Cyclone Sitrang : ದೀಪಾವಳಿ ಬೆನ್ನಲ್ಲೇ ಅಪ್ಪಳಿಸಿದ ಸಿತ್ರಾಂಗ್‌ ಚಂಡಮಾರುತ ; 7 ಮಂದಿ ಬಲಿ

ನವದೆಹಲಿ : (Cyclone Sitrang) ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಸಿತ್ರಾಂಗ್‌ ಚಂಡಮಾರುತ ಇದೀಗ ಬಾಂಗ್ಲಾದೇಶದ ಕಡಲತೀರಕ್ಕೆ ಸೋಮವಾರ ರಾತ್ರಿ ನಸುಕಿನ ಅವಧಿಯಲ್ಲಿ ಅಪ್ಪಳಿಸಿದ್ದು, ಬಾಂಗ್ಲಾ ದೇಶದಲ್ಲಿ ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಲಿ ಪಡೆದಿದೆ. ಚಂಡ ಮಾರುತದ(Cyclone Sitrang) ಅಬ್ಬರಕ್ಕೆ ಕಟ್ಟಡಗಳಿಗೆ ಹಾನಿ ಉಂಟಾಗಿದ್ದು, ಒಂದೇ ಕುಟುಂಬದ ಮೂವರು ಕಟ್ಟಡ ಕುಸಿತದಲ್ಲಿ ಮೃತಪಟ್ಟಿದ್ದಾರೆ.

ಬಾಂಗ್ಲಾದೇಶದಲ್ಲಿ ಮಾತ್ರವಲ್ಲದೆ ದೇಶದ ಹಲವೆಡೆಯಲ್ಲಿ ಅನಾಹುತಗಳು ಸಂಭವಿಸಿದ್ದು, ಚಂಡಮಾರುತ(Cyclone Sitrang)ದಿಂದ ಸಾವನ್ನಪ್ಪಿರುವವರ ಸಂಖ್ಯೆ 7ಕ್ಕೆ ಏರಿದೆ. ಭಾರೀ ಮಳೆ ಮತ್ತು ವಿನಾಶಕಾರಿಯಂತಹ ಗಾಳಿಯ ಜೊತೆಗೆ ಚಂಡಮಾರುತ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ್ದು, ಸಿತ್ರಾಂಗ್‌ ಚಂಡಮಾರುತ(Cyclone Sitrang) ಈ ರೀತಿಯಾಗಿ ಹಾನಿಯುಂಟು ಮಾಡುವ ನಿರೀಕ್ಷೆ ಬಾಂಗ್ಲಾದೇಶದ ಸರ್ಕಾರಕ್ಕೆ ಇರಲಿಲ್ಲ. ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಸಿತ್ರಾಂಗ್‌ ಚಂಡಮಾರುತವು ಪ್ರತಿ ಗಂಟೆಗೆ 28 ಕಿ. ಮೀ. ವೇಗದಲ್ಲಿ ಚಲಿಸುತ್ತಿದ್ದು, ಟಿಕೋನಾ ದ್ವೀಪ ಮತ್ತು ಸಂದ್ವೀಪ್‌ ನಡುವೆ ಚಂಡಮಾರುತವು ಭೂಸ್ಪರ್ಷ ಮಾಡಿದ್ದು, ಬಿರುಗಾಳಿಯ ಸಹಿತ ಭಾರೀ ಮಳೆಯಾಗುತ್ತಿದೆ .

ಢಾಕಾ , ಕುಮಿಲ್ಲಾ ದೌಲತ್ಖಾನ್‌ ನಲ್ಲಿನ ನಾಗಲ್‌ ಕೋಟ್‌ , ಭೋಲಾದಲ್ಲಿರುವ ಚಾರ್ಫೆಸನ್‌ ಮತ್ತು ನರೈಲ್‌ ನ ಲೋಹಾನಗರದಲ್ಲಿ ಚಂಡಮಾರುತವು ಅಪ್ಪಳಿಸಿದ್ದು , ಅನಾಹುತಗಳು ಸಂಭವಿಸಿವೆ . ಚಂಡಮಾರುತದಿಂದ ಹೆಚ್ಚಾದ ಸಾವುನೋವುಗಳು ವರಧಿಯಾದ ನಂತರ ಅಗ್ನಿಶಾಮಕ ಮತ್ತು ನಾಗರಿಕ ರಾಕ್ಷಣಾ ಇಲಾಖೆಯ ಮೇಲ್ವಿಚಾರಣಾ ಕೋಶವೊಂದನ್ನು ಸರ್ಕಾರವು ರಚಿಸಿ , ತ್ವರಿತ ಪರಿಹಾರ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಸಿತ್ರಾಂಗ್‌ ಚಂಡಮಾರುತದಿಂದ ಉಂಟಾದ ಅನಾಹುತದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಬಾಂಗ್ಲಾದೇಶದ ಕರಾವಳಿ ಭಾಗದಿಂದ ಸಾವಿರಾರು ಜನರು ಮತ್ತು ಜಾನುವಾರುಗಳನ್ನು ಚಂಡಮಾರುತ ಆಶ್ರಯ ತಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ .

