Diwali Festival 2022 : ದೀಪಾವಳಿ ಜೂಜಾಟ : 7 ಮಹಿಳೆಯರು ಸೇರಿ 29 ಮಂದಿ ಅರೆಸ್ಟ್, 58 ಲಕ್ಷ ರೂ.ವಶಕ್ಕೆ

ನವದೆಹಲಿ : ದೀಪಾವಳಿಯ(Diwali Festival 2022) ಹಿನ್ನೆಲೆಯಲ್ಲಿ ಜೂಜಾಟವಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಹಿಳೆಯರು ಸೇರಿದಂತೆ ಒಟ್ಟು 29 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯ ಪಂಜಾಬಿ ಬಾಗ್‌ನ ಕ್ಲಬ್ ರಸ್ತೆಯಲ್ಲಿರುವ ಹೋಟೆಲ್ ಸಿಟಿ ವೆಸ್ಟ್ ಎಂಡ್‌ನಲ್ಲಿ ನಡೆದಿದೆ. ಬಂಧಿತ ಆರೋಪಿಗಳಿಂದ 58 ಲಕ್ಷ ರೂ.ಹಣವನ್ನು ವಶಕ್ಕೆ ಪಡೆಯಲಾಗಿದೆ.

ಡಿಸಿಪಿ ಘನಶ್ಯಾಮ್ ಬನ್ಸಾಲ್, ದೀಪಾವಳಿ ಸಂದರ್ಭದಲ್ಲಿ ಜೂಜಾಟದ ನಿದರ್ಶನಗಳನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ವರ್ಷದಂತೆ, ಎಲ್ಲಾ ಎಸ್‌ಎಚ್‌ಒಗಳು ಮತ್ತು ಕಾರ್ಯಾಚರಣೆ ತಂಡಗಳಿಗೆ ಅಂತಹ ಚಟುವಟಿಕೆಗಳನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದಿದ್ದಾರೆ.

ಪಂಜಾಬಿ ಬಾಗ್‌ನ ಕ್ಲಬ್ ರೋಡ್‌ನಲ್ಲಿರುವ ಹೋಟೆಲ್ ಸಿಟಿ ವೆಸ್ಟ್ ಎಂಡ್‌ನಲ್ಲಿ ದೊಡ್ಡ ಪ್ರಮಾಣದ ಜೂಜಾಟ ನಡೆಯುತ್ತಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆಯಲ್ಲಿ ಹೋಟೆಲ್ ನ ವಿವಿಧ ಟೇಬಲ್ ಗಳಲ್ಲಿ ಜೂಜಾಟವಾಡುತ್ತಿದ್ದ 29 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಕಾರ್ಡ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : Whatsapp Diwali 2022 Stickers : ವಾಟ್ಸಾಪ್ ಮೂಲಕ ದೀಪಾವಳಿಯ ಶುಭಾಶಯ:ಸ್ಟಿಕ್ಕರ್ ಪ್ಯಾಕ್ ಹೀಗೆ ಡೌನ್‌ಲೋಡ್ ಮಾಡಿ

ಇದನ್ನೂ ಓದಿ : Diwali festival 2022: ಉತ್ತರ ಕನ್ನಡ ಕವಡೀಕೆರೆಯಲ್ಲಿ ಗಂಗಾಷ್ಠಮಿ ಪೂಜೆ : ದೀಪಾವಳಿಯಂದು ನಡೆಯುತ್ತೆ ವಿಶಿಷ್ಟ ಆಚರಣೆ

ಇದನ್ನೂ ಓದಿ : Diwali Laxmi Puja 2022 : ದೀಪಾವಳಿಗೆ ಸೂರ್ಯ ಗ್ರಹಣದ ಕರಿನೆರಳು : ಲಕ್ಷ್ಮೀ ಪೂಜೆ ಮಾಡುವುದಾದರೂ ಎಂದು

ಇದನ್ನೂ ಓದಿ : Diwali 2022 : ಈ ದೀಪಾವಳಿಗೆ ನಿಮ್ಮ ಮನೆಯನ್ನು ಹೀಗೆ ಸಿಂಗರಿಸಿ ; ಇವು ಬಜೆಟ್‌- ಫ್ರೆಂಡ್ಲಿ ಐಡಿಯಾಗಳು

ಜೂಜಾಟವಾಡಲು ಪ್ರತೀ ವ್ಯಕ್ತಿಯಿಂದಲೂ 2,500 ರೂ ಪ್ರವೇಶ ಶುಲ್ಕವನ್ನು ಪಡೆದು ಹೋಟೆಲ್ ಸಿಬ್ಬಂದಿಗಳು ಅವಕಾಶವನ್ನು ಕಲ್ಪಿಸಿದ್ದರು. ಅಲ್ಲದೇ ಜೂಟಾಟವಾಡುತ್ತಿದ್ದವರಿಗೆ ಜ್ಯೂಸ್, ಆಹಾರವನ್ನು ಕೂಡ ಹೋಟೆಲ್ ನಿಂದಲೇ ನೀಡಲಾಗುತ್ತಿತ್ತು. ಜೂಜಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

Diwali Festival 2022 Diwali Gambling: 29 people including 7 women arrested, Rs 58 lakh seized

Comments are closed.