ಮೊಬೈಲ್ ಪೋನ್ ಖರೀದಿಗಾಗಿ 4 ಲಕ್ಷ ರೂ. ಕದ್ದ ಬಾಲಕ !

0

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ಮೇಲಿನ ವ್ಯಾಮೋಹ ಹೆಚ್ಚಾಗುತ್ತಿದೆ. ಬಹುತೇಕ ಪೋಷಕರು ಮಕ್ಕಳಿಗೆ ದುಬಾರಿ ಸ್ಮಾರ್ಟ್ ಪೋನ್ ಗಳನ್ನು ನೀಡುತ್ತಿದ್ದಾರೆ. ಇಲ್ಲೋರ್ವ ಅಪ್ರಾಪ್ತ ಬಾಲಕನೋರ್ವ ಸ್ನೇಹಿತರಂತೆ ತಾನು ದುಬಾರಿ ಬೆಲೆಯ ಸ್ಮಾರ್ಟ್ ಪೋನ್ ಖರೀದಿಸುವ ಸಲುವಾಗಿ ಖತರ್ನಾಕ್ ಕೆಲಸ ಮಾಡಿದ್ದಾರೆ. ಸ್ಮಾರ್ಟ್ ಪೋನ್ ಖರೀದಿಸಲು ಬಾಲಕ ಬರೋಬ್ಬರಿ 4 ಲಕ್ಷ ರೂಪಾಯಿ ಕಳವು ಮಾಡಿ ಸಿಕ್ಕಿ ಬಿದ್ದಿದ್ದಾರೆ.

ಈ ಘಟನೆ ನಡೆದಿರೋದು ಬೆಂಗಳೂರಿನಲ್ಲಿ. ಬಾಲಕನ ಸ್ನೇಹಿತರ ಬಳಿಯಲ್ಲಿ ದುಬಾರಿ ಸ್ಮಾರ್ಟ್ ಪೋನ್ ಗಳಿತ್ತು. ಅಲ್ಲದೇ ಅವರೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದರು. ಸ್ನೇಹಿತರಂತೆ ತಾನೂ ಕೂಡ ದುಬಾರಿ ಬೆಲೆಯ ಮೊಬೈಲ್ ಖರೀದಿಸೋದಕ್ಕೆ ಬಾಲಕ ಪ್ಲ್ಯಾನ್ ಮಾಡಿದ್ದಾರೆ.

ತನ್ನ ಬಳಿ ಅಷ್ಟೊಂದು ಹಣ ಇಲ್ಲದಿರೋದ್ರಿಂದಾಗಿ ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್ ಮಾರ್ಕ್ ರಸ್ತೆಯ ನಾಲ್ಕು ಅಂಗಡಿಗಳ ಶೆಟರ್ ಮುರಿದು ಬಾಲಕ ಕಳ್ಳತನ ಮಾಡಿದ್ದಾನೆ. ಒಂದು ಅಂಗಡಿಯಲ್ಲಿ ನಾಲ್ಕು ಸಾವಿರ, ಮತ್ತೊಂದು ಅಂಗಡಿಯಲ್ಲಿ 4 ಲಕ್ಷ ರೂ. ಎಗರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಅಂಗಡಿಗಳಲ್ಲಿ ಕಳವು ನಡೆದಿರುವುದು ಅರಿವಿಗೆ ಬರುತ್ತಿದ್ದಂತೆಯೇ ಅಂಗಡಿಗಳ ಮಾಲೀಕರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ವಿಡಿಯೋ ದೃಶ್ಯಾವಳಿಗಳ ಮೂಲಕ ಬಾಲಕನನ್ನು ಪೊಲೀಸರು ಬಂಧಿಸಿದ್ದು, ಬಾಲಮಂದಿರಕ್ಕೆ ಶಿಫ್ಟ್ ಮಾಡಿದ್ದಾರೆ. ಒಟ್ಟಿನಲ್ಲಿ ಮಕ್ಕಳ ಕೈಗೆ ಮೊಬೈಲ್ ನೀಡುವ ಮುನ್ನ ಪೋಷಕರು ಎಚ್ಚರವಹಿಸೋದು ಅಗತ್ಯ.

Leave A Reply

Your email address will not be published.