rape accused:‘ಅತ್ಯಾಚಾರ ಸಂತ್ರಸ್ತೆಯನ್ನು ಒಂದು ವರ್ಷದೊಳಗಾಗಿ ಮದುವೆಯಾಗಬೇಕು’ : ವಿಚಿತ್ರ ಷರತ್ತು ವಿಧಿಸಿ ಜಾಮೀನು ನೀಡಿದ ಹೈಕೋರ್ಟ್​

ಮುಂಬೈ : rape accused : ಅತ್ಯಾಚಾರ ಪ್ರಕರಣವೊಂದರಲ್ಲಿ ಬಾಂಬೆ ಹೈಕೋರ್ಟ್​ ವಿಭಿನ್ನ ಷರತ್ತನ್ನು ವಿಧಿಸಿ ಅತ್ಯಾಚಾರ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದು ಇದೀಗ ಈ ತೀರ್ಪು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈತ ಅತ್ಯಾಚಾರವೆಸಗಿದ ಮಹಿಳೆಯನ್ನು ಮದುವೆಯಾಗಬೇಕು ಹಾಗೂ ಆಕೆ ಪ್ರಸ್ತುತ ನಾಪತ್ತೆಯಾಗಿದ್ದು ಆಕೆ ಒಂದು ವರ್ಷದ ಒಳಗಾಗಿ ಪತ್ತೆಯಾದಲ್ಲಿ ಆಕೆಯನ್ನು ಮದುವೆಯಾಗಬೇಕು ಎಂದು ನ್ಯಾಯಪೀಠ ಹೇಳಿದೆ.


ಆದರೆ ಒಂದು ವರ್ಷದ ಬಳಿಕ ಆಕೆಯು ಪತ್ತೆಯಾದಲ್ಲಿ ಆಕೆಯನ್ನು ಮದುವೆಯಾಗಬೇಕು ಎಂಬ ಇಚ್ಛೆಗೆ ಪುರುಷನು ಬದ್ಧನಾಗಿರಬೇಕು ಎಂದು ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಭಾರತಿ ಹೆಚ್​​ ಡಾಂಗ್ರೆ ನೇತೃತ್ವದ ಏಕಸದಸ್ಯ ಪೀಠವು ಅಕ್ಟೋಬರ್​ 12ರಂದು ಈ ರೀತಿಯ ಆದೇಶವನ್ನು ನೀಡಿದೆ. ಸಂತ್ರಸ್ತ ಮಹಿಳೆ 22 ವರ್ಷ ಪ್ರಾಯದವಳಾಗಿದ್ದು ಈಕೆ ಅತ್ಯಾಚಾರಿಯ ಜೊತೆಯಲ್ಲಿ ಒಮ್ಮತದ ಸಂಬಂಧವನ್ನು ಹೊಂದಿದ್ದಳು. ಆದರೆ ಆಕೆ ಗರ್ಭಿಣಿಯಾಗಿದ್ದಾಳೆ ಎಂಬ ವಿಚಾರ ತಿಳಿದ ಬಳಿಕ ಆಕೆಯನ್ನು ಆತ ದೂರವಿಡಲು ಆರಂಭಿಸಿದ್ದ. ಇದಾದ ಬಳಿಕ ಸಂತ್ರಸ್ತ ಮಹಿಳೆಯು ಅತ್ಯಾಚಾರ ಹಾಗೂ ವಂಚನೆ ಪ್ರಕರಣವನ್ನು ಆರೋಪಿಯ ಮೇಳೆ ದಾಖಲಿಸಿದ್ದಳು.


ಫೆಬ್ರವರಿ 2020ರಲ್ಲಿ ಪೊಲೀಸರಿಗೆ ಸಂತ್ರಸ್ತೆಯು ದೂರನ್ನು ದಾಖಲಿಸಿದ್ದಳು. ಆರೋಪಿಯು ತನ್ನ ನೆರೆಮನೆಯವನೇ ಆದ ಕಾರಣ ನನಗೆ ಆತನ ಪರಿಚಯವಿತ್ತು. ಆತ ನನ್ನ ಸಾಮಿಪ್ಯವನ್ನು ಬಳಸಿಕೊಂಡಿದ್ದಾನೆ. ನಾವಿಬ್ಬರು ಮದುವೆಯಾಗಲು ನಿರ್ಧರಿಸಿದ್ದೆವು.ಇದಕ್ಕೆ ನಮ್ಮ ಇಬ್ಬರ ಕುಟುಂಬದಿಂದಲೂ ಯಾವುದೇ ವಿರೋಧ ಇರಲಿಲ್ಲ. ಆರೋಪಿಯು ನನ್ನೊಡನೆ ಐದರಿಂದ ಆರು ಬಾರಿ ದೈಹಿಕ ಸಂಬಂಧವನ್ನು ಬೆಳೆಸಿದ್ದಾನೆ. ಆತ ನನಗೆ ಮದುವೆಯಾಗುವುದಾಗಿ ನಂಬಿಸಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು.


2019ರ ಅಕ್ಟೋಬರ್​ ತಿಂಗಳಲ್ಲಿ ತಾನು ಆರು ತಿಂಗಳ ಗರ್ಭಿಣಿ ಎಂಬ ವಿಚಾರ ತಿಳಿದ ಬಳಿಕ ಆರೋಪಿಯ ಬಳಿ ಹೇಳಿಕೊಂಡಿದ್ದಳು. ಈ ವಿಚಾರ ಅರಿತ ಬಳಿಕ ಆರೋಪಿಯು ಸಂತ್ರಸ್ತೆಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದ. ಅಲ್ಲದೇ ಮದುವೆಯಾಗಲೂ ಕೂಡ ನಿರಾಕರಿಸಿದ್ದ. ಮಹಿಳೆಯು ತಾನು ಗರ್ಭಿಣಿಯಾದ ವಿಚಾರವನ್ನು ಮನೆಯಲ್ಲಿ ಹೇಳಿಕೊಳ್ಳಲು ಇಚ್ಛಿಸದೇ ಮನೆಯನ್ನು ತೊರೆದಿದ್ದಳು. 2020ರ ಜನವರಿ 27ರಂದು ಆಕೆಯು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು ಜನವರಿ 30ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಕಣ್ಮರೆಯಾಗಿದ್ದಳು.

ಇದನ್ನು ಓದಿ : Caffeine Cause Acne : ಕೆಫಿನ್‌ ನಿಂದ ಮೊಡವೆ ಹೆಚ್ಚಾಗುತ್ತದೆಯೇ; ತಜ್ಞರು ಹೇಳುವುದಾದರೂ ಏನು….

ಇದನ್ನೂ ಓದಿ : child complaints about his mother : ನನ್ನ ತಾಯಿಯನ್ನ ಜೈಲಿಗೆ ಹಾಕಿ.. ಪೊಲೀಸರಿಗೆ 3 ವರ್ಷದ ಪುಟಾಣಿ ದೂರು.. ಕಂಪ್ಲೇಂಟ್ ಗೆ ಕಾರಣವೇನು ಗೊತ್ತಾ

Bombay HC grants bail to rape accused, asks him to marry victim if traced within a year

Comments are closed.