soldier shot dead : ಪ್ರೇಮ ಪ್ರಕರಣದ ಕಾರಣಕ್ಕೆ ಭಾರತೀಯ ಯೋಧನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಉತ್ತರ ಪ್ರದೇಶ : soldier shot dead :ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಲಿಘರ್​ನಲ್ಲಿ ಭಾರತೀಯ ಯೋಧನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆಯೊಂದು ನಡೆದಿದೆ. ಈ ಪ್ರಕರಣ ಸಂಬಂಧ ತನಿಖೆಯನ್ನು ನಡೆಸಲು ವಿಶೇಷ ತಂಡವನ್ನು ರಚಿಸಿದ್ದೇವೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೃತ ಯೋಧನ ಪತ್ನಿಯು ನೀಡಿರುವ ಮಾಹಿತಿಯ ಪ್ರಕಾರ ಯೋಧನು ಭಾನುವಾರದಂದು ತನ್ನ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.


ಅಲಿಘಡದ ಎಸ್​ಎಸ್ಪಿ ಕಲಾನಿಧಿ ನೈತಾನಿ ನೀಡಿರುವ ಮಾಹಿತಿಯ ಪ್ರಕಾರ ಆರೋಪಿಗಳು ಭಾರತೀಯ ಯೋಧನ ಕಾರನ್ನು ಧ್ವಂಸಗೊಳಿಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಶೀಘ್ರದಲ್ಲಿಯೇ ಕಠಿಣ ಕ್ರಮವನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಭಾರತೀಯ ಯೋಧನನ್ನು ಕೊಲೆ ಮಾಡಿರುವ ಬಗ್ಗೆ ಭಾನುವಾರ ಸಂಜೆ ಸುಮಾರಿಗೆ ನಮಗೆ ಮಾಹಿತಿ ದೊರಕಿತ್ತು. ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್​ ತಂಡವನ್ನು ಕಳುಹಿಸಿಕೊಡಲಾಗಿದೆ. ಅಲಿಗಢದ ತಪ್ಪಲ್​ ಪಿಎಸ್​​ ಪ್ರದೇಶದ ರಸುಲ್​ಪುರ ಗ್ರಾಮದಲ್ಲಿ ಕೆಲವು ದುಷ್ಕರ್ಮಿಗಳು ಯೋಧನನ್ನು ಗುಂಡಿಕ್ಕಿ ಕೊಂದಿದ್ದಾರೆ. ಪ್ರೇಮ ಪ್ರಕರಣದ ಸಂಬಂಧ ಯೋಧನ ಹತ್ಯೆಯಾಗಿದೆ. ಆರೋಪಿಗಳು ಭಾರತೀಯ ಯೋಧನ ಕಾರನ್ನು ಧ್ವಂಸಗೊಳಿಸಿದ್ದಾರೆ. ನಾವು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದೇವೆ. ಈ ಸಂಬಂಧ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ಶೀಘ್ರದಲ್ಲಿಯೇ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಕಲಾನಿಧಿ ನೈತಾನಿ ಹೇಳಿದ್ದಾರೆ.

ಮೃತ ಯೋಧನ ಪತ್ನಿ ಆರುಷಿ ನೀಡಿದ ಮಾಹಿತಿಯ ಪ್ರಕಾರ ಯೋಧ ಅಕ್ಟೋಬರ್​ 21ರಿಂದ ತಮ್ಮ ಸೇವೆಯಿಂದ ರಜೆಯನ್ನು ಪಡೆದು ಮನೆಗೆ ಮರಳಿದ್ದರು ಎನ್ನಲಾಗಿದೆ. ನನ್ನ ಪತಿಯು ಅಕ್ಟೋಬರ್​ 21ರಿಂದ ಸೇವೆಯಿಂದ ರಜೆ ಪಡೆದು ಮನೆಗೆ ಬಂದಿದ್ದರು. ಬಳಿಕ ನಾವು ನನ್ನ ತವರು ಮನೆಗೆ ತೆರಳಿದ್ದೆವು. ನನ್ನ ತವರು ಮನೆಯಲ್ಲಿ ನನ್ನೊಂದಿಗೆ ಒಂದು ದಿನ ತಂಗಿದ್ದ ಪತಿಯು ಬಳಿಕ ನನ್ನನ್ನು ಅಲ್ಲಿಯೇ ಬಿಟ್ಟು ಹೊರಟಿದ್ದರು.ಸ್ವಲ್ಪ ಕೆಲಸವಿದೆ ಹೀಗಾಗಿ ಕೆಲವೇ ನಿಮಿಷಗಳಲ್ಲಿ ವಾಪಸ್​ ಬರುತ್ತೇನೆ ಎಂದು ಹೇಳಿದ್ದರು. ಆದರೆ ಅದಾದ ಬಳಿಕ ಅವರು ನನ್ನ ಫೋನ್​ ಕಾಲ್​ ರಿಸೀವ್​ ಮಾಡಿರಲಿಲ್ಲ. ಪೊಲೀಸರು ಈ ಪ್ರಕರಣವನ್ನು ಭೇದಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಆರುಷಿ ಹೇಳಿದ್ದಾರೆ.

ಇದನ್ನು ಓದಿ : Cyclone Sitrang : ದೀಪಾವಳಿ ಬೆನ್ನಲ್ಲೇ ಅಪ್ಪಳಿಸಿದ ಸಿತ್ರಾಂಗ್‌ ಚಂಡಮಾರುತ ; 7 ಮಂದಿ ಬಲಿ

ಇದನ್ನೂ ಓದಿ :Rohit Sharma gets emotional: 90 ಸಾವಿರ ಪ್ರೇಕ್ಷಕರ ಮುಂದೆ ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ರೋಹಿತ್ ಶರ್ಮಾ

UP soldier shot dead in Aligarh due to love affair, probe underway

Comments are closed.