Sharad Pawar : ಶರದ್​ಪವಾರ್​ಗೆ ಆದಾಯ ತೆರಿಗೆ ಇಲಾಖೆ ನೋಟಿಸ್​ : ಐಟಿಯಿಂದ ಲವ್​ ಲೆಟರ್​ ಬಂದಿದೆ ಎಂದ ಎನ್​ಸಿಪಿ ನಾಯಕ

ಮಹಾರಾಷ್ಟ್ರ : Sharad Pawar : ಮಹಾರಾಷ್ಟ್ರ ರಾಜಕಾರಣದಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ಗಳು ಎದುರಾಗುತ್ತಿರುವ ಬೆನ್ನಲ್ಲೇ 2004, 2009, 2014 ಮತ್ತು 2020 ರಲ್ಲಿ ಸಲ್ಲಿಸಿದ ಚುನಾವಣಾ ಅಫಿಡವಿಟ್‌ಗಳಿಗೆ ಸಂಬಂಧಿಸಿದಂತೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್​​​ಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿದೆ.


ಎನ್​ಸಿಪಿ , ಕಾಂಗ್ರೆಸ್​ ಹಾಗೂ ಶಿವಸೇನೆ ಮೈತ್ರಿಕೂಟಗಳನ್ನೊಳಗೊಂಡ ಮಹಾ ವಿಕಾಸ್​ ಅಘಾಡಿ ಸರ್ಕಾರವು ಮಹಾರಾಷ್ಟ್ರದಲ್ಲಿ ಪತನಗೊಂಡು ಏಕನಾಥ ಶಿಂಧೆ ನೇತೃತ್ವದ ಬಿಜೆಪಿ ಸರ್ಕಾರವು ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆಯನ್ನೇರಿದ ಕೇವಲ ಒಂದು ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಮಹಾರಾಷ್ಟ್ರದ 20ನೇ ಮುಖ್ಯಮಂತ್ರಿಯಾಗಿ ಏಕನಾಥ್​ ಶಿಂಧೆ ಪ್ರಮಾಣ ವಚನವನ್ನು ಸ್ವೀಕರಿಸಿದರೆ ಉಪ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​​ ಪ್ರಮಾಣ ವಚನವನ್ನು ಸ್ವೀಕರಿಸಿದರು.


ಆದಾಯ ತೆರಿಗೆ ಇಲಾಖೆಯಿಂದ ಬಂದಿರುವ ನೋಟಿಸ್​ ವಿಚಾರವಾಗಿ ಪ್ರತಿಕ್ರಿಯಿಸಿ ಮರಾಠಿಯಲ್ಲಿ ಟ್ವೀಟ್​ ಮಾಡಿರುವ ಎನ್​ಸಿಪಿ ನಾಯಕ ಶರದ್​ ಪವಾರ್​, ಇಂದು ಜಾರಿ ನಿರ್ದೇಶನಾಲಯ ಹಾಗೂ ಕೇಂದ್ರೀಯ ಏಜೆನ್ಸಿಗಳನ್ನು ಬಳಕೆ ಮಾಡಿಕೊಂಡು ಏನೆಲ್ಲ ಮಾಡಲಾಗ್ತಿದೆ ಎಂಬುದು ಕಣ್ಮುಂದೆ ಗೋಚರವಾಗುತ್ತಿದೆ. ಅನೇಕ ಶಾಸಕರಿಗೆ ಇಡಿ ವಿಚಾರಣೆಯ ನೋಟಿಸ್​ಗಳು ಬಂದಿವೆ.ಐದು ವರ್ಷಗಳ ಹಿಂದೆ ನಮಗೆ ಇಡಿ ಎಂಬ ಹೆಸರೇ ಗೊತ್ತಿರಲಿಲ್ಲ. ಆದರೆ ಇದೀಗ ಹೊಸ ವಿಧಾನವೊಂದು ಆರಂಭಗೊಂಡಿದೆ. ಈ ಇಡಿ ಈಗ ಎಷ್ಟರ ಮಟ್ಟಿಗೆ ಫೇಮಸ್​ ಆಗಿದೆಯೆಂದರೆ ಹಳ್ಳಿಗಳಲ್ಲಿ ಜನರು ಕೂಡ ನಿಮ್ಮ ಹಿಂದೆ ಇಡಿ ಇದೆ ಎಂದು ನಮ್ಮನ್ನು ಆಡಿಕೊಳ್ಳುತ್ತಿದ್ದಾರೆ.

ವಿಭಿನ್ನ ರಾಜಕೀಯ ದೃಷ್ಟಿಕೋನ ಉಳ್ಳಂತಹ ಜನರು ಈ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ. ನನಗೆ ಆದಾಯ ತೆರಿಗೆ ಇಲಾಖೆಯಿಂದ ಪ್ರೇಮ ಪತ್ರ ಬಂದಿದೆ. ಅವರು ಈಗ 2004 ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಾಗ ಅಫಿಡವಿಟ್‌ನಲ್ಲಿರುವ ಮಾಹಿತಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ” ಎಂದು ಶರದ್​ ಪವಾರ್ ಬರೆದುಕೊಂಡಿದ್ದಾರೆ .


2009ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದೆ, 2009ರ ನಂತರ 2014ರ ರಾಜ್ಯಸಭಾ ಚುನಾವಣೆಗೆ ನಿಂತಿದ್ದೆ, ಈಗ 2020ರ ರಾಜ್ಯಸಭಾ ಚುನಾವಣೆಯ ಅಫಿಡವಿಟ್‌ಗೆ ಸಂಬಂಧಿಸಿದಂತೆ ನೋಟಿಸ್‌ ಕೂಡ ಬಂದಿದೆ. ಅದೃಷ್ಟವಶಾತ್‌ ನನಗೆ ಸಿಕ್ಕಿದೆ ಎಂದಿದ್ದಾರೆ .

ಇದನ್ನು ಓದಿ : Nupur Sharma : ದೇಶದಲ್ಲಿ ನಡೆಯುತ್ತಿರುವ ಕೋಲಾಹಲಗಳಿಗೆ ನೂಪುರ್​ ಶರ್ಮಾ ಕಾರಣ : ಸುಪ್ರೀಂಕೋರ್ಟ್ ಅಸಮಾಧಾನ

ಇದನ್ನೂ ಓದಿ : ಬೆನ್ನು ಬಿಡದೆ ಫಾಲೋ ಮಾಡಿದ ಕ್ಯಾಮರಾಮೆನ್‌ಗೆ ಸೀರಿಯಸ್ ಲುಕ್ ಕೊಟ್ಟ ಕಿಂಗ್ ಕೊಹ್ಲಿ

Day after Shinde’s swearing-in, Sharad Pawar says ‘received love letter from Income Tax dept’

Comments are closed.