲಿ ನಿಧಾನ ಗತಿಯ ಚಯಾಪಚಯ (ಮೆಟಬಾಲಿಸಂ) ಪ್ರಕ್ರಿಯೆಯಿಂದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡುವುದು ಕಷ್ಟಕರವಾಗಿ ಪರಿಣಮಿಸುತ್ತದೆ. ನಿಧಾನ ಗತಿಯ ಚಯಾಪಚಯದಿಂದ ದೇಹವು ಸಕ್ಕರೆ ಹಾಗೂ ಕೊಬ್ಬಿನ ಅಂಶಗಳನ್ನು ಕರಗಿಸಲು ಸಾಧ್ಯವಾಗುವುದಿಲ್ಲ. ಇದರಿಂದ ತೂಕ ಹೆಚ್ಚಾಗುತ್ತಲೇ ಹೋಗುವ ಸಾಧ್ಯತೆ ಇರುತ್ತದೆ. ಆದರೆ ಇಂಥ ಸಮಸ್ಯೆಗಳಿಗೆ ಜೀರಿಗೆ ಉತ್ತಮ ಔಷಧಿಯಾಗಿದೆ ಎಂಬುದು ವೈಜ್ಞಾನಿಕ ಅಧ್ಯಯನಗಳಿಂದ ದೃಢಪಟ್ಟಿದೆ.


ನಿಯಮಿತವಾಗಿ ಜೀರಿಗೆ ನೀರು ಸೇವಿಸಿದವರಲ್ಲಿ ದೇಹದ ಚಯಾಪ ಚಯ ಪ್ರಕ್ರಿಯೆ ಸುಧಾರಿಸಿ, ಲಿಪಿಡ್ ಸಂಖ್ಯೆಯಲ್ಲಿ ಸಮತೋಲನ ಕಂಡು ಬಂದಿದೆ. ಅಲ್ಲದೆ ಅತಿತೂಕ ಹೊಂದಿದವರಲ್ಲಿ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಕಡಿಮೆಯಾಗಿರುವುದು ಸಹ ಸಾಬೀತಾಗಿದೆ. ಜೀರ್ಣಕ್ರಿಯೆಗೆ ಒಳ್ಳೆಯದು ದೇಹದಲ್ಲಿನ ಜೀರ್ಣಕ್ರಿಯೆ ಉತ್ತಮವಾಗಿ ದ್ದರೆ ಮಾತ್ರ ವ್ಯಕ್ತಿ ಆರೋಗ್ಯದಿಂದಿರಲು ಸಾಧ್ಯ. ಜೀರಿಗೆ ನೀರು ಸೇವನೆಯಿಂದ ಕರುಳಿನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಸಹಜವಾಗಿಯೇ ಸುಧಾರಿಸುತ್ತದೆ. ಉತ್ತಮ ಜೀರ್ಣ ಕ್ರಿಯೆಯಿಂದ ಚಯಾಪಚಯ ಕ್ರಿಯೆ ಸುಸೂತ್ರವಾಗಿ ದೇಹದಲ್ಲಿನ ಹೆಚ್ಚುವರಿ ಕೊಬ್ಬು ನಿವಾರಣೆಗೆ ಇದು ಸಹಕಾರಿಯಾಗು ತ್ತದೆ. ಜೀರ್ಣಕ್ರಿಯೆಯ ಎಂಝೈಮ್ಗಳನ್ನು ಉತ್ತೇಜಿಸುವ ಗುಣ ಹೊಂದಿರುವ ಜೀರಿಗೆ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ.

ಕೊಲೆಸ್ಟ್ರಾಲ್ ತಡೆಗಟ್ಟಲು ಸಹಕಾರಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ ಜೀರಿಗೆ ನೀರು ಸೇವನೆಯಿಂದ ಇಂಥ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ಹೋಗಲಾಡಿಸಬಹುದು. ಅಲ್ಲದೆ ದೇಹಕ್ಕೆ ಬೇಕಾದ ಉತ್ತಮ ಕೊಲೆಸ್ಟರಾಲ್ ಅಂಶಗಳ ಉತ್ಪಾದನೆಯನ್ನು ಜೀರಿಗೆ ಹೆಚ್ಚಿಸುತ್ತದೆ. ಇದರಿಂದ ಸೊಂಟದ ಸುತ್ತ ಶೇಖರವಾಗಿರುವ ಕೆಟ್ಟ ಫ್ಯಾಟ್ ಅನ್ನು ನಿವಾರಿಸಿ ಆರೋಗ್ಯವಂತ ರಾಗಲು ಸಹಾಯಕವಾಗುತ್ತದೆ.

ದೇಹದಲ್ಲಿ ವಿಷಕಾರಿ ಅಂಶಗಳ ನಿವಾರಣೆ ನಾವು ಬದುಕುವ ಪರಿಸರ ದಲ್ಲಿ ಹಲವಾರು ಕಡೆ ವಿಷಕಾರಿ ಅಂಶಗಳು ಇದ್ದೇ ಇರುತ್ತವೆ. ಉಸಿರಾಡುವ ಗಾಳಿ, ಕುಳಿತುಕೊಳ್ಳುವ ಕುರ್ಚಿ ಅಥವಾ ಕೆಲಸದ ಮೇಜು ಹೀಗೆ ಎಲ್ಲಿ ಬೇಕಾದರೂ ಕೀಟಾಣುಗಳು ಇರಬಹುದು. ಅನಾರೋಗ್ಯಕರ ಜೀವನ ಶೈಲಿಯಿಂದ ಇಂಥ ವಿಷಕಾರಿ ಅಂಶಗಳು ದೇಹದಲ್ಲಿ ಶೇಖರಣೆಯಾಗುವ ಸಾಧ್ಯತೆಗಳಿರುತ್ತವೆ. ಈ ವಿಷಕಾರಿ ಅಂಶಗಳಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಜೊತೆಗೆ ಅಜೀರ್ಣತೆ ಉಂಟಾಗಿ ಬೇಡವಾದ ಕೊಬ್ಬಿನಂಶ ಹೆಚ್ಚಳವಾಗುತ್ತದೆ. ಆದರೆ ಜೀರಿಗೆಯ ನೀರು ಸೇವನೆಯಿಂದ ದೇಹದಲ್ಲಿನ ವಿಷಕಾರಿ ಅಂಶ ಗಳನ್ನು ಹೊರಹಾಕಿ ಆರೋಗ್ಯಕರ ಜೀವನ ನಮ್ಮದಾಗಿಸಿ ಕೊಳ್ಳಲು ಸಹಕಾರಿಯಾಗುತ್ತದೆ.

Leave A Reply

Your email address will not be published.