ಇದನ್ನೂ ಓದಿ : Surya Grahan 2022 India : ಇಂದು ಕೇತುಗ್ರಸ್ತ ಸೂರ್ಯಗ್ರಹಣ: ಎಲ್ಲೆಲ್ಲಾ ಗೋಚರ, ಏನು ಮಾಡಬೇಕು ? ಏನು ಮಾಡಬಾರದು ?

ಬಾಂಗ್ಲಾದ ಮತ್ತೊಂದು ಪ್ರಮುಖ ನಗರ ಕಾಕ್ಸ್‌ಬಾಜಾರ್‌ ನಿಂದ 28,155 ಜನರು ಮತ್ತು 2,736 ಜಾನುವಾರುಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತದ ಪ್ರಭಾವ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, 576 ಆಶ್ರಯ ತಾಣಗಳನ್ನು ಸಿದ್ದಪಡಿಸಲಾಗಿದೆ ಎಂದು ಢಾಕಾ ಟ್ರಿಬ್ಯೂನ್‌ ವರದಿಯನ್ನು ನೀಡಿದೆ .

ಇದನ್ನೂ ಓದಿ : Horoscope Today : ಹೇಗಿದೆ ಮಂಗಳವಾರದ ದಿನಭವಿಷ್ಯ (25.10.2022)

ತರ್ತು ಸಂದರ್ಭಗಳಲ್ಲಿ ನೆರವು ಒದಗಿಸಲು 104 ವೈದ್ಯಕೀಯ ತಂಡಗಳು , 323 ಟನ್‌ ಅಕ್ಕಿ , 1,198 ಒಣ ಆಹಾರದ ಪ್ಯಾಕೆಟ್‌ ಗಳು , ಕಾರ್ಟನ್‌ ಒಣ ರೊಟ್ಟಿಗಳು , ಬಿಸ್ಕತ್ತು ಗಳು ಹಾಗೂ ಎಂಟು ಲಕ್ಷ ಟಾಕಾ ( ಬಾಂಗ್ಲಾ ಕರೆನ್ಸಿ ) ಯನ್ನು ಜನರಿಗಾಗಿ ಸಂಗ್ರಹಿಸಲಾಗಿದೆ.

ಇದನ್ನೂ ಓದಿ : Kantara Copyright Trouble : ಕಾಂತಾರ ವರಾಹಂ ರೂಪಂ ಹಾಡಿಗೆ ಕಾಪಿರೈಟ್ ಸಂಕಷ್ಟ: ಕಾನೂನು ಸಮರಕ್ಕೆ ಮುಂದಾದ ತೈಕುಡಂ ಬ್ರಿಗೇಡ್

ಚಂಡಮಾರುತದ ಕುರಿತಾಗಿ, “ಅಗತ್ಯ ಸಂದರ್ಭಗಳಲ್ಲಿ ಅನುಕೂಲವಾಗುವಂತೆ ಶಿಕ್ಷಣ ಸಂಸ್ಥೆಗಳ ಕಟ್ಟಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದ್ದು, ಜನರು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸ ಚುರುಕಾಗಿ ನಡೆಯುತ್ತಿದೆ. ” ಎಂದು ಕಾಕ್ಸ್‌ ಬಜಾರ್‌ ಜಿಲ್ಲಾಧಿಕಾರಿ ಮಾಮುನುರ್‌ ರಶೀದ್‌ ಅವರು ತಿಳಿಸಿದ್ದಾರೆ .

(Cyclone Sitrang) Cyclone Sitrang, which has arisen in the Bay of Bengal, has hit the coast of Bangladesh in the wee hours of Monday night, killing a total of seven people, including in Bangladesh. Buildings were damaged due to Cyclone Sitrang and three members of the same family died in the collapse of the building.

Comments are closed